For Quick Alerts
  ALLOW NOTIFICATIONS  
  For Daily Alerts

  ಕಿಚ್ಚನ 'ಫ್ಯಾಂಟಮ್' ಲೋಕದಲ್ಲಿ ಕ್ರಿಕೆಟ್ ಆರ್ಭಟ

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ 'ಫ್ಯಾಂಟಮ್' ತಂಡ ಸದ್ಯ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದೆ. ಲಾಕ್ ಡೌನ್ ಬಳಿಕ ಸತತ ಚಿತ್ರೀಕರಣದಲ್ಲಿ ನಿರತರಾಗಿರುವ ಸುದೀಪ್ ಮತ್ತು ತಂಡ ಭಾನುವಾರ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಜಾಲಿ ಮೂಡ್ ಹೋಗಿದ್ದರು.

  ಹೌದು, ಚಿಕ್ಕ ಬ್ರೇಕ್ ನಲ್ಲಿ ಸುದೀಪ್ ತಂಡದ ಜೊತೆ ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ. ಶೂಟಿಂಗ್ ನಿಂದ ಪುಟ್ಟ ವಿರಾಮ ಪಡೆದು ಸುದೀಪ್ ಪ್ರೀತಿಯ ಆಟ ಕ್ರಿಕೆಟ್ ಆಡುವ ಮೂಲಕ ರಿಲ್ಯಾಕ್ಸ್ ಮೂಡ್ ಗೆ ಹೋಗಿದ್ದಾರೆ. ಕಿಚ್ಚ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಆರ್‌ಸಿಬಿ vs ಕಿಂಗ್ಸ್ XI ಪಂಜಾಬ್ ಪಂದ್ಯದ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್

  ವಿಡಿಯೋ ಜೊತೆಗೆ ಸುದೀಪ್, 'ಸುತ್ತಲೂ ನಡೆಯುತ್ತಿರುವ ಎಲ್ಲಾ ಸಂಗತಿಗಳೊಂದಿಗೆ, ನಾವು ಏನನ್ನಾದರೂ ಕೇಳಲು ಕಷ್ಟವಾಗುದಿಲ್ಲ, ನಮಗೆ ಕಿರುನಗೆ ತರಿಸುವಂತಹದ್ದು, ನಮಗೆ ಶಕ್ತಯನ್ನು ನೀಡುತ್ತದೆ. ನಮ್ಮಲ್ಲಿ ಏನು ಇದಿಯೋ ಅದರಲ್ಲಿ ಏನಾದರು ಉತ್ತಮವಾದುದ್ದನ್ನು ಮಾಡಬೇಕು. ಫ್ಯಾಂಟಮ್ ತಂಡದೊಂದಿಗೆ ಇದ್ದ ಎರಡೂವರೆ ತಿಂಗಳ ಜರ್ನಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

  ಹೊಡೆದ ಶಾಟ್ ಗಳು ಕೆಟ್ಟದಾಗಿಲ್ಲ ಅಲ್ವಾ ಸ್ನೇಹಿತರೇ? ಎಂದು ಅಭಿಮಾನಿಗಳಲ್ಲಿ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಅಂದ್ಹಾಗೆ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಶೇ 60ರಷ್ಟು ಮುಕ್ತಾಯವಾಗಿದೆ. ಇನ್ನೂ 20 ದಿನಗಳ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಸುದೀಪ್ ವಿಕ್ರಾಂತ್ ರೋಣನಾಗಿ ಕಾಣಿಸಿಕೊಂಡರೆ, ನಟ ನಿರೂಪ್ ಭಂಡಾರಿ ಸಂಜು ಪಾತ್ರದಲ್ಲಿ ಮಿಂಚುತ್ತಿದ್ದಾರೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

  ಈಗಾಗಲೇ ಫ್ಯಾಂಟಮ್ ಲೋಕ ಹೇಗಿರುತ್ತೆ ಎನ್ನುವ ಚಿಕ್ಕ ಪರಿಚಯ ಮಾಡಿಸಿದೆ ಸಿನಿಮಾತಂಡ. ಚಿತ್ರದ ಪುಟ್ಟ ಝಲಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಇನ್ನು ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಚಿತ್ರಪ್ರಿಯರಲ್ಲಿ ಹೆಚ್ಚಾಗಿದೆ.

  English summary
  Actor Sudeep playing cricket at Phantom set in Hyderabad. Sudeep currently busy in Phantom movie shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X