»   » 'ಹುಚ್ಚ' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯ ಬಿಚ್ಚಿಟ್ಟ ಸುದೀಪ್

'ಹುಚ್ಚ' ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಟ್ರೆಸ್ಟಿಂಗ್ ವಿಷ್ಯ ಬಿಚ್ಚಿಟ್ಟ ಸುದೀಪ್

Posted By:
Subscribe to Filmibeat Kannada

2001 ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ಸಿನಿಮಾ 'ಹುಚ್ಚ'. ಕಿಚ್ಚ ಸುದೀಪ್ ನಾಯಕನಾಗಿ ಅಭಿನಯಿಸಿದ್ದ ಎರಡನೇ ಸಿನಿಮಾ. ಇದಕ್ಕು ಮುಂಚೆ 'ಸ್ಪರ್ಶ' ಚಿತ್ರದಲ್ಲಿ ಸುದೀಪ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಓಂ ಪ್ರಕಾಶ್ ರಾವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರೇಖಾ ನಾಯಕಿಯಾಗಿ ಅಭಿನಯಿಸಿದ್ದರು.

ಜುಲೈ 6ನೇ ತಾರೀಖಿಗೆ 'ಹುಚ್ಚ' ಸಿನಿಮಾ ಬಿಡುಗಡೆಯಾಗಿ ಸರಿಯಾಗಿ 16 ವರ್ಷ ಕಳೆದಿದೆ. ಅಂದ್ಹಾಗೆ, ಕಿಚ್ಚನ ಅಭಿಮಾನಿಗಳು 'ಹುಚ್ಚ' ಚಿತ್ರವನ್ನ ಯಾರು ಮರೆಯುವುದಿಲ್ಲ. ಯಾಕಂದ್ರೆ, 'ಹುಚ್ಚ' ಸಿನಿಮಾ ಬಂದ ನಂತರವೇ ಸುದೀಪ್ ಕನ್ನಡದ ಕಿಚ್ಚನಾಗಿದ್ದು. ಇಲ್ಲಿಂದಲೇ ಸ್ಯಾಂಡಲ್ ವುಡ್ ನಲ್ಲಿ ಕಿಚ್ಚೋತ್ಸವ ಆರಂಭವಾಗಿದ್ದು.

'ಹುಟ್ಟುಹಬ್ಬ ಆಚರಣೆ ಬೇಡ' ಎಂದ ಸುದೀಪ್ ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

Actor Sudeep Shares his Memories of Huccha Movie Climax

ಈ ಸಿನಿಮಾ ಸುದೀಪ್ ಅವರ ವೃತ್ತಿ ಬದುಕಿನಲ್ಲಿ ಅತಿ ದೊಡ್ಡ ಯಶಸ್ಸು ಮತ್ತು ಟರ್ನಿಂಗ್ ಪಾಯಿಂಟ್ ಅಂದ್ರೆ ನಂಬಲೇಬೇಕು. 'ಹುಚ್ಚ' ಚಿತ್ರದ 16 ನೇ ವರ್ಷದ ಸಂತಸದಲ್ಲಿ ಸುದೀಪ್ ಚಿತ್ರದ ಬಗ್ಗೆ ಕೆಲವೊಂದು ನೆನಪುಗಳನ್ನ ಹಂಚಿಕೊಂಡಿದ್ದಾರೆ.

''ಹುಚ್ಚ ಚಿತ್ರದ ಕ್ಲೈಮ್ಯಾಕ್ಸ್ ಮಾಡಲು ಬರೋಬ್ಬರಿ 102 ಟೇಕ್ ತಗೊಂಡಿದ್ದರಂತೆ. ಇನ್ನು ಈ ಚಿತ್ರೀಕರಣ ಮಾಡುವ ಹಿಂದಿನ ದಿನ ಸುದೀಪ್ ಅವರಿಗೆ ಅಪಘಾತವಾಗಿತ್ತಂತೆ. ಆ ನೋವು ಈಗ ಸುಖವಾಗಿದೆ'' ಎಂದು ಸುದೀಪ್ ಹುಚ್ಚ ಸಿನಿಮಾವನ್ನ ಮೆಲುಕು ಹಾಕಿದರು.

ನಟ-ನಿರ್ಮಾಪಕ ಸುದೀಪ್ ವಿರುದ್ಧ ದೂರು ದಾಖಲು

English summary
Kannada Actor Sudeep has taken his twitter account to Shares his Memories of While Filming Kannada Movie Huccha Climax

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada