twitter
    For Quick Alerts
    ALLOW NOTIFICATIONS  
    For Daily Alerts

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಟ ಸುದೀಪ್

    By Bharath Kumar
    |

    ಕಿಚ್ಚ ಸುದೀಪ್ ನಟನೆ ಮಾಡ್ತಾರೆ, ಕ್ರಿಕೆಟ್ ಆಡ್ತಾರೆ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡ್ತಾರೆ, ಹೊಸ ಚಿತ್ರಗಳಿಗೆ, ಹೊಸ ಕಲಾವಿದರಿಗೆ ಪ್ರೋತ್ಸಾಹನೂ ಕೊಡ್ತಾರೆ. ಜೊತೆಗೆ ನಿರಂತರವಾಗಿ ತಮ್ಮ ಅಭಿಮಾನಿಗಳ ಜೊತೆ ಟ್ವಿಟ್ಟರ್ ನಲ್ಲಿ ಮಾತುಕತೆ ನಡೆಸ್ತಾರೆ.

    ಹೀಗೆ, ಸದಾ ಸಿನಿಮಾ, ಸಿನಿಮಾ ಎಂದು ಬಿಜಿ ಇರುವ ಸುದೀಪ್ ಅವರು, ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೊಂದು ಪತ್ರ ಬರೆದಿದ್ದಾರೆ. ''ಒಬ್ಬ ನಟನಾಗಿ ನಾನು ಈ ಪತ್ರ ಬರೆಯುತ್ತಿಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ಈ ಪತ್ರ ಬರೆಯುತ್ತಿದ್ದೇನೆ'' ಎಂದು ಹೇಳುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ.

    ಹಾಗಿದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುದೀಪ್ ಬರೆದಿರುವ ಪತ್ರದಲ್ಲಿ ಏನಿದೆ? ಯಾವ ಅಂಶಗಳ ಬಗ್ಗೆ ಸುದೀಪ್ ಚರ್ಚೆ ಮಾಡಿದ್ದಾರೆ ಎಂದು ಮುಂದೆ ಓದಿ......

    ಕೆರೆಗಳನ್ನ ಸಂರಕ್ಷಿಸಿ...

    ಕೆರೆಗಳನ್ನ ಸಂರಕ್ಷಿಸಿ...

    ''ನಮ್ಮ ಕೆರೆಗಳು ನಮ್ಮ ಜೀವನಾಡಿ. ಅವುಗಳಿಗೆ ಜೀವ ತುಂಬುವುದೆಂದರೆ ಪ್ರಕೃತಿಗೇ ಜೀವ ತುಂಬಿದಂತೆ. ಇಲ್ಲಿರುವ ಪ್ರತಿ ಗಿಡ, ಮರ, ಹಕ್ಕಿಗಳು, ಪ್ರಾಣಿಗಳು, ಮನುಷ್ಯರು... ಪ್ರತಿಯೊಂದೂ ಪ್ರಕೃತಿಯ ಭಾಗವೆ. ಕೆರೆಗಳನ್ನು ಕೊಲ್ಲುವುದೆಂದರೆ ನಮ್ಮ ತಾಯಿ ಪ್ರಕೃತಿಯನ್ನು ಹತ್ಯೆಗೈದಂತೆ'' - ಸುದೀಪ್, ನಟ

    ಕೆರೆಗಳ ಡಿನೋಟಿಫೀಕೇಶನ್ ವಿರುದ್ಧ ರಾಜ್ಯಪಾಲರಿಗೆ ಎಚ್.ಡಿ.ಕೆ ಪತ್ರ

    ಡಿನೋಟಿಫಿಕೇಷನ್ ತಡೆಯಬೇಕು

    ಡಿನೋಟಿಫಿಕೇಷನ್ ತಡೆಯಬೇಕು

    ''ನಿಮಗೆ ಅತ್ಯಂತ ವಿನಮ್ರತೆಯಿಂದ ವಿನಂತಿಸಿಕೊಳ್ಳುತ್ತೇನೆ. ದಯವಿಟ್ಟು ಒಣಗಿ ಹೋಗಿರುವ ಕೆರೆಗಳ ಡಿನೋಟಿಫಿಕೇಷನ್ ಮಾಡುವುದನ್ನು ಮರುಪರಿಶೀಲಿಸಬೇಕು. ಪ್ರಕೃತಿ ಮಾತೆ ಕೆರಳುವುದಕ್ಕೆ ನಾವು ಕಾರಣರಾಗುವುದನ್ನು ತಡೆಯಬೇಕಿದೆ. ನಾವೀಗ ಸಾಕಷ್ಟು ಕಳೆದುಕೊಂಡಿದ್ದೇವೆ. ಆದರೆ, ಉಳಿದಿರುವುದನ್ನಾದರೂ ನಾವು ಉಳಿಸಿಕೊಳ್ಳಬಹುದಲ್ಲವೆ?'' - ಸುದೀಪ್, ನಟ

    ಕೆರೆಗಳ ಡಿನೋಟಿಫಿಕೇಶನ್ ಕೈಬಿಡುವಂತೆ ಸಿಎಂಗೆ ಸದಾನಂದ ಗೌಡ ಪತ್ರ

    ನಾನೊಬ್ಬ ಸಾಮಾನ್ಯನಾಗಿ ಪತ್ರ ಬರೆಯುತ್ತಿದ್ದೇನೆ

    ನಾನೊಬ್ಬ ಸಾಮಾನ್ಯನಾಗಿ ಪತ್ರ ಬರೆಯುತ್ತಿದ್ದೇನೆ

    ''ನಾನು ಒಬ್ಬ ನಟನಾಗಿ ಈ ಪತ್ರವನ್ನು ನಿಮಗೆ ಬರೆಯುತ್ತಿಲ್ಲ. ಈ ಪತ್ರವನ್ನು ಎಲ್ಲ ಶ್ರೀಸಾಮಾನ್ಯರ ಪರವಾಗಿ ಬರೆದಿದ್ದೇನೆ. ಈ ರಾಜ್ಯದೆಡೆಗೆ, ನಗರದೆಡೆಗೆ, ಇಲ್ಲಿ ವಾಸಿಸುವ ಜನರು ಮತ್ತು ಪ್ರಕೃತಿಯ ಮೇಲಿರುವ ಪ್ರೀತಿಯಿಂದ ಈ ಪತ್ರವನ್ನು ಕಳಕಳಿಯಿಂದ ಬರೆದಿದ್ದೇನೆ'' - ಸುದೀಪ್, ನಟ

    ಸುದೀಪ್ ಪತ್ರಕ್ಕೆ ಜನ ಬೆಂಬಲ

    ಸುದೀಪ್ ಪತ್ರಕ್ಕೆ ಜನ ಬೆಂಬಲ

    ಮುಖ್ಯಮಂತ್ರಿ ಅವರಿಗೆ ನಟ ಸುದೀಪ್ ಪತ್ರ ಬರೆದಿರುವ ಬಗ್ಗೆ ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಅವರ ಅಭಿಮತಕ್ಕೆ ಜನ ಬೆಂಬಲ ಸಿಕ್ಕಿದೆ.

    ಬೆಂಗಳೂರು ಕೆರೆಗಳನ್ನು ಕಾಪಾಡಿ ಎಂದು ಸಿಎಂಗೆ ಕಿಚ್ಚ ಸುದೀಪ್ ಪತ್ರ

    English summary
    Kannada actor Kichcha Sudeep has written a letter to chief minister of Karnataka Siddaramaiah to reconsider denotification of dry lakes in Bengaluru. He has requested CM to save mother nature by not killing the lakes, which are already on the death bed.
    Wednesday, August 9, 2017, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X