'ಒಮ್ಮೆ ನಿಶ್ಯಬ್ದ.. ಒಮ್ಮೆ ಯುದ್ಧ' ಚಿತ್ರಕ್ಕೆ ಸಿಕ್ತು ಸುದೀಪ್ ಸಾಥ್
ಈಗಾಗಲೇ ಅನೇಕ ಹೊಸ ಚಿತ್ರತಂಡಗಳಿಗೆ ನಟ ಸುದೀಪ್ ತಮ್ಮ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ 'ಒಮ್ಮೆ ನಿಶ್ಯಬ್ದ.. ಒಮ್ಮೆ ಯುದ್ಧ' ಎಂಬ ಚಿತ್ರಕ್ಕೆ ಸಹ ಸುದೀಪ್ ತಮ್ಮ ಸಾಥ್ ನೀಡಿದ್ದಾರೆ.
'ಒಮ್ಮೆ ನಿಶ್ಯಬ್ದ.. ಒಮ್ಮೆ ಯುದ್ಧ' ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ರೇಲರ್ ವೀಕ್ಷಿಸಿ ಇಡೀ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರವನ್ನು ಶ್ರೀನಾಗ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಕನ್ನಡದಲ್ಲಿ 'ನಿತ್ಯ ಜೊತೆ ಸತ್ಯ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಮೂಡಿ ಬಂದಿತ್ತು.

ಸಂಯುಕ್ತ ಹೆಗ್ಡೆ, ಪ್ರಭು ಮುಂದ್ಕರ್, ಸುಷ್ಮಾ ಗೌಡ, ರಾಮಕೃಷ್ಣ, ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರೊಲಿಂಗ್ ಡ್ರೀಮ್ಸ್ ಎಂಟರ್ಟೈನ್ಮೆಂಟ್ ನಲ್ಲಿ ಪ್ರವೀಣ್ ರಾಜ್ ಹಾಗೂ ಸುರೇಶ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಅಂದಹಾಗೆ, ವಿಜಯ್ ಬೊಲೆನಾಥ್ ಈ ಚಿತ್ರವನ್ನು ಅರ್ಪಿಸುತ್ತಿದ್ದು, ಜೊತೆಗೆ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರಣ್ ವರಣಸಿ ಚಿತ್ರಕ್ಕೆ ಸಂಗೀತ ನೀಡಿದ್ದು, ಸದ್ಯದಲ್ಲಿಯೇ ಹಾಡುಗಳು ರಿಲೀಸ್ ಆಗಲಿದೆ.


Click it and Unblock the Notifications











