ಪಿ.ಎನ್.ಸತ್ಯ ಅವರಿಗೆ ಟ್ವಿಟ್ಟರ್ ನಲ್ಲಿ ನಮನ ಅಂತಿಮ ಸಲ್ಲಿಸಿದ ಸುದೀಪ್
ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಪಿ.ಎನ್.ಸತ್ಯ ನಿನ್ನೆ ನಿಧನರಾಗಿದ್ದಾರೆ. ಪಿ.ಎನ್.ಸತ್ಯ ಕಳೆದುಕೊಂಡ ಕನ್ನಡ ಚಿತ್ರರಂಗ ಕಣ್ಣೀರು ಹಾಕುತ್ತಿದೆ. ಚಿತ್ರರಂಗದ ಗಣ್ಯರು ಈಗ ಸತ್ಯ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ನಟ ಸುದೀಪ್ ಸಹ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪಿ.ಎನ್.ಸತ್ಯ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
''ನಾನು ಇನ್ನೂ ಪಿ.ಎನ್.ಸತ್ಯ ಅವರ ಸಾವಿನ ಸುದ್ದಿಯಿಂದ ಹೊರ ಬರಲು ಪ್ರಯತ್ನ ಮಾಡುತ್ತಿದ್ದೇನೆ. ನಾನು ಅವರ ಜೊತೆಗೆ ಅನೇಕ ಕಾರ್ಯಕ್ರಮಗಳಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು. ಜೊತೆಗೆ ಅವರ ಜೊತೆಗೆ 'ಗೂಳಿ' ಸಿನಿಮಾದಲ್ಲಿ ಕೆಲ ಮಾಡುವ ಅವಕಾಶವನ್ನು ಪಡೆದಿದೆ. ಆದರೆ ಇಷ್ಟು ಬೇಗ ಅವರ ಹೊರಟು ಬಿಟ್ಟರು!. ಅವರ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ ನಟ ದರ್ಶನ್ ಕೂಡ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಗೆಳೆಯ ಪಿ.ಎನ್.ಸತ್ಯ ಅವರ ಬಗ್ಗೆ ನಾಲ್ಕು ಸಾಲು ಬರೆದುಕೊಂಡಿದ್ದಾರೆ. ''ನನ್ನ ಆಪ್ತ ಸ್ನೇಹಿತರಲ್ಲೊಬ್ಬರು, ''ನನ್ನ 'ಮೆಜೆಸ್ಟಿಕ್' ಚಿತ್ರದ ನಿರ್ದೇಶಕರು ಪಿ.ಎನ್ ಸತ್ಯ ಇಂದು ನಮ್ಮಿಂದ ದೈಹಿಕವಾಗಿ ದೂರವಾಗಿದ್ದಾರೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ. ಸತ್ಯ ರವರ ಆತ್ಮಕ್ಕೆ ಶಾಂತಿ ಸಿಗಲಿ.'' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪಿ.ಎನ್.ಸತ್ಯ ನಿನ್ನೆ ಸಂಜೆ 7.30 ಸುಮಾರಿಗೆ ನಿಧನರಾದರು. ಸದ್ಯ ಪಿ.ಎನ್.ಸತ್ಯ ಅವರ ಮೃತ ದೇಹವನ್ನು ಅಂತಿಮ ದರ್ಶನಕ್ಕಾಗಿ 11.30ರ ವರೆಗೆ ಇಡಲಾಗಿದೆ. ಆ ಬಳಿಕ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಮದ್ಯಾಹ್ನ 3 ಗಂಟೆಗೆ ಬನಶಂಕರಿಯ ಹಿಂದೂ ರುಧ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.


Click it and Unblock the Notifications











