Don't Miss!
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Lifestyle
Surya Gochar 2022 : ಆ. 17ಕ್ಕೆ ಸಿಂಹದಲ್ಲಿ ಸೂರ್ಯ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ವಿಕ್ರಾಂತ್ ರೋಣ' ಟಾರ್ಗೆಟ್ 2000 ಕೋಟಿ: ಸುದೀಪ್ ಹೇಳಿಕೆ!
ಕನ್ನಡದ ಬಹುನೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ರಿಲೀಸ್ಗೆ ರೆಡಿಯಾಗಿದೆ. ಸಿನಿಮಾ ರಿಲೀಸ್ಗೆ ದಿನಗಣನೆ ಶುರುವಾಗಿದೆ. ಹಾಗಾಗಿ ಸಿನಿಮಾ ಪ್ರಚಾರ ಕಾರ್ಯವನ್ನು 'ವಿಕ್ರಾಂತ್ ರೋಣ' ಸಿನಿಮಾ ತಂಡ ಜೋರಾಗಿ ಶುರು ಮಾಡಿದೆ. ದೇಶ ಸುತ್ತಿ ಚಿತ್ರತಂಡ ಪ್ರಚಾರ ಕಾರ್ಯಯ ಮುಂದುವರೆಸಿದೆ.
ಬೆಂಗಳೂರಿನಲ್ಲಿ ಸಿನಿಮಾದ ಟ್ರೈಲರ್ ಲಾಂಚ್ ಮಾಡಿ, ಸುದ್ದಿಗೋಷ್ಟಿ ಮಾಡಿದ ಸಿನಿಮಾತಂಡ ಈಗ ಮುಂಬೈನಲ್ಲಿ ಪ್ರತ್ಯಕ್ಷವಾಗಿದೆ. ಮುಂಬೈ ಮಾಧ್ಯಮಗಳ ಜೊತೆಗೆ ನಟ ಸುದೀಪ್ ಮತ್ತು 'ವಿಕ್ರಾಂತ್ ರೋಣ' ಸಿನಿಮಾ ತಂಡ ಸುದ್ಧಿ ಗೋಷ್ಠಿ ನಡೆಸಿದೆ. ಈ ವೇಳೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಿನಿಮಾ ತಂಡ ಹಂಚಿಕೊಂಡಿದೆ.
ದ್ವಿಪಾತ್ರದಲ್ಲಿ
ಸುದೀಪ್:
'ವಿಕ್ರಾಂತ್
ರೋಣ'
ಆ
ವಿಲನ್
ಯಾರು?
ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಸಿನಿಮಾ. ದೊಡ್ಡ ಮಟ್ಟದಲ್ಲಿ ತಯಾರಾದ ಸಿನಿಮಾ, ದೊಡ್ಡ ಮಟ್ಟದಲ್ಲೇ ತೆರೆಗೆ ಬರ್ತಿದೆ. ಹಾಗಾಗಿ ಸಿನಿಮಾದ ಗಳಿಕೆ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟದೆ. ಆದರೆ ಈ ನಿರೀಕ್ಷೆಯನ್ನು ನಟ ಸುದೀಪ್ ಮತ್ತಷ್ಟು ಹೆಚ್ಚು ಮಾಡಿದ್ದಾರೆ.

ಮುಂಬೈನಲ್ಲಿ ಸುದೀಪ್ ಸುದ್ದಿಗೋಷ್ಠಿ!
ವಿಕ್ರಾಂತ್ ರೋಣ ಸಿನಿಮಾತಂಡ ಮುಂಬೈನಲ್ಲಿ ಸುದ್ದಿಗೋಷ್ಟಿ ಮಾಡಿದೆ. ಮುಂಬೈಗೆ ಸುದೀಪ್ ಅವ್ರನ್ನು ಗ್ರ್ಯಾಂಡ್ ಆಗಿ ಸ್ವಾಗತ ಮಾಡಲಾಗಿದೆ. ಮುಂಬೈನಲ್ಲೂ ಕೂಡ ಸುದೀಪ್, ಜಾಕ್ವೆಲಿನ್ ಜೊತೆಗೆ ಸೇರಿ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಲವು ಪ್ರಶ್ನೆಗಳಿಗೆ ನಟ ಸುದೀಪ್ ಉತ್ತರ ಕೊಟ್ಟಿದ್ದಾರೆ. ಈ ವೇಳೆ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡುತ್ತಾ, 2000 ಕೋಟಿ ಗಳಿಕೆ ಮಾಡುತ್ತೇನೆ ಎಂದಿದ್ದಾರೆ.
ವಿಕ್ರಾಂತ್
ರೋಣ
ಟ್ರೈಲರ್
ವಿಮರ್ಶೆ:
ಅದ್ಬುತ
ಲೋಕದ
ಅನಾವರಣ!

ಸುದೀಪ್ಗೆ ಎದುರಾದ ಸಾವಿರ ಕೋಟಿ ಪ್ರಶ್ನೆ!
ವಿಕ್ರಾಂತ್ ರೋಣ ಚಿತ್ರದ ಗಳಿಕೆಯ ಬಗ್ಗೆ ಮಾತನಾಡುತ್ತಾ ಮಾಧ್ಯಮದವರ ವತಿಯಿಂದ ಸಾವಿರ ಕೋಟಿ ಗಳಿಕೆಯ ಬಗ್ಗೆ ಪ್ರಶ್ನೆ ಎದುರಾಯಿತು. ಪ್ರಶ್ನೆ ಈ ರೀತಿ ಇದೆ. "ಕೆಜಿಎಫ್ ಸಿನಿಮಾ ಕೂಡ ಕನ್ನಡದ ಸಿನಿಮಾ. ಈ ಚಿತ್ರದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ವಿಕ್ರಾಂತ್ ರೋಣ ಸಿನಿಮಾ ಕೂಡ 1000 ಕೋಟಿ ಗಳಿಕೆ ಮಾಡುತ್ತೆ ಎಂದು ನಾವು ಅಂದುಳ್ಳ ಬಹುದೇ." ಈ ಪ್ರಶ್ನೆ ಸುದೀಪ್ ನೇರ ಉತ್ತರ ಉತ್ತರ ಕೊಟ್ಟಿದ್ದು, ಖುಷಿಯಾಗಿರಲೂ ಸಾವಿರ ಕೋಟಿನೇ ಬೇಕು ಅಂತೇನು ಇಲ್ಲ ಎಂದಿದ್ದಾರೆ.
|
2000 ಕೋಟಿ ಗಳಿಕೆ ಮಾಡುತ್ತೇನ್- ಸುದೀಪ್!
ಸಾವಿರ ಕೋಟಿ ಗಳಿಕೆ ಬಗ್ಗೆ ಮಾತನಾಡಿದ ನಟ ಸುದೀಪ್ "ನಾನು 1 ಲಕ್ಷ ರೂ. ಸಂಬಳ ತೆಗೆದು ಕೊಳ್ಳುವ ವ್ಯಕ್ತಿ ಖುಷಿಯಾಗಿರುವುದನ್ನು ನೋಡಿದ್ದೇನೆ. ಅಂಬಾನಿ ಕೂಡ ಖುಷಿಯಾಗಿ ಇರುವುದನ್ನು ನೋಡಿದ್ದೇನೆ. ಹಾಗಾಗಿ 1000 ಕೋಟಿ ವ್ಯಕ್ತಿಯ ಖುಷಿಗೆ ಕಾರಣ ಎಂದರೆ ಅದು ನನಗೆ ಗೊತ್ತಿಲ್ಲ. ಹಾಗಿದ್ದರೆ ನಾನು ಸಾವಿರ ಕೋಟಿ ಮಾಡ್ತಿನೇನೋ. ಸಕ್ಸಸ್ ಮಾತ್ರವೇ ಖುಷಿಗೆ ಕಾರಣ ಆಗಿರುವಾಗ ನಿಮ್ಮ ಈ ಪ್ರಶ್ನೆಯೇ ನನ್ನನ್ನು ಯಶಸ್ವಿಯಾಗಿಸಿದೆ." ಎಂದು ಉತ್ತರ ಕೊಟ್ಟಿದ್ದಾರೆ.
'ವಿಕ್ರಾಂತ್
ರೋಣ'
ಪ್ಯಾನ್
ಇಂಡಿಯಾ
ಟ್ರೈಲರ್
ಲಾಂಚ್:
ಸಂಪೂರ್ಣ
ಮಾಹಿತಿ
ಇಲ್ಲಿದೆ!

'ವಿಕ್ರಾಂತ್ ರೋಣ' ಅಬ್ಬರದ ಪ್ರಚಾರ!
ಮುಂಬೈ ಮಾತ್ರ ಅಲ್ಲ, ವಿಕ್ರಾಂತ್ ರೋಣ ಚಿತ್ರತಂಡ ಮುಂಬೈ ನಂತರ ನೂನ್ 24ಕ್ಕೆ ಕೊಚ್ಚಿಯ ಲೂಲು ಮಾಲ್ನಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಅದೇ ದಿನ ಚೆನ್ನೈನಲ್ಲಿ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಇನ್ನು ಹೈದ್ರಾಬಾದ್ನಲ್ಲಿ ಜೂನ್ 25ಕ್ಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಮೂಲಕ ಸಿನಿಮಾ ತಂಡ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಸೆಳೆದಿದೆ.