'ದಿ ವಾಲ್' ರಾಹುಲ್ ದ್ರಾವಿಡ್ ರಿಗೆ ಸುದೀಪ್ ಪ್ರೀತಿಯ ಕೋರಿಕೆ
Recommended Video
ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಆಟಗಾರ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಇಂದು (ಜನವರಿ 10) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾಹುಲ್ ದ್ರಾವಿಡ್ ಗೆ ನಟ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸುದೀಪ್ ವಿಶ್ ಮಾಡಿದ್ದಾರೆ. ''ಸರ್ ನೀವು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಲೇ ಇರಿ. ನಿಮ್ಮ ನಂಬಿಕೆ, ನಿಸ್ವಾರ್ಥತೆ, ಶ್ರದ್ಧೆ ಎಲ್ಲವೂ ಅನುಸರಿಸಲು ಯೋಗ್ಯವಾಗಿದೆ. ವಿಶ್ ಯೂ ದಿ ಬೆಸ್ಟ್ ಆಲ್ವೆಸ್ ಸರ್'' ಎಂದು ಬರೆದುಕೊಂಡಿದ್ದಾರೆ.
ಸುದೀಪ್ ಗೆ ಸ್ಫೂರ್ತಿ ನೀಡಿದ ವ್ಯಕ್ತಿಗಳಲ್ಲಿ ದ್ರಾವಿಡ್ ಕೂಡ ಒಬ್ಬರು. ಹಾಗಾಗಿ, ಇದೇ ರೀತಿ ನಮಗೆ ಸ್ಫೂರ್ತಿ ನೀಡುತ್ತಿರಿ ಎಂದು ಪ್ರೀತಿಯ ಮನವಿ ಮಾಡಿದ್ದಾರೆ.

ಸುದೀಪ್ ಮಾತ್ರವಲ್ಲದೆ ನಿರ್ದೇಶಕ ಪವನ್ ಒಡೆಯರ್ ಕೂಡ ರಾಹುಲ್ ದ್ರಾವಿಡ್ ಗೆ ಶುಭಾಶಯ ತಿಳಿಸಿದ್ದಾರೆ. ಭಾರತದ ಎಷ್ಟೋ ಕಠಿಣ ಪರಿಸ್ಥಿತಿಯ ಪಂದ್ಯಗಳ ಸುರಕ್ಷಕ. ನಿಮ್ಮ ರೀತಿ ಯಾರು ಇಲ್ಲ. ಯಾರೂ ಆಗಲು ಸಾಧ್ಯವಿಲ್ಲ ಎಂದು ಬಣ್ಣಿಸಿದ್ದಾರೆ.
ಉಳಿದಂತೆ, ನಟ ಪುನೀತ್ ರಾಜ್ ಕುಮಾರ್, ನಟಿ ರಮ್ಯಾ ಅಭಿಮಾನಿಗಳ ಟ್ವಿಟ್ಟರ್ ಖಾತೆಗಳಲ್ಲಿ ರಾಹುಲ್ ದ್ರಾವಿಡ್ ರಾರಾಜಿಸುತ್ತಿದ್ದಾರೆ.


Click it and Unblock the Notifications











