'ವಿಕ್ರಾಂತ್ ರೋಣ' ಟ್ರೈಲರ್‌ ಲಾಂಚ್‌ನಲ್ಲಿ ಸುದೀಪ್ ತೊಟ್ಟ್ ಜಾಕೆಟ್ ಎಷ್ಟು ದುಬಾರಿ ಗೊತ್ತ?

ನಟ ಕಿಚ್ಚ ಸುದೀಪ್ ದಶಕಗಳಿಂದ ಸಿನಿಮಾರಂಗದಲ್ಲಿ ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಸಾಕಷ್ಟು ಹಿಟ್‌ಗಳನ್ನು ಕೊಟ್ಟಿರುವ ಸುದೀಪ್ ಅಪಾರ ಅಭಿಮಾನಿ ಗಳಿಸಿಕೊಂಡಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ ಹಲವು ವರ್ಷಗಳ ಬೆಳವಣಿಗೆಗೆ ಕಿಚ್ಚನ ಕೊಡುಗೆಯೂ ಪ್ರಮುಖ.

ನಟ ಸುದೀಪ್ ಸದಾ ತಮ್ಮ ಸ್ಟೈಲಿಶ್ ಲುಕ್‌ ಮೂಲಕವೇ ಗಮನ ಸೆಳೆಯುತ್ತಾರೆ. ಕಿಚ್ಚ ಸುದೀಪ್ ಎಲ್ಲಾದರು ಕ್ಯಾಮೆರಾ ಕಣ್ಣಿಗೆ ಬೀಳುತ್ತಾರೆ ಎಂದರೆ, ಅವರ ಸ್ಟೈಲ್ ಮೇಲೆಗೆ ಎಲ್ಲರ ಗಮನ ಹೋಗುತ್ತೆ. ಸದಾ ಅಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ ಸುದೀಪ್.

ಸುದೀಪ್, ಸಿನಿಮಾ ರಂಗದ ಫ್ಯಾಷನ್, ಸ್ಟೈಲ್ ಐಕಾನ್ ಗಳಲ್ಲಿ ಒಬ್ಬರು. ಸುದೀಪ್ ಸ್ಟೈಲಿಶ್ ಆಗಿ ಮಾತ್ರವಲ್ಲ, ಸುದೀಪ್ ದುಬಾರಿ ಕಾಸ್ಟ್ಯೂಂಗಳಿಂದಲೂ ಸುದ್ದಿ ಆಗುತ್ತಾರೆ. ಈಗ ಮತ್ತೆ ಸುದೀಪ್ ಬಗ್ಗೆ ಹೀಗೆ ಹೇಳಲು ಕಾರಣ ಸುದೀಪ್ ತೊಟ್ಟ ಈ ದುಬಾರಿ ಪುಲ್ ಓವರ್.

ಮುಂಬೈನಲ್ಲಿ ಸ್ಟೈಲಿಶ್ ಆಗಿ ಮಿಂಚಿದ ಸುದೀಪ್!

ಮುಂಬೈನಲ್ಲಿ ಸ್ಟೈಲಿಶ್ ಆಗಿ ಮಿಂಚಿದ ಸುದೀಪ್!

ನಟ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಟ್ರೈಲರ್ ರಿಲೀಸ್ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದ್ದಾರೆ. ಬೆಂಗಳೂರಿನಲ್ಲಿ 3d ಟ್ರೈಲರ್ ಲಾಂಚ್ ಬಳಿಕ ಇಂದು (ಜೂನ್ 23) ಮುಂಬೈನಲ್ಲಿ ವಿಕ್ರಾಂತ್ ರೋಣ ಟ್ರೈಲರ್ ಲಾಂಚ್ ಮತ್ತು ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಮತ್ತು ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಸುದೀಪ್ ಸಿಂಪಲ್ ಲುಕ್‌ನಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಧರಿಸಿದ ಪುಲ್ ಓವರ್ 23 ಸಾವಿರ!

ಕಿಚ್ಚ ಸುದೀಪ್ ಧರಿಸಿದ ಪುಲ್ ಓವರ್ 23 ಸಾವಿರ!

ನಟ ಸುದೀಪ್ ಮುಂಬೈ ಕಾರ್ಯಕ್ರಮದಲ್ಲಿ ತೊಟ್ಟಿದ್ದ ಪುಲ್ ಓವರ್ ಜಾಕೆಟ್ ತೊಟ್ಟು ಹೆಚ್ಚು ಗಮನ ಸೆಳೆದಿದೆ. ಈ ಜಾಕೆಟ್‌ನಲ್ಲಿ ಸುದೀಪ್ ಮಿರ ಮಿರ ಮಿಂಚಿದ್ದಾರೆ. ಸುದೀಪ್ ತೊಟ್ಟ ಈ ಪುಲ್ ಓವರ್ ಬೆಲೆ 23.047 ರೂಪಾಯಿ. ಇದರ ಮೂಲಕ ಬೆಲೆ ಇಷ್ಟು. ಆನ್‌ ಲೈನ್‌ನಲ್ಲಿ ಈ ಪುಲ್ ಓವರ್ ಜಾಕೆಟ್ ಬೆಲೆ ಡಾಲರ್ ಮತ್ತು ಯುರೋಗಳಲ್ಲಿ ಇದೆ.

ಸುದೀಪ್ ಪುಲ್ ಓವರ್ ಯಾವ ಬ್ಯ್ರಾಂಡ್?

ಸುದೀಪ್ ಪುಲ್ ಓವರ್ ಯಾವ ಬ್ಯ್ರಾಂಡ್?

ಕಪ್ಪು ಮತ್ತು ಬೂದು ಬಣ್ಣದ ಕಾಂಬಿನೇಶನ್ ಇರುವ ಪುಲ್ ಓವರ್‌ ಇದು. ಉದ್ದನೆಯ ತೋಳು ಮತ್ತು ಟೋಪಿ ಕೂಡ ಇದೆ. ಇದರ ಮೇಲೆ ಒಂದೇ ರೀತಿ ವಿನ್ಯಾಸದ ಡಿಸೈನ್ ಇದೆ. ಇದು ಹೆಸರಾಂತ 'ಎಂಫೋರಿಯೋ ಅರ್ಮಾನಿ' ಬ್ರ್ಯಾಂಡ್‌ನ ಉಡುಪು. ಇನ್ನು ಸುದೀಪ್ ಅವರಿಗೆ ಶರ್ಟ್ ಮತ್ತು ಟೀಶರ್ಟ್‌ಗಳಿಗಿಂತ, ಜಾಕೆಟ್ ಮತ್ತು ಈ ರೀತಿ ಪುಲ್ ಓವರ್ ಎಂದರೆ ಇಷ್ಟ. ಹಾಗಾಗಿ ಹೆಚ್ಚು ಈ ರೀತಿ ಕಾಸ್ಟ್ಯೂಂನಲ್ಲೇ ಕಾಣಿಸಿಕೊಳ್ಳುತ್ತಾರೆ.

ದುಬಾರಿ ಕಾರುಗಳ ಒಡೆಯ ಸುದೀಪ್!

ದುಬಾರಿ ಕಾರುಗಳ ಒಡೆಯ ಸುದೀಪ್!

ನಟ ಸುದೀಪ್ ಉಡುಪು ಮಾತ್ರವಲ್ಲ ಈ ಹಿಂದೆ ದುಬಾರಿ ಕೈ ಗಡಿಯಾರ ತೊಟ್ಟು ಸುದ್ದಿಯಾಗಿದ್ದರು. ಜೊತೆಗೆ ಸುದೀಪ್ ಬಳಿ ಹಲವು ದುಬಾರಿ ಕಾರುಗಳಿವೆ. ವರದಿಗಳ ಪ್ರಕಾರ ವೋಲ್ವೋ Volvo XC90, Jaguar XJL, Jeep Compass, Jeep Wrangler ಕಾರುಗಳಿವೆ. ಈ ಕಾರುಗಳು ಕೋಟಿ, ಕೋಟಿ ಬೆಲೆ ಬಾಳುವ ಕಾರುಗಳು.

More from Filmibeat

English summary
Actor Sudeep Wear Costly Jacket Worth 23,000 Rs. For Vikrant Rona Event At Mumbai, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X