twitter
    For Quick Alerts
    ALLOW NOTIFICATIONS  
    For Daily Alerts

    ಮನೆಯವರೇ ಕಳ್ಳರ ಒಳಗೆ ಬಿಟ್ಟರೆ ಯಾರಿಗೆ ಬೈಯ್ಯೋಣ: ಪೈರಸಿ ಬಗ್ಗೆ ಸುದೀಪ್ ಮಾತು

    |

    ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಗೆ ಆಗಲಿದ್ದು, ಬಿಡುಗಡೆಗೆ ಮುನ್ನವೇ ಪೈರಸಿ ಆತಂಕ ಎದುರಾಗಿದೆ.

    ಟೆಲಿಗ್ರಾಂ ಅಪ್ಲಿಕೇಶನ್ ಸೇರಿದಂತೆ ಕೆಲವು ಸಾಮಾಜಿಕ ಜಾಲತಾಣದಲ್ಲಿ, 'ಕೋಟಿಗೊಬ್ಬ 3' ಸಿನಿಮಾದ ಪೈರಸಿ ಮಾಡುವುದಾಗಿ ಕೆಲವು ಕಿಡಿಗೇಡಿಗಳು ಈಗಾಗಲೇ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಸಿನಿಮಾದ ನಿರ್ಮಾಪಕ ಸೂರಪ್ಪಬಾಬು ಗೃಹ ಸಚಿವರಿಗೆ, ಪೊಲೀಸ್ ಆಯುಕ್ತರಿಗೆ ದೂರು ಸಹ ನೀಡಿದ್ದಾರೆ.

    'ಕೋಟಿಗೊಬ್ಬ 3' ಸಿನಿಮಾಕ್ಕೆ ಸಂಬಂಧಿಸಿದಂತೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಸುದೀಪ್, ''ಕೋವಿಡ್‌ಗೆ ಹೆದರಲಿಲ್ಲ ಇನ್ನು ಪೈರಸಿಗೆ ಹೆದರುತ್ತೀನಾ? ಇನ್ನೊಬ್ಬರ ಶ್ರಮದ ಮೇಲೆ ತಮ್ಮ ಜೀವನ ಕಟ್ಟಿಕೊಳ್ಳುವವರ ಜೀವನ ಹೆಚ್ಚು ದಿನ ನಡೆಯುವುದಿಲ್ಲ. ಅಲ್ಲದೆ ಮನೆಯವರೇ ಕಳ್ಳರನ್ನು ಒಳಗೆ ಬಿಟ್ಟಾಗ, ಕಳ್ಳರನ್ನು ಬೈಯ್ಯಲು ಆಗುತ್ತದೆಯೇ?'' ಎಂದು ಮಾರ್ಮಿಕವಾಗಿ ಹೇಳಿದರು ಸುದೀಪ್.

    ಬಹಳ ಕಷ್ಟಪಟ್ಟು ಪೈರಸಿ ಮಾಡ್ತಾರೆ: ಸುದೀಪ್ ವ್ಯಂಗ್ಯ

    ಬಹಳ ಕಷ್ಟಪಟ್ಟು ಪೈರಸಿ ಮಾಡ್ತಾರೆ: ಸುದೀಪ್ ವ್ಯಂಗ್ಯ

    ''ಮೊದಲೆಲ್ಲ ಥಿಯೇಟರ್‌ ಪ್ರಿಂಟ್‌ಗಳು ಪೈರಸಿ ಆಗುತ್ತಿದ್ದವು ಆದರೆ 'ಪೈಲ್ವಾನ್' ಬಂದಾಗ ಬಹಳ ಒಳ್ಳೆಯ ಪ್ರಿಂಟ್ ಪೈರಸಿ ಆಗಿತ್ತು. ನಾವು ಸಿನಿಮಾ ಮಾಡಲು ಎಷ್ಟು ಕಷ್ಟಪಟ್ಟಿದ್ದೆವೊ ಅಷ್ಟೇ ಕಷ್ಟವನ್ನು ಪೈರಸಿ ಮಾಡಲು ಪಡುತ್ತಿದ್ದಾರೆ. ಮೀಟಿಂಗ್‌ಗಳಾಗುತ್ತವೆ ಏನೇನೋ ಚರ್ಚೆ ಮಾಡಿ ಪೈರಸಿ ಮಾಡುತ್ತಾರೆ. ನಮ್ಮ ಸಿನಿಮಾದ ಮೊದಲ ಶೋ ಬಿಡುಗಡೆ ಆಗುತ್ತಿದ್ದಂತೆ ಪೈರಸಿ ಕಾಪಿ ಹೊರಗೆ ಬಂತು. ಆದರೆ ನನ್ನ ಅಭಿಮಾನಿಗಳು, ಗೆಳೆಯರು ಸಿನಿಮಾವನ್ನು ಪುಶ್ ಮಾಡಿದರು. ಜನರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವಂತೆ ಮಾಡಿದರು. ಪೈರಸಿ ಬಂದರು ನಮ್ಮ ಸಿನಿಮಾ ಅಷ್ಟು ಓಡಿತು, ಒಳ್ಳೆಯ ಕಲೆಕ್ಷನ್ ಮಾಡಿತು. ನನ್ನ ಅಭಿಮಾನಿಗಳ ಬಗ್ಗೆ, ಗೆಳೆಯರ ಬಗ್ಗೆ ನನಗೆ ಹೆಮ್ಮೆ ಇದೆ'' ಎಂದರು ಸುದೀಪ್.

    ನನ್ನ ಫ್ಯಾನ್ಸ್‌ ಬಗ್ಗೆ ಹೆಮ್ಮೆ ಇದೆ: ಸುದೀಪ್

    ನನ್ನ ಫ್ಯಾನ್ಸ್‌ ಬಗ್ಗೆ ಹೆಮ್ಮೆ ಇದೆ: ಸುದೀಪ್

    ''ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ. ಅಂಥಹವರಿಗೆ ನಾವು ಏನು ಕೊಟ್ಟರೂ ನೆಮ್ಮದಿ ಆಗುವುದಿಲ್ಲ. ಚೋರ್ ಬಜಾರ್‌ನಲ್ಲಿ ಶಾಪಿಂಗ್ ಅಭ್ಯಾಸ ಆದವರಿಗೆ ದುಡ್ಡು ಕೊಟ್ಟರೂ ಮಾಲ್‌ನಲ್ಲಿ ಶಾಪಿಂಗ್ ಮಾಡುವುದಿಲ್ಲ. ಮಾಲ್‌ನಲ್ಲಿ ಶಾಪಿಂಗ್‌ ಮಾಡುವವರು ಚೋರ್‌ ಬಜಾರ್‌ಗೆ ಹೋಗುವುದಿಲ್ಲ. ಹಾಗಾಗಿ ಅದನ್ನು ಅವರ ವ್ಯಕ್ತಿತ್ವಕ್ಕೆ ಬಿಟ್ಟುಬಿಡೋಣ. ಪೈರಸಿ ಬಗ್ಗೆ ನಾನು ಈವರೆಗೆ ಹೋರಾಟ ಮಾಡಿಲ್ಲ. ನನ್ನ ಫ್ಯಾನ್ಸ್ ಹೋರಾಟ ಮಾಡಿದ್ದಾರೆ. ಅವರನ್ನು ಪಡೆದಿರುವುದು ನನಗೆ ಖುಷಿ ಇದೆ'' ಎಂದರು ಸುದೀಪ್.

    ''ಯಾರು ಎದುರು ಬರುತ್ತಿದ್ದಾರೆ, ಪಕ್ಕ ಬರುತ್ತಿದ್ದಾರೆ ಎಂಬುದು ಮುಖ್ಯವಲ್ಲ''

    ''ಯಾರು ಎದುರು ಬರುತ್ತಿದ್ದಾರೆ, ಪಕ್ಕ ಬರುತ್ತಿದ್ದಾರೆ ಎಂಬುದು ಮುಖ್ಯವಲ್ಲ''

    'ಕೋಟಿಗೊಬ್ಬ 3' ಸಿನಿಮಾ ಬಿಡುಗಡೆ ಆಗುವ ದಿನವೇ 'ಸಲಗ' ಸಿನಿಮಾ ಸಹ ಬಿಡುಗಡೆ ಆಗುತ್ತಿರುವ ಬಗ್ಗೆ ಮಾತನಾಡಿದ ಸುದೀಪ್, ''25 ವರ್ಷದಿಂದ ಸಿನಿಮಾರಂಗದಲ್ಲಿದ್ದೀನಿ. ಇಲ್ಲಿ ನಾನು ನಾನಾಗಿರಬೇಕೆಂದರೆ ಏನಾದರೂ ಇರಬೇಕಲ್ಲ. ಯಾರು ಎದುರು ಬಂದರು, ಯಾರು ಪಕ್ಕದಲ್ಲಿ ಬಂದರು ಎಂಬುದೆಲ್ಲ ಮುಖ್ಯವಲ್ಲ. ಎಲ್ಲವನ್ನೂ ಕಾಲಕ್ಕೆ ಬಿಟ್ಟಿದ್ದೀನಿ. ನಮ್ಮ ಸಿನಿಮಾ ಈ ಕೊರೊನಾ ಸಮಯದಲ್ಲಿ ಬೆಳಕು ಕಾಣುತ್ತಿದೆಯಲ್ಲ ಅದು ಮುಖ್ಯ. ವಿತರಕರು ಬರುತ್ತಿದ್ದಾರೆ, ಸಿನಿಮಾವನ್ನು ನಂಬುತ್ತಿದ್ದಾರೆ, ಹಣ ಕೊಡುತ್ತಿದ್ದಾರೆ ಅದು ಮುಖ್ಯ. ಇಂಥಹಾ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರಿಗೆ ಧೈರ್ಯ ಇದೆ ಅದನ್ನೂ ಮೆಚ್ಚಿಕೊಳ್ಳೋಣ. ಟ್ರಾಫಿಕ್‌ ಅಂದ ಮೇಲೆ ಅಕ್ಕ-ಪಕ್ಕ ಕಾರುಗಳು ಇದ್ದೇ ಇರುತ್ತವಲ್ಲ'' ಎಂದರು ಸುದೀಪ್.

    ಸುದೀಪ್ ಮಾರ್ಮಿಕ ಮಾತು

    ಸುದೀಪ್ ಮಾರ್ಮಿಕ ಮಾತು

    ''ನಾನು 'ಸಲಗ' ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಹೋಗಿ ಕ್ಲ್ಯಾಪ್ ಮಾಡಿದ್ದೇನೆ. ಅಂದೇ ನಾನು ಸಿನಿಮಾಕ್ಕೆ ಒಳ್ಳೆಯದಾಗಲಿ ಎಂದು ಹರಸಿದ್ದಾಯಿತು. ಕೆ.ಪಿ.ಶ್ರೀಕಾಂತ್ ನನ್ನ ಗೆಳೆಯ ಅವನ ಸಿನಿಮಾಕ್ಕೆ ಒಳ್ಳೆಯದಾಗಬೇಕು. ಈಗ ಆ ಸಿನಿಮಾ ಬಗ್ಗೆ ಏನೇ ಮಾತನಾಡಿದರೂ ತಪ್ಪಾಗುತ್ತದೆ. ಎರಡು ದೊಡ್ಡ ಸಿನಿಮಾಗಳು ಬರುತ್ತಿವೆ. ಅವರೂ ಕಷ್ಟಪಟ್ಟಿದ್ದಾರೆ. ಅವರೂ ದುಡ್ಡು ಹಾಕಿದ್ದಾರೆ. ಹಬ್ಬ ಸಹ ಇದೆ. ಬಹಳ ಖುಷಿಯಿಂದ ಹೋಗಿ ಅವರ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿ ಬಂದಿದ್ದೇನೆ. ಅವರ ಸಿನಿಮಾ ಚೆನ್ನಾಗಿ ಓಡಲಿ. ನಾವ್ಯಾರೂ ಸ್ಟಾರ್ ವಾರ್ ಎಂದು ಹೇಳುತ್ತಿಲ್ಲ. ನನ್ನದೇ ಹೆಸರಲ್ಲಿ ಫೇಕ್ ಅಕೌಂಟ್ ಮಾಡಿ ಸ್ಟಾರ್ ವಾರ್ ಅದೂ ಇದೂ ಎಂದು ಪೋಸ್ಟ್ ಮಾಡುತ್ತಿರುತ್ತಾರೆ. ಆದರೆ ಎಲ್ಲರೂ ಚೆನ್ನಾಗಿರಲಿ ಅಷ್ಟೆ'' ಎಂದು ನಕ್ಕರು ಸುದೀಪ್.

    English summary
    Sudeep said whom you blame when industry people only helping to do movie piracy. He said we survived COVID 19 then why we get afraid of piracy.
    Tuesday, October 12, 2021, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X