For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ಅವರನ್ನು ಕಿಚಾಯಿಸುತ್ತಿರುವವರ ವಿರುದ್ಧ ಕಿಚ್ಚನ ಕಿಚ್ಚು

  By Suneetha
  |

  'ಕನಸುಗಾರ' ರವಿಮಾಮ ಅವರು ವಿಭಿನ್ನವಾಗಿ ಮಾಡಿರುವ 'ಅಪೂರ್ವ' ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇಲ್ಲ-ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ.

  'ಅಪೂರ್ವ' ಸಿನಿಮಾವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ, ಚಿತ್ರದ ಬಗ್ಗೆ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಬಗ್ಗೆ ಹಲವಾರು ಮಂದಿ ಟ್ವಿಟ್ಟರ್, ಫೇಸ್ ಬುಕ್ ಗಳಲ್ಲಿ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ.[ರವಿಚಂದ್ರನ್ ಬಗ್ಗೆ ಕೊಂಕು ನುಡಿದವರಿಗೆ ಗುಂಡ್ ಪಿನ್ ಚುಚ್ಚಿದ ಯೋಗರಾಜ್ ಭಟ್]

  ಇದನ್ನು ಕಂಡ 'ಆಕ್ಸಿಡೆಂಟ್' ಚಿತ್ರದ ಖ್ಯಾತಿಯ ನಟ ರಾಜೇಂದ್ರ ಕಾರಂತ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ 'ಅಪೂರ್ವ' ಚಿತ್ರದ ಬಗ್ಗೆ ಅರಿಯದ ಕೆಲವು ವಿಚಾರಗಳನ್ನು ತಿಳಿಸಿ ಅಪಪ್ರಚಾರ ಮಾಡಿದವರಿಗೆ ಸರಿಯಾಗಿ ಸೂಜಿ ಚುಚ್ಚಿದ್ದರು.

  ಇನ್ನು ರಾಜೇಂದ್ರ ಕಾರಂತ್ ಅವರಿಂದ ಸ್ಫೂರ್ತಿ ಪಡೆದಿದ್ದ ನಿರ್ದೇಶಕ ಯೋಗರಾಜ್ ಭಟ್ ಅವರು ಕೂಡ ರವಿಚಂದ್ರನ್ ಅವರ 'ಅಪೂರ್ವ' ಚಿತ್ರದ ಬಗ್ಗೆ ಬಹಿರಂಗ ಪತ್ರ ಒಂದನ್ನು ಬರೆದಿದ್ದರು. ಇದೆಲ್ಲಾ ಹಳೇ ವಿಷಯ.[ಹೆದರಿಕೊಂಡೇ 'ಅಪೂರ್ವ' ನೋಡಿದವರು ಬರೆದಿರುವ ಅಪರೂಪದ ಪತ್ರ.!]

  ಅಂದಹಾಗೆ ರವಿಚಂದ್ರನ್ ಅವರು ತಮ್ಮ ದೊಡ್ಡ ಮಗ ಅಂತ ಕರೆಸಿಕೊಳ್ಳುವ ಕಿಚ್ಚ ಸುದೀಪ್ ಅವರು ಇದೀಗ ಮೌನ ಮುರಿದಿದ್ದಾರೆ. ರವಿಮಾಮ ಅವರ 'ಅಪೂರ್ವ' ಚಿತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಮನದಾಳ ಮಾತುಗಳನ್ನಾಡಿದ್ದಾರೆ. ಅದೇನೆಂಬುದನ್ನು ತಿಳಿಯಲು ಸ್ಲೈಡ್ಸ್ ಕ್ಲಿಕ್ಕಿಸಿ.....

  ಕಿಚ್ಚನ ಮನದಾಳ ಮಾತು

  ಕಿಚ್ಚನ ಮನದಾಳ ಮಾತು

  ರವಿಚಂದ್ರನ್ ಅವರ 'ಅಪೂರ್ವ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಿತ್ರದ ಬಗ್ಗೆ ಹಾಗೂ ರವಿಚಂದ್ರನ್ ಅವರ ಬಗ್ಗೆ ತಮ್ಮ ಮನದಾಳದ ಮಾತನ್ನು ಹೊರ ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಮಾತನಾಡಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ.[ರವಿಯನ್ನು ಕೆಣಕಿದ ರಾಘವ ದ್ವಾರ್ಕಿಗೆ ಅಭಿಮಾನಿಯ ಛಡಿಯೇಟು.!]

  'ಅಪೂರ್ವ' ಚಿತ್ರದ ಬಗ್ಗೆ

  'ಅಪೂರ್ವ' ಚಿತ್ರದ ಬಗ್ಗೆ

  "ಕನ್ನಡ ಚಿತ್ರರಂಗವನ್ನು ತನ್ನ ಉಚ್ಛ್ರಾಯದ ದಿನಗಳಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ದ ಕನಸುಗಾರನ ಹೊಸ ಪ್ರಯತ್ನ ಮತ್ತು ಪ್ರಯೋಗ 'ಅಪೂರ್ವ'. ಅವರು ಈಗಲೂ ಕನ್ನಡದಲ್ಲಿದ್ದುಕೊಂಡು, ಕನ್ನಡ ಸಿನಿಮಾ ಮಾಡುವ ಮೂಲಕ ಕನ್ನಡ ಭಾಷೆಯ ಸೇವೆ ಮಾಡುತ್ತಿದ್ದಾರೆ. ಹೊಸತನವನ್ನು ಕೊಡುವುದೇ, ರವಿಚಂದ್ರನ್ ಸರ್ ಅವರ ಉದ್ದೇಶ ಮತ್ತು ಆಶಯ". ['ಅಪೂರ್ವ' ಎರಡನೇ ಆವೃತ್ತಿ ಬಿಡುಗಡೆ: ಚಿತ್ರಮಂದಿರ ತುಂಬಿದೆ.!]

  ಕೆಲವರಿಗೆ ಕಿಚ್ಚನ ವಿನಂತಿ

  ಕೆಲವರಿಗೆ ಕಿಚ್ಚನ ವಿನಂತಿ

  "ಅವರಿಗೆ ಬೇಸರವಾಗುವಂತೆ ಮಾತಾಡುವ ಕೆಲವರಲ್ಲಿ ನನ್ನ ಸವಿನಯ ವಿನಂತಿ.
  ಅವರು ಏನು ಮಾಡಿದ್ದಾರೆ ಅನ್ನುವುದನ್ನು ಮರೆಯಕೂಡದು. ಇವತ್ತು ಅವರು ಏನು ಆಗಿದ್ದಾರೋ ಅದಕ್ಕೆ ಆ ಕೊಡುಗೆಯೇ ಕಾರಣ. ಎಷ್ಟೋ ಸಿನಿಮಾಗಳನ್ನು ನಾವು ಪ್ರೀತಿಯಿಂದ ಮಾಡುತ್ತೇವೆಯೇ ಹೊರತು, ಪ್ರತಿ ಸಿನಿಮಾವನ್ನೂ ವ್ಯಾಪಾರದ ಉದ್ದೇಶದಿಂದ ಮಾಡಿರೋಲ್ಲ".

  'ಅಪೂರ್ವ' ಮೆಚ್ಚುಗೆಯಾಗದವರಿಗೆ

  'ಅಪೂರ್ವ' ಮೆಚ್ಚುಗೆಯಾಗದವರಿಗೆ

  "ನಾವು ಅವರು ಮಾಡಿರುವ ಒಂದು ಶೈಲಿಯ ಸಿನಿಮಾಗಳನ್ನು ನೋಡಿದವರು ಮತ್ತು ಅದನ್ನೇ ಅಭ್ಯಾಸ ಮಾಡಿಕೊಂಡವರು, ಈಗ ಅವರು ಹೊಸ ರೀತಿಯ ಸಿನಿಮಾ ಮಾಡುತ್ತಿದ್ದಾರೆ ಮತ್ತು ಅದನ್ನು ಅವರ ಸ್ವಂತ ಹಣ ಮತ್ತು ಸಮಯ ವ್ಯಯ ಮಾಡಿ ಮಾಡುತ್ತಿದ್ದಾರೆ. ಹೊಸ ಪ್ರಯತ್ನ ಮಾಡಲು ಹೊರಟಾಗ ಏನು ಬೇಕಾದರೂ ಆಗಬಹುದು. ಅದು ಎಲ್ಲರಿಗೂ ಮೆಚ್ಚುಗೆಯಾಗಬಹುದು, ಆಗದೇ ಇರಬಹುದು, ಆದರೆ ಹೊಸತನಕ್ಕೆ ಪ್ರಯತ್ನಿಸಿದ್ದಾರೆ ಅನ್ನುವುದು ಸುಳ್ಳಾಗುವುದಿಲ್ಲ".

  ರವಿ ಸರ್ ಕನ್ನಡದ ಆಸ್ತಿ

  ರವಿ ಸರ್ ಕನ್ನಡದ ಆಸ್ತಿ

  "ನಮ್ಮ ಮನೆಯ ಸದಸ್ಯರೇ ಒಂದು ಹೊಸ ಸಾಹಸಕ್ಕೆ ಕೈ ಹಾಕಿ, ಸೋತರೆ, ನಾವು ಅವರ ಬೆನ್ನಿಗೆ ನಿಲ್ಲುವುದಿಲ್ಲವೇ, ಬೆಂಬಲಿಸುವುದಿಲ್ಲವೇ? ಅವರ ಭುಜದ ಮೇಲೆ ಕೈಯಿಟ್ಟು "ಬಾ, ನೊಂದ್ಕೋಬೇಡ, ಇನ್ನೊಂದು ಸಲ ಟ್ರೈ ಮಾಡೋಣ, ಗೆದ್ದೇ ಗೆಲ್ತೀವಿ" ಅಂತ ಆತ್ಮವಿಶ್ವಾಸ ತುಂಬುವುದಿಲ್ಲವೇ? ರವಿ ಸರ್ ನಮ್ಮ, ಕನ್ನಡದ ಆಸ್ತಿ. ನಮ್ಮ ಕಲಾಸಂಪತ್ತನ್ನು ನಾವೇ ಕಾಪಾಡಿಕೊಳ್ಳದೇ ಬೇರೆ ಯಾರು ಕಾಪಾಡಿಕೊಳ್ಳುತ್ತಾರೆ"?.

  ಮಾತಲ್ಲಿ ಸ್ವಲ್ಪ ಪ್ರೀತಿ ಇರಲಿ

  ಮಾತಲ್ಲಿ ಸ್ವಲ್ಪ ಪ್ರೀತಿ ಇರಲಿ

  "ಒಬ್ಬ ಮಹಾನ್ ಸಾಧಕನ ಸಾಧನೆಗಳನ್ನು ಅಷ್ಟು ಬೇಗ ನಾವು ಮರೆತು ಬಿಡಬಾರದು ಅಲ್ಲವೇ?. ಒಳ್ಳೆಯತನ ಯಾರನ್ನೂ ಯಾವತ್ತೂ ಹಾಳು ಮಾಡುವುದಿಲ್ಲ. ನನ್ನ ಸ್ನೇಹಿತರೇ, ರವಿಯವರಂಥಹ ಮೇರು ನಿರ್ದೇಶಕರ ಬಗ್ಗೆ ಮಾತನಾಡುವಾಗ ನಮ್ಮ ಮಾತಲ್ಲಿ ಸ್ವಲ್ಪ ಪ್ರೀತಿ ಇದ್ದಲ್ಲಿ ತಪ್ಪಿಲ್ಲ ಅಲ್ಲವೇ?. ಅವರೊಂದು ಸಿನಿಮಾ ಮಾಡಿದ್ದಾರೆಯೇ ಹೊರತು, ಅಪರಾಧವೇನೂ ಮಾಡಿಲ್ಲ".

  ಅಭಿಪ್ರಾಯ ಮೃದುವಾಗಿರಲಿ

  ಅಭಿಪ್ರಾಯ ಮೃದುವಾಗಿರಲಿ

  "ಸಿನಿಮಾ ಕುರಿತು ನಾವು ನಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಖಂಡಿತಾ ತಪ್ಪಲ್ಲ, ಆ ಹಕ್ಕು ಎಲ್ಲರಿಗೂ ಇದೆ. ಆದರೆ ನಮ್ಮ ಅಭಿಪ್ರಾಯಗಳಲ್ಲಿ ಬರುವಂಥ ಪದಗಳು ಮೃದುವಾಗಿ ಇರಬಹುದಲ್ಲವೇ"?.

  ಪ್ರೀತಿಯಿಂದ ಹೇಳಿ

  ಪ್ರೀತಿಯಿಂದ ಹೇಳಿ

  "ನಾವು ಮಾಡಿದ ತಪ್ಪನ್ನು ಮಿಕ್ಕವರು ಬೆರಳು ಮಾಡಿ ತೋರಿಸಬೇಕಾದರೆ, ಇನ್ನೂ ಸ್ವಲ್ಪ ಮೆತ್ತಗೆ, ತಗ್ಗಿದ ಧ್ವನಿಯಲ್ಲಿ, ಒಂಚೂರು ಪ್ರೀತಿ ಬೆರೆಸಿ ಹೇಳಿದರೆ ಚೆನ್ನಾಗಿರುತ್ತಿತ್ತು ಅಂತ ನಮ್ಮ ಜೀವನದಲ್ಲಿ ನಮಗೆಷ್ಟೋ ಸಲ ಅನ್ನಿಸಿಲ್ಲ ಹೇಳಿ. ಆದರೆ 'ಬೇರೆಯವರ ಸರಿ-ತಪ್ಪು ಬಗ್ಗೆ ಮಾತನಾಡುವಾಗ, ನಾವೇಕೆ ಇದನ್ನು ಮರೆಯುತ್ತೇವೆ? ನಾವೆಲ್ಲರೂ ಎಡವುತ್ತೇವೆ, ಬೀಳುತ್ತೇವೆ, ಮತ್ತೆ ಎದ್ದು ನಡೆಯುತ್ತೇವೆ, ಇದು ನಿಜ ಅಲ್ಲವೇ"?.

  ರವಿ ಸರ್ ಸೋಲೋದಿಲ್ಲ

  ರವಿ ಸರ್ ಸೋಲೋದಿಲ್ಲ

  "ಇವತ್ತು ರವಿ ಅವರ ಕೆಲವು ಸಿನಿಮಾಗಳು ಸೋತಿರಬಹುದು, ಆದರೆ ರವಿ ಸರ್ ಸೋತಿಲ್ಲ, ಅವರು ಸೋಲುವ ವ್ಯಕ್ತಿಯೂ ಅಲ್ಲ. ಅವರದು ಸೋಲುವ ವ್ಯಕ್ತಿತ್ವವೂ ಅಲ್ಲ".

  ಒಕ್ಕೊರಲಿನಿಂದ ಹೇಳುತ್ತೇವೆ

  ಒಕ್ಕೊರಲಿನಿಂದ ಹೇಳುತ್ತೇವೆ

  "ಇಡೀ ಕನ್ನಡ ಚಿತ್ರರಂಗದವರಾದ ನಾವೆಲ್ಲರೂ ಒಕ್ಕೊರಲಿನಿಂದ ಹೇಳುತ್ತಿರುವುದು, ಮುಂದೆ ಹೇಳುವುದು ಒಂದೇ ಮಾತು, "ರವಿಚಂದ್ರನ್ ಸರ್ ನಮ್ಮವರು, 'ಅವರು ನಮ್ಮ ಆಸ್ತಿ, ನಮ್ಮ ಚಿತ್ರರಂಗದ ಲೆಜೆಂಡ್, ನಾವು ಹೆಮ್ಮೆಪಡುವಂಥಹ ಕನಸುಗಾರ, ನಮ್ಮೆಲ್ಲರ ಪ್ರೀತಿಯ ರವಿಮಾಮ". -ಇಂತಿ ಕಿಚ್ಚ ಸುದೀಪ್.

  ಕಿಚ್ಚನ ಪೂರ್ತಿ ಸ್ಟೇಟಸ್..

  ಕಿಚ್ಚನ ಪೂರ್ತಿ ಸ್ಟೇಟಸ್..

  ಕಿಚ್ಚ ಸುದೀಪ್ ಅವರು ತಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ದೀರ್ಘ ಸ್ಟೇಟಸ್ ನೋಡಿ...

  English summary
  Kannada Actor Sudeep talking about all who are abusing Crazy Star V.Ravichandran's One Man Show Kannada Movie 'Apoorva'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X