Dharmendra: ಆರೋಗ್ಯ ಸಮಸ್ಯೆ; ಮಗ ಸನ್ನಿ ಡಿಯೋಲ್ ಜೊತೆ ಅಮೆರಿಕಾಕ್ಕೆ ತೆರಳಿದ ನಟ ಧರ್ಮೇಂದ್ರ

ಇತ್ತೀಚೆಗೆ ಬಿಡುಗಡೆಯಾದ ಗದರ್ 2 ಚಿತ್ರದ ಭರ್ಜರಿ ಯಶಸ್ಸಿನಲ್ಲಿ ಮುಳುಗಿರುವ ಬಾಲಿವುಡ್ ನಟ ಸನ್ನಿ ಡಿಯೋಲ್, ತಮ್ಮ ತಂದೆ, ಹಿರಿಯ ನಟ ಧರ್ಮೇಂದ್ರ ಅವರನ್ನು ಆರೋಗ್ಯ ಚಿಕಿತ್ಸೆಗಾಗಿ ಯುಎಸ್‌ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇಂಡಿಯಾ ಟುಡೆ ಉಲ್ಲೇಖಿಸಿದ ಮೂಲಗಳ ಪ್ರಕಾರ, ತಂದೆ ಮತ್ತು ಮಗ ಇಬ್ಬರೂ ಸುಮಾರು 20 ದಿನಗಳ ಕಾಲ ಅಮೆರಿಕಾದಲ್ಲಿ ಇರುತ್ತಾರೆ. ಮೂಲಗಳು "ಧರ್ಮೇಂದ್ರ ಸರ್‌ಗೆ ಪ್ರಸ್ತುತ 87 ವರ್ಷ ವಯಸ್ಸಾಗಿದೆ. ಅವರಿಗೆ ಹಲವು ಆರೋಗ್ಯ ಸಮಸ್ಯೆಗಳಿವೆ. ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ, ಸನ್ನಿ ಡಿಯೋಲ್ ಅವರು ತನ್ನ ತಂದೆಯನ್ನು ಯುಎಸ್‌ಎಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಅವರು 15 ರಿಂದ 20 ದಿನಗಳವರೆಗೆ ಯುಎಸ್‌ನಲ್ಲಿ ಇರುತ್ತಾರೆ. ಜೊತೆಗೆ ಚಿಕಿತ್ಸೆ ನಡೆಯುವವರೆಗೆ ಇರುತ್ತಾರೆ. ಆದರೆ, ಚಿಂತೆ ಮಾಡುವಂತಹದ್ದು ಏನೂ ಇಲ್ಲ" ಎಂದು ಹೇಳಿದ್ದಾರೆ.

actor-sunny-deol

ಗದರ್ 2 ಬಾಕ್ಸ್ ಆಫೀಸ್ ಕಲೆಕ್ಷನ್

ಇನ್ನು, ಆಗಸ್ಟ್ 11 ರಂದು ಬಿಡುಗಡೆಯಾದ ಸನ್ನಿ ಡಿಯೋಲ್ ಅವರ ಗದರ್ 2 ಚಿತ್ರ ಈ ವರ್ಷದ ಬಹುದೊಡ್ಡ ಚಿತ್ರಗಳಲ್ಲಿ ಒಂದಾಗಿದೆ. ಅನಿಲ್ ಶರ್ಮಾ ನಿರ್ದೇಶನದ ಈ ಚಿತ್ರವು ಥಿಯೇಟರ್‌ಗಳಲ್ಲಿ ಮೊದಲ ದಿನದಂದು 40 ಕೋಟಿ ರೂಪಾಯಿ ಗಳಿಸಿತ್ತು. ಬಾಹುಬಲಿ 2 ಮತ್ತು ಪಠಾಣ್‌ ಅಬ್ಬರದಂತೆಯೇ ಈ ಸಿನಿಮಾ ಕೂಡ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ.

ಮೊದಲ ವಾರದಲ್ಲಿ ಗದರ್ 2 ಸಿನಿಮಾ 284.63 ಕೋಟಿ ಗಳಿಸಿದರೆ, ಎರಡನೇ ವಾರದಲ್ಲಿ 134.47 ಕೋಟಿ ಮತ್ತು ಮೂರನೇ ವಾರದಲ್ಲಿ 63.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಐತಿಹಾಸಿಕ ಗದರ್ ಚಿತ್ರದ ಮುಂದುವರಿದ ಭಾಗವಾಗಿದ್ದು, ಸನ್ನಿ ಡಿಯೋಲ್ ತಾರಾ ಸಿಂಗ್ ಎಂಬ ಟ್ರಕ್ ಡ್ರೈವರ್ ಪಾತ್ರವನ್ನು ನಿರ್ವಹಿಸಿದರೆ, ಅಮೀಶಾ ಪಟೇಲ್ ಅವರ ಪತ್ನಿ ಸಕೀನಾ ಪಾತ್ರವನ್ನು ನಿರ್ವಹಿಸಿದ್ದಾರೆ.

actor-sunny-deol

ಇತ್ತೀಚೆಗೆ ಚಿತ್ರದ ಪಾತ್ರವರ್ಗ ಮತ್ತು ತಂಡವು ಗದರ್ 2 ರ ಗ್ರ್ಯಾಂಡ್ ಸಕ್ಸಸ್ ಪಾರ್ಟಿಯನ್ನು ಆಯೋಜಿಸಿತ್ತು. ಇದರಲ್ಲಿ ಧರ್ಮೇಂದ್ರ ಕೂಡ ಭಾಗವಹಿಸಿದ್ದರು. ಇನ್ನು, ಹಿರಿಯ ನಟ ಧರ್ಮೇಂದ್ರ ಅವರು ಕರಣ್ ಜೋಹರ್ ನಿರ್ದೇಶನದ ಇತ್ತೀಚೆಗೆ ಬಿಡುಗಡೆಯಾಗಿದ್ದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಂಡಿದ್ದರು.

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಧರ್ಮೇಂದ್ರ ಅವರು ರಣವೀರ್ ಸಿಂಗ್, ಆಲಿಯಾ ಭಟ್, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಅವರೊಂದಿಗೆ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಜುಲೈ 28, 2023 ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಧರ್ಮೇಂದ್ರ ರಣವೀರ್ ಸಿಂಗ್ ಅವರ ತಾತನ ಪಾತ್ರವನ್ನು ನಿರ್ವಹಿಸಿದ್ದಾರೆ.

More from Filmibeat

English summary
Actor Sunny Deol takes Dharmendra to US for special treatment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X