ಕಿಚ್ಚನ ಆ ಒಂದು ಸಂದೇಶದಿಂದ ಬದಲಾಯ್ತು ಅಭಿಮಾನಿ ಬದುಕು
Recommended Video

ಕಿಚ್ಚ ಸುದೀಪ್ ಸದ್ಯ ಅಭಿಮಾನಿಗಳ ಜೊತೆಯಲ್ಲಿ ಪ್ರತಿನಿತ್ಯ ಸಂಪರ್ಕದಲ್ಲಿ ಇರುವ ಸ್ಟಾರ್ ನಟ. ಹುಟ್ಟುಹಬ್ಬದ ದಿನ ಯಾವುದಾದರೂ ಸಮಾರಂಭದಲ್ಲಿ ಫ್ಯಾನ್ಸ್ ಗಳನ್ನ ಭೇಟಿ ಮಾಡುವುದು ಸರ್ವೇ ಸಾಮಾನ್ಯ. ಆದರೆ ಕಿಚ್ಚ ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳನ್ನ ಪ್ರತಿ ನಿತ್ಯ ಭೇಟಿ ಮಾಡುತ್ತಾರೆ.
ಅದಷ್ಟೇ ಅಲ್ಲದೆ ಅವರು ಮಾಡುವ ಪ್ರತಿ ಕೆಲಸವನ್ನು ಬೆಂಬಲಿಸುತ್ತಾರೆ. ಪ್ರತಿ ಅಭಿಮಾನಿಯ ಸಂದೇಶಕ್ಕೆ ಉತ್ತರಿಸುತ್ತಾರೆ. ಈ ಮೂಲಕ ಸಾವಿರಾರು ಅಭಿಮಾನಿಗಳಿಗೆ ಮನಸ್ಥೈರ್ಯ ಹೆಚ್ಚಾಗುತ್ತಿದೆ. ಕಿಚ್ಚ ಮಾಡುವ ಮೆಸೆಜ್ ನಿಂದ ಅವರ ಅಭಿಮಾನಿಯ ಬದುಕು ಸಾಕಷ್ಟು ಬದಲಾಗಿದೆ.
ಸದ್ಯ ಇಂಥದೊಂದು ಬದಲಾವಣೆ ಕಿಚ್ಚನ ಅಭಿಮಾನಿ ಬದುಕಲ್ಲಿ ನಡೆದಿದೆ. ಕಿಚ್ಚ ಮಾತನ್ನು ನಂಬಿ ಮುನ್ನೆಡೆದ ಆ ಅಭಿಮಾನಿ ಯಾರು? ಆತನ ಬದುಕಿನಲ್ಲಿ ಸುದೀಪ್ ನಿರ್ವಹಿಸಿದ ಪಾತ್ರ ಎಂತದ್ದು? ಕಿಚ್ಚ ಒಂದು ಸಂದೇಶವನ್ನೇ ತನ್ನ ಬದುಕಿನಲ್ಲಿ ಅಳವಡಿಸಿಕೊಂಡಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಅಭಿಮಾನಿಯ ನೋವಿಗೆ ಔಷಧಿ
ಸರಿಯಾಗಿ ಒಂದು ತಿಂಗಳ ಹಿಂದೆ ಅಭಿಮಾನಿಯೊಬ್ಬರು ಕಿಚ್ಚ ಸುದೀಪ್ ಅವರಿಗೆ ಟ್ವಿಟ್ಟರ್ ಮೂಲಕ ಹಣ ಆಸ್ತಿ ಸೌಂದರ್ಯ ಇಲ್ಲದೆ ಪ್ರೀತಿ ಕಳೆದುಕೊಂಡಿದ್ದೇನೆ. ಎಂದು ತನ್ನ ನೋವನ್ನು ಹಂಚಿಕೊಂಡಿದ್ದರು.ಅದನ್ನ ನೋಡಿದ ಸುದೀಪ್ ಅಭಿಮಾನಿಯ ನೋವಿಗೆ ಔಷಧಿ ಆಗಿದ್ದರು. ಧೈರ್ಯ ತುಂಬುವ ಸಂದೇಶ ಕಳುಹಿಸಿದ್ದರು.

ಕಿಚ್ಚನ ಅಭಿಮಾನಿಯ ಯಶಸ್ಸು
ಸುದೀಪ್ ಕಳುಹಿಸಿದ್ದ ಸಂದೇಶವನ್ನೇ ಬದುಕಿನಲ್ಲಿ ಅಳವಡಿಸಿಕೊಂಡು ಸುಖಿ ಜೀವನವನ್ನು ಕಂಡುಕೊಂಡ ಅಭಿಮಾನಿ ಭಾಗಪ್ಪ. ಗುಲ್ಬರ್ಗದ ನಿವಾಸಿ ಆಗಿರುವ ಭಾಗಪ್ಪ ಸಾಕಷ್ಟು ವರ್ಷಗಳಿಂದ ಕಿಚ್ಚನ ಅಭಿಮಾನಿ.

ಸಂದೇಶದಿಂದ ಬದಲಾಯ್ತು ಬದುಕು
ಕಿಚ್ಚ ಸುದೀಪ್ ಭಾಗಪ್ಪ ಅವರ ಸಂದೇಶವನ್ನು ನೋಡಿ "ಒಂದೇ ಜೀವನ, ಒಂದೇ ಅವಕಾಶ, ಪ್ರೀತಿ ಕೊಡುವುದು, ಕಿತ್ತುಕೊಳ್ಳುವುದಲ್ಲ. ನಿಮ್ಮ ಪೋಷಕರಿಗೆ ಒಳ್ಳೆಯವರಾಗಿರಿ, ನಿಮ್ಮ ಪ್ರಪಂಚದಲ್ಲಿ ಯಾರಿದ್ದಾರೋ ಅವರ ಜೊತೆ ಪ್ರೀತಿಯಿಂದಿರಿ. ನಿಮ್ಮ ಜೀವನವನ್ನು ಚೆನ್ನಾಗಿ ಮಾಡಿಕೊಳ್ಳು ಸುಮ್ಮನೆ ಸಮಯ ಹಾಳು ಮಾಡಬೇಡಿ" ಎಂದು ಟ್ವಿಟ್ ಮಾಡಿದ್ದರು. ಇದೇ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಅಭಿಮಾನಿ ಇಂದು ಖುಷಿಯಾಗಿದ್ದಾರೆ.

ಖುಷಿಯಾಗಿರುವುದಾಗಿ ತಿಳಿಸಿದ ಅಭಿಮಾನಿ
ಒಂದು ತಿಂಗಳ ನಂತರ ಟ್ವಿಟ್ಟರ್ ಮೂಲಕ ಸಂದೇಶ ಕಳುಹಿಸಿರುವ ಸುದೀಪ್ ಅಭಿಮಾನಿ " ನೀವು ಹೇಳಿದ್ದು ಸತ್ಯ. ಎಲ್ಲಾ ಎಕ್ಸಾಂ ಚೆನ್ನಾಗಿ ಬರಿದಿದ್ದೇನೆ. ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೇನೆ. ಪ್ರೀತಿ ತಾನಾಗಿಯೇ ಸಿಗುತ್ತಿದೆ" ಎಂದಿದ್ದಾರೆ. ಇದರಿಂದ ಖುಷಿ ಆಗಿರುವ ಸುದೀಪ್ "ನಿಮ್ಮ ಜೀವನಕ್ಕಿಂತ ಮುಖ್ಯವಾದದ್ದು ಮತ್ತೊಂದು ಇಲ್ಲ ಅದನ್ನು ಪ್ರೀತಿ ಮಾಡಿ. ನನ್ನ ಮಾತಿಗೆ ಬೆಲೆ ಕೊಟ್ಟಿದಕ್ಕೆ ಧನ್ಯವಾದಗಳು" ಎಂದಿದ್ದಾರೆ.


Click it and Unblock the Notifications











