For Quick Alerts
  ALLOW NOTIFICATIONS  
  For Daily Alerts

  'ದಿ ವಾಲ್' ರಾಹುಲ್ ದ್ರಾವಿಡ್ ರಿಗೆ ಸುದೀಪ್ ಪ್ರೀತಿಯ ಕೋರಿಕೆ

  |
  ಸುದೀಪ್ ಗೆ ದ್ರಾವಿಡ್ ಕಂಡ್ರೆ ಅಷ್ಟೊಂದು ಪ್ರೀತಿ ಯಾಕೆ ಗೊತ್ತಾ..?

  ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಆಟಗಾರ, ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಇಂದು (ಜನವರಿ 10) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾಹುಲ್ ದ್ರಾವಿಡ್ ಗೆ ನಟ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ.

  ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಸುದೀಪ್ ವಿಶ್ ಮಾಡಿದ್ದಾರೆ. ''ಸರ್ ನೀವು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತಲೇ ಇರಿ. ನಿಮ್ಮ ನಂಬಿಕೆ, ನಿಸ್ವಾರ್ಥತೆ, ಶ್ರದ್ಧೆ ಎಲ್ಲವೂ ಅನುಸರಿಸಲು ಯೋಗ್ಯವಾಗಿದೆ. ವಿಶ್ ಯೂ ದಿ ಬೆಸ್ಟ್ ಆಲ್ವೆಸ್ ಸರ್'' ಎಂದು ಬರೆದುಕೊಂಡಿದ್ದಾರೆ.

  ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್ ಕಿಚ್ಚ ಸುದೀಪ್ ಗೆ ದುಬಾರಿ ಉಡುಗೊರೆ ನೀಡಿದ ನಟ ಸಲ್ಮಾನ್ ಖಾನ್

  ಸುದೀಪ್ ಗೆ ಸ್ಫೂರ್ತಿ ನೀಡಿದ ವ್ಯಕ್ತಿಗಳಲ್ಲಿ ದ್ರಾವಿಡ್ ಕೂಡ ಒಬ್ಬರು. ಹಾಗಾಗಿ, ಇದೇ ರೀತಿ ನಮಗೆ ಸ್ಫೂರ್ತಿ ನೀಡುತ್ತಿರಿ ಎಂದು ಪ್ರೀತಿಯ ಮನವಿ ಮಾಡಿದ್ದಾರೆ.

  ಸುದೀಪ್ ಮಾತ್ರವಲ್ಲದೆ ನಿರ್ದೇಶಕ ಪವನ್ ಒಡೆಯರ್ ಕೂಡ ರಾಹುಲ್ ದ್ರಾವಿಡ್ ಗೆ ಶುಭಾಶಯ ತಿಳಿಸಿದ್ದಾರೆ. ಭಾರತದ ಎಷ್ಟೋ ಕಠಿಣ ಪರಿಸ್ಥಿತಿಯ ಪಂದ್ಯಗಳ ಸುರಕ್ಷಕ. ನಿಮ್ಮ ರೀತಿ ಯಾರು ಇಲ್ಲ. ಯಾರೂ ಆಗಲು ಸಾಧ್ಯವಿಲ್ಲ ಎಂದು ಬಣ್ಣಿಸಿದ್ದಾರೆ.

  ಸ್ನೇಹಕ್ಕೆ ಬೆಲೆ ಕೊಟ್ಟು, ನಿರ್ಧಾರ ಬದಲಿಸಿ, 17 ವರ್ಷಗಳ ಬಳಿಕ ಸುದೀಪ್ ಮಾಡಿದ್ದು 'ಈ' ಕೆಲಸ.!ಸ್ನೇಹಕ್ಕೆ ಬೆಲೆ ಕೊಟ್ಟು, ನಿರ್ಧಾರ ಬದಲಿಸಿ, 17 ವರ್ಷಗಳ ಬಳಿಕ ಸುದೀಪ್ ಮಾಡಿದ್ದು 'ಈ' ಕೆಲಸ.!

  ಉಳಿದಂತೆ, ನಟ ಪುನೀತ್ ರಾಜ್ ಕುಮಾರ್, ನಟಿ ರಮ್ಯಾ ಅಭಿಮಾನಿಗಳ ಟ್ವಿಟ್ಟರ್ ಖಾತೆಗಳಲ್ಲಿ ರಾಹುಲ್ ದ್ರಾವಿಡ್ ರಾರಾಜಿಸುತ್ತಿದ್ದಾರೆ.

  English summary
  Kannada actor Sudeep wishes for Rahul Dravid birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X