'KGF 2' ಸಾಮರ್ಥ್ಯದ ಬಗ್ಗೆ ನಟ ಸುದೀಪ್ ಹೇಳಿಕೆ!

'ಕೆಜಿಎಫ್ 2' ಸಿನಿಮಾ ಬಂದ ಮೇಲೆ, ಪ್ಯಾನ್ ಇಂಡಿಯಾ ಸಿನಿಮಾಗಳು ಎಷ್ಟರ ಮಟ್ಟಿಗೆ ಸದ್ದು ಮಾಡಬಹುದು ಎನ್ನುವುದರ ಅರಿವು ಎಲ್ಲರಿಗೂ ಆಗಿದೆ. ಕೇವಲ ರಾಜಮೌಳಿ ನಿರ್ದೇಶನದ ಸಿನಿಮಾಗಳು ಮಾತ್ರ ಅಲ್ಲ. ಬದಲಿಗೆ ಪ್ರಶಾಂತ್ ನೀಲ್ ಅಂತಹ ನಿರ್ದೇಶಕನ 3ನೇ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.

Recommended Video

ಯಶ್‌ಗೆ ವಿಶೇಷ ಬೇಡಿಗೆ ಇಟ್ಟ ಮಹಾರಾಷ್ಟ್ರ ಫ್ಯಾನ್ಸ್ | Yash Next Movie

'ಕೆಜಿಎಫ್ 2' ಸಿನಿಮಾವನ್ನು ಕನ್ನಡಿಗರು ಮತ್ತು ಕನ್ನಡ ಸಿನಿಮಾ ಮಂದಿ ಹಾಡಿ ಹೊಗಳುತ್ತಿದ್ದಾರೆ. ಆದರೆ ಈಗ ನಟ ಕಿಚ್ಚ ಸುದೀಪ್ ಕೂಡ 'ಕೆಜಿಎಫ್ 2' ಬಗ್ಗೆ ಮಾತನಾಡಿದ್ದಾರೆ. 'ಕೆಜಿಎಫ್ 2' ಸಿನಿಮಾ ಯಶಸ್ಸು ಹಾಗೂ ಬಾಲಿವುಡ್ ಬಗ್ಗೆಯೂ ಮಾತನಾಡಿದ್ದಾರೆ.

ಇತ್ತೀಚೆಗೆ ನಟ ಸುದೀಪ್ ಸಂದರ್ಶನ ಒಂದರಲ್ಲಿ ಸದ್ಯ ಸಿನಿಮಾರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಾಲಿವುಡ್, ದಕ್ಷಿಣದ ಸಿನಿಮಾರಂಗ, 'ಕೆಜಿಎಫ್ 2' ಮತ್ತು RRR ಚಿತ್ರದೆ ಬಗ್ಗೆ ಮಾತನಾಡಿದ್ದಾರೆ. ಕಿಚ್ಚ ಏನಂದ್ರು ಎನ್ನುವ ಬಗ್ಗೆ ಮುಂದೆ ಓದಿ...

ತನ್ನ ಸಾಮರ್ಥ್ಯದಿಂದ 'ಕೆಜಿಎಫ್ 2' ಗೆದ್ದಿದೆ

ತನ್ನ ಸಾಮರ್ಥ್ಯದಿಂದ 'ಕೆಜಿಎಫ್ 2' ಗೆದ್ದಿದೆ

ಬಾಲಿವುಡ್ ಮತ್ತು ಸೌತ್ ಸಿನಿಮಾಗಳ ಬಗ್ಗೆ ಸುದೀಪ್ ಅಭಿಪ್ರಾಯ ಕೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುದೀಪ್ "ಕೆಜಿಎಫ್, ಪುಷ್ಪಾ ಮತ್ತು RRR ಸಿನಿಮಾಗಳು ಅದರ ಸಾಮರ್ಥ್ಯದಿಂದ ಗೆದ್ದಿವೆ. ಈ ಚಿತ್ರಗಳು ಬಂದ ಸಮಯದಲ್ಲಿ ಬಾಲಿವುಡ್‌ನಲ್ಲಿ ಅದ್ಭುತ ಕಥೆಯನ್ನು ಹೊಂದಿದ ಸಿನಿಮಾಗಳು ಬಂದಿರಲಿಲ್ಲ ಅನಿಸುತ್ತದೆ. ಇದೆಲ್ಲ ಸಮಯದಿಂದ ಅಷ್ಟೇ ಸಾಧ್ಯ. ಆದರೆ ಬಾಲಿವುಡ್ ಸಿನಿಮಾಗಳ ಸೋಲಿಗೆ ದಕ್ಷಿಣದ ಸಿನಿಮಾಗಳು ಕಾರಣ ಎನ್ನುವುದು ಅಷ್ಟು ಸರಿಯಲ್ಲ." ಎಂದಿದ್ದಾರೆ ನಟ ಸುದೀಪ್.

ಯಾವ ಚಿತ್ರರಂಗವೂ ಬಾಗಲು ಮುಚ್ಚಿಲ್ಲ!

ಯಾವ ಚಿತ್ರರಂಗವೂ ಬಾಗಲು ಮುಚ್ಚಿಲ್ಲ!

ಇನ್ನು ಭಾರತದಲ್ಲಿ ಇರುವ ಚಿತ್ರರಂಗಗಳ ಬಗ್ಗೆ ಕಿಚ್ಚ ಮಾತನಾಡಿದ್ದಾರೆ. "ಭಾರತದಲ್ಲಿ ಚಿಕ್ಕ ಸಿನಿಮಾದಿಂದ ಹಿಡಿದು ದೊಡ್ಡ ಸಿನಿಮಾ ಇಂಡಸ್ಟ್ರಿ ಇದೆ. ಇಲ್ಲಿವರೆಗೂ ಯಾವ ಇಂಡಸ್ಟ್ರಿ ಬಾಗಿಲನ್ನು ಹಾಕಿಲ್ಲ. ಎಲ್ಲವೂ ತಮ್ಮ ಕೆಲಸವನ್ನು ಮಾಡುತ್ತಿವೆ. ಎಲ್ಲಾ ಇಂಡಸ್ಟ್ರಿಯಲ್ಲಿಯೂ ಏಳುಬೀಳುಗಳು ಇರುತ್ತೆ. ಅವೆಲ್ಲವನ್ನೂ ಮೀರಿ ಅವುಗಳು ಮತ್ತೆ ಬರುತ್ತೆ. ಅಲ್ಲಿಯೂ ಉತ್ತಮ ನಿರ್ದೇಶಕರು, ನಟರು ಮತ್ತು ಬರಹಗಾರರಿದ್ದಾರೆ."

ಸೌತ್ ಸಿನಿಮಾಗಳಿಗೆ ಬೇಕಿತ್ತು ಈ ವೇದಿಕೆ!

ಸೌತ್ ಸಿನಿಮಾಗಳಿಗೆ ಬೇಕಿತ್ತು ಈ ವೇದಿಕೆ!

ಇನ್ನು ನಟ ಸುದೀಪ್ ಸದ್ಯ ದೇಶದಾದ್ಯಂತ ಸೌತ್ ಸಿನಿಮಾಗಳಿಗೆ ಸಿಗುತ್ತಿರುವ ಮನ್ನಣೆಯ ಬಗ್ಗೆ ಮಾತನಾಡಿದ್ದಾರೆ. "ಈಗ ಆಗಿರುವ ಬೆಳವಣೆಗೆ ಅವಶ್ಯಕವಾಗಿ ಬೇಕಿತ್ತು. ಇಲ್ಲಿ ಸೌತ್ ಸಿನಿಮಾರಂಗದಲ್ಲಿ ಇರುವ ಕಲಾವಿದರು, ನಿರ್ದೇಶಕರು, ಬರಹಗಾರರಿಗೆ ಈ ರೀತಿಯಾದ ಒಂದು ವೇದಿಕೆಯ ಅವಶ್ಯಕತೆ ಇತ್ತು. ಈ ರೀತಿಯ ಥಿಯೇಟ್ರಿಕಲ್ ಎಕ್ಸ್‌ಪೋಶರ್ ಸಿಕ್ಕಿರುವುದು ಕೂಡ ಒಳ್ಳೆಯ ಬೆಳವಣಿಗೆ." ಎಂದಿದ್ದಾರೆ ನಟ ಸುದೀಪ್.

ಬಾಲಿವುಡ್ ಚಿತ್ರಗಳ ಸೋಲಿಗೆ ಸೌತ್ ಕಾರಣ ಅಲ್ಲ!

ಬಾಲಿವುಡ್ ಚಿತ್ರಗಳ ಸೋಲಿಗೆ ಸೌತ್ ಕಾರಣ ಅಲ್ಲ!

ಬಾಲಿವುಡ್‌ನಲ್ಲಿ ಸೌತ್ ಚಿತ್ರರಂಗದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಈ ಬಗ್ಗೆ ಮಾತನಾಡಿದ ನಟ ಸುದೀಪ್ "ಯಾವುದೇ ಸಿನಿಮಾ ಆಗಲಿ, ನಿರ್ದೇಶಕರಾಗಲಿ, ನಟನಾಗಲಿ ಎಲ್ಲರಿಗೂ ಒಂದಲ್ಲಾ ಒಂದು ತೊಡಕು ಇರುತ್ತೆ. ಅದನ್ನು ಬಿಟ್ಟು ಹೊರ ಬಾರದಿದ್ರೆ ನಾವು ಎಂದೂ ಭದ್ರತೆಯಿಂದ ಇರಲು ಸಾಧ್ಯವಾಗುವುದಿಲ್ಲ. ಬಾಲಿವುಡ್‌ನ 'ಭೂಲ್ ಭುಲೈಯಾ 2' ಸಿನಿಮಾ ಹಿಟ್ ಆಗಿದೆ. ಯಾವುದೋ ಕೆಲವು ಸಿನಿಮಾಗಳು ಸೋತಿವೆ ಎಂದರೆ, ಅದು ದಕ್ಷಿಣ ಸಿನಿಮಾದಿಂದ ಎಂದು ಹೇಳುವುದು ಸರಿಯಲ್ಲ. ಬಾಲಿವುಡ್ ಸಿನಿಮಾ ಸೋತಿದ್ದರಿಂದ ದಕ್ಷಿಣ ಸಿನಿಮಾ ಗೆದ್ದವು ಎಂದರೆ ಅದೂ ತಪ್ಪಾಗುತ್ತೆ". ಎಂದಿದ್ದಾರೆ ನಟ ಸುದೀಪ್.

More from Filmibeat

English summary
Actor Sudeep Says South Movies Are Not Responsible For The Defeat Of Bollywood Films And KGF 2, RRR Wins By Potential, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X