ಕಿಚ್ಚನ ಫೇವರಿಟ್ ಟೀ ಅಂಗಡಿ ಯಾವುದು ಗೊತ್ತಾ?
Recommended Video

ನಟ ಸುದೀಪ್ ಇಂದು ದೇಶ ವಿದೇಶ ಸುತ್ತುತ್ತಾರೆ, ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಇರುತ್ತಾರೆ. ಆದರೆ, ಸುದೀಪ್ ಅವರಿಗೆ ಇಷ್ಟವಾಗುವ ರುಚಿಯಾದ ಟೀ ಸಿಗುವುದು ಮಾತ್ರ ಕಲಾಸಿಪಾಳ್ಯ ಒಂದು ಸಣ್ಣ ಅಂಗಡಿಯಲ್ಲಿ.
ಕಲಾಸಿಪಾಳ್ಯದಲ್ಲಿ ಫುಟ್ ಬಾತ್ ಮೇಲೆ ಒಂದು ಟೀ ಅಂಗಡಿ ಇದೆ. ಆ ಅಂಗಡಿಗೆ ಸುದೀಪ್ ಸ್ಕೂಲ್, ಕಾಲೇಜ್ ದಿನಗಳಿಂದ ಹೋಗುತ್ತಾರೆ. ವಿಶೇಷ ಅಂದರೆ, ಇಡೀ ರಾತ್ರಿ ಆ ಟೀ ಅಂಗಡಿ ತೆರೆದಿರುತ್ತದೆ. ರಾತ್ರಿ ಎಲ್ಲಿ ಟೀ ಸಿಗುತ್ತೊ ಇಲ್ವೋ ಇಲ್ಲಿ ಮಾತ್ರ ಪಕ್ಕಾ ಇರುತ್ತದೆಯಂತೆ.
ಹಾಸ್ಟಲ್ ನಲ್ಲಿ ಓದುತ್ತಿದ್ದ ಸುದೀಪ್ ರಾತ್ರಿ ಗೆಳೆಯ ಜೊತೆಗೆ ಅದೇ ಟೀ ಅಂಗಡಿಗೆ ಹೋಗುತ್ತಿದ್ದರು. ಒಬ್ಬ ತಾತ ಆ ಅಂಗಡಿಯ ಮಾಲೀಕರಾಗಿದ್ದು, ಅಕ್ಕ ಪಕ್ಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರಂತೆ. ಸಿನಿಮಾ ರಿಲೀಸ್ ದಿನ ಕೂಡ ಕಿಚ್ಚ ಎಷ್ಟೋ ಬಾರಿ ಅಲ್ಲಿಯೇ ಟೀ ಸೇವಿಸುತ್ತಿದ್ದರಂತೆ.

ಇನ್ನೊಂದು ವಿಷಯ ಏನೆಂದರೆ, ಆ ತಾತ ಟೀ ಮಾರಿಯೇ ಮಗಳ ಮದುವೆ ಮಾಡಿದ್ದಾರೆ. ಈ ವಿಚಾರಕ್ಕೆ ಸುದೀಪ್ ಗೆ ಆ ತಾತನನ್ನು ಕಂಡರೆ ತುಂಬ ಇಷ್ಟ. ಇಂದಿಗೂ ಕೂಡ ಆ ಟೀ ರುಚಿ ಹಾಗೂ ಅಂಗಡಿಯ ಕಟ್ಟೆ ಹಾಗೆ ಇದೆಯಂತೆ.


Click it and Unblock the Notifications