twitter
    For Quick Alerts
    ALLOW NOTIFICATIONS  
    For Daily Alerts

    ತಮಿಳು ನಟರ ನಿರ್ಧಾರದಂತೆ ಕನ್ನಡ ನಟರು ಹೆಜ್ಜೆ ಇಡಬೇಕಿದೆ

    |

    Recommended Video

    ತಮಿಳು, ತೆಲುಗು ನಟರು ಮಾಡಿದ ಮೇಲೆ ನಮ್ಮೋರು ಮಾಡೋದು..? | Oneindia Kannada

    ಸೆಪ್ಟೆಂಬರ್ 12 ರಂದು ಸಾಫ್ಟ್ ವೇರ್ ಇಂಜಿನಿಯರ್ ಯುವತಿ ಶುಭಶ್ರೀ ಆಫೀಸಿನಿಂದ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆ ಬದಿಯಲ್ಲಿ ಅಕ್ರಮವಾಗಿ ಹಾಕಲಾಗಿದ್ದ ಫ್ಲೆಕ್ಸ್ ಆಕೆಯೆ ಮೇಲೆ ಬಿದ್ದಿದೆ. ಆ ಸಮಯದಲ್ಲಿ ಆಕೆಯೆ ಹಿಂದೆಯೇ ಬರುತ್ತಿದ್ದ ಟ್ರಕ್ ಶುಭಶ್ರೀ ಮೇಲೆ ಹರಿದು ದುರ್ಮರಣ ಹೊಂದಿದ್ದರು.

    ಈ ಘಟನೆಗೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಗಿತ್ತು. ಫ್ಲೆಕ್ಸ್, ಬ್ಯಾನರ್ ಹಾಕದಂತೆ ಸರ್ಕಾರಗಳು ಘೋಷಣೆ ಹೊರಡಿಸಿದರೂ ಅಕ್ರಮವಾಗಿ ಹಾಕಿ, ಅದರಿಂದ ಜನರ ಪ್ರಾಣ ಹಾನಿಯಾಗುತ್ತಿದೆ ಎಂದು ಅನೇಕರು ವಿರೋಧಿಸಿದ್ದರು.

    ಶುಭಶ್ರೀ ದುರಂತ ಕಂಡು ಮರುಗಿದ ಸ್ಟಾರ್ ನಟರಿಂದ ಮಹತ್ವದ ಘೋಷಣೆ

    ಈ ಅವಘಡವನ್ನ ಗಮನಿಸಿದ ತಮಿಳು ನಟ ವಿಜಯ್ ಮತ್ತು ಸೂರ್ಯ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ರಿಲೀಸ್ ವೇಳೆ ಯಾವುದೇ ಕಟೌಟ್, ಪೋಸ್ಟರ್, ಬ್ಯಾನರ್ ಗಳನ್ನ ಹಾಕಬೇಡಿ ಎಂದು ಕೇಳಿಕೊಂಡಿದ್ದಾರೆ. ತಮಿಳು ನಟರ ಈ ಮಹತ್ವದ ನಿರ್ಧಾರದಂತೆ ಸ್ಯಾಂಡಲ್ ವುಡ್ ನಟರು ತಮ್ಮ ಅಭಿಮಾನಿಗಳಿಗೆ ಹೇಳಿದರೆ, ಭವಿಷ್ಯದಲ್ಲಿ ನಡೆಯಬಹುದಾದ ಪ್ರಾಣಹಾನಿಯನ್ನ ತಡೆಯಬಹುದು. ಮುಂದೆ ಓದಿ...

    ಪ್ರಾಣ ಕಳೆದುಕೊಂಡಿದ್ದ ಅಭಿಮಾನಿ

    ಪ್ರಾಣ ಕಳೆದುಕೊಂಡಿದ್ದ ಅಭಿಮಾನಿ

    ಮಹೇಶ್ ಬಾಬು ಅಭಿನಯಿಸಿದ್ದ 'ಮಹರ್ಷಿ' ಸಿನಿಮಾ ತೆರೆಕಂಡ ಸಂದರ್ಭದಲ್ಲಿ, ಯರ್ರಂಶೆಟ್ಟಿ ಎಂಬ ಅಭಿಮಾನಿ ಚಿತ್ರಮಂದಿರದ ಬಳಿ ಫ್ಲೆಕ್ಸ್ ಹಾಕಲು ಹೋಗಿ, ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ. ಇಂತಹ ಘಟನೆಗಳು ಮತ್ತೆ ಮತ್ತೆ ಮರುಳಿಸಬಾರದು ಅಂದ್ರೆ ಸಿನಿಮಾ ನಟರು ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ.

    'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು'ಮಹರ್ಷಿ' ಚಿತ್ರದ ರಿಲೀಸ್ ವೇಳೆ ಅಭಿಮಾನಿ ಸಾವು

    ಕಟೌಟ್ ಕುಸಿದು ಐವರಿಗೆ ಗಾಯ

    ಕಟೌಟ್ ಕುಸಿದು ಐವರಿಗೆ ಗಾಯ

    ತಮಿಳು ನಟ ಅಜಿತ್ ಕುಮಾರ್ ಅಭಿನಯಿಸಿದ್ದ 'ವಿಶ್ವಾಸಂ' ಸಿನಿಮಾ ಬಿಡುಗಡೆಯಾಗಿದ್ದ ಸನ್ನಿವೇಶದಲ್ಲಿ, ಚಿತ್ರಮಂದಿರದ ಮುಂದೆ ಅಜಿತ್ ಕೌಟ್ ಹಾಕಲಾಗಿತ್ತು. ಇದಕ್ಕೆ ಹಾಲಾಭಿಷೇಕ ಮಾಡುವ ವೇಳೆ ಕಟೌಟ್ ಕುಸಿದು ಐವರಿಗೆ ಗಾಯ ಆಗಿತ್ತು. ಸದ್ಯದ ಪ್ರಾಣಾಪಾಯದಿಂದ ಪಾರಾಗಿದ್ದರು.

    ಹಾಲಿನ ಅಭಿಷೇಕ ಮಾಡುವಾಗ ಅವಘಡ: ಕುಸಿದ ಅಜಿತ್ ಕಟೌಟ್, ಐವರಿಗೆ ಗಂಭೀರ ಗಾಯ.!ಹಾಲಿನ ಅಭಿಷೇಕ ಮಾಡುವಾಗ ಅವಘಡ: ಕುಸಿದ ಅಜಿತ್ ಕಟೌಟ್, ಐವರಿಗೆ ಗಂಭೀರ ಗಾಯ.!

    ಕರ್ನಾಟಕದಲ್ಲೂ ಇಂತಹ ಘಟನೆ ನಡೆದಿದೆ

    ಕರ್ನಾಟಕದಲ್ಲೂ ಇಂತಹ ಘಟನೆ ನಡೆದಿದೆ

    ಈ ಹಿಂದೆ ದರ್ಶನ್, ಪುನೀತ್, ಯಶ್, ಸುದೀಪ್ ಅವರ ಸಿನಿಮಾಗಳು ಬಿಡುಗಡೆಯಾದಾಗ ಅವರ ಸಿನಿಮಾ ಪೋಸ್ಟರ್, ಬ್ಯಾನರ್ ಹಾಕಲು ಹೋಗಿ ಗಾಯ ಮಾಡಿಕೊಂಡಿರುವ ಘಟನೆಗಳು ನೆನಪಿದೆ. ಹಾಗಾಗಿ, ಬಹಳ ಎತ್ತರವಾಗಿ ಫ್ಲೆಕ್ಸ್ ಹಾಕುವುದು, ದೊಡ್ಡ ದೊಡ್ಡ ಕಟೌಟ್ ಗಳನ್ನ ನಿಲ್ಲಿಸುವುದನ್ನ ಪ್ರೋತ್ಸಾಹಿಸಬಾರದು.

    ಪ್ರತಿಷ್ಠೆಗಾಗಿ ಬ್ಯಾನರ್ ಹೆಚ್ಚು ಹಾಕಲಾಗುತ್ತಿದೆ

    ಪ್ರತಿಷ್ಠೆಗಾಗಿ ಬ್ಯಾನರ್ ಹೆಚ್ಚು ಹಾಕಲಾಗುತ್ತಿದೆ

    ಕರ್ನಾಟದಲ್ಲೂ ಬ್ಯಾನರ್, ಫ್ಲೆಕ್ಸ್ ಗಳನ್ನ ಹಾಕುವುದು ನಿಷೇಧವಾಗಿದೆ. ಆದರೂ ಚಿತ್ರಮಂದಿರಗಳ ಬಳಿ ಬ್ಯಾನರ್, ಫ್ಲೆಕ್ಸ್ ಗಳು ಸಾಮಾನ್ಯವಾಗಿದೆ. ಅದರಲ್ಲು ಸ್ಟಾರ್ ನಟರ ಚಿತ್ರಗಳು ಬಂದಾಗ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಅಭಿಮಾನಿಗಳು, ಇಡೀ ಚಿತ್ರಮಂದಿರವನ್ನೇ ಪೋಸ್ಟರ್, ಬ್ಯಾನರ್ ಗಳಿಂದ ಮುಚ್ಚಿ ಹಾಕಿರುವುದು ನೋಡಿದ್ದೇವೆ.

    ನ್ಯಾಯಾಲಯವನ್ನೂ ಭಾವುಕವಾಗಿಸಿದ ಟೆಕ್ಕಿ ಶುಭಶ್ರೀ ದಾರುಣ ಸಾವು

    ಕನ್ನಡ ನಟರು ಎಚ್ಚೆತ್ತುಕೊಳ್ಳಬೇಕಿದೆ

    ಕನ್ನಡ ನಟರು ಎಚ್ಚೆತ್ತುಕೊಳ್ಳಬೇಕಿದೆ

    ಸದ್ಯ ಶುಭಶ್ರೀ ಅವರ ಘಟನೆಯಿಂದ ತಮಿಳು ಇಂಡಸ್ಟ್ರಿ ಎಚ್ಚೆತ್ತುಕೊಂಡಿದೆ. ಅಭಿಮಾನಿಗಳಿಗೆ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ. ಅದೇ ರೀತಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಕೂಡ ತಮ್ಮ ಅಭಿಮಾನಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕಾಗದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಶುಭಶ್ರೀ ಅಂತಹ ಘಟನೆಗಳು ನಮ್ಮಲ್ಲೂ ನಡೆದರೂ ಅಚ್ಚರಿ ಇಲ್ಲ.

    English summary
    Tamil actors Suriya and Vijay had argued their fan clubs to abandon large flexes as publicity material for their upcoming movies. this is want to implement in sandalwood aslo.
    Wednesday, September 18, 2019, 13:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X