ತೇಜಸ್ವಿ ಸೂರ್ಯರನ್ನು ಮೆಚ್ಚಿದ ತಮಿಳು ನಟ ಸೂರ್ಯ
Recommended Video
ನೂತನ ಸಂಸದ ತೇಜಸ್ವಿ ಸೂರ್ಯರನ್ನು ತಮಿಳು ನಟ ಸೂರ್ಯ ಮೆಚ್ಚಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ರಾಜಕೀಯ ಬಂದ ತೇಜಸ್ವಿ ಬಗ್ಗೆ ಸೂರ್ಯ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.
ತಮಿಳು ನಟ ಸೂರ್ಯ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬಗ್ಗೆ ಯಾಕೆ, ಏನು ಮಾತನಾಡಿದರು ಎನ್ನುವ ಕುತೂಹಲ ಮೂಡಬಹುದು. ತೇಜಸ್ವಿ ಸೂರ್ಯ ಬಗ್ಗೆ ನಟ ಸೂರ್ಯ ಮಾತನಾಡಿದ್ದಕ್ಕೂ ಕಾರಣ ಇದೆ.
ವ್ಯಕ್ತಿ ಚಿತ್ರ: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ
ನಟ ಸೂರ್ಯ ಅಭಿನಯದ 'NGK' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಕಥೆ ರಾಜಕೀಯದ ಬಗ್ಗೆ ಇದೆ. ಸಾಮಾನ್ಯ ಜನ, ರಾಜಕೀಯ ಮತ್ತು ಸಮಾಜದ ಕೆಲ ವಿಷಯಗಳ ಮೇಲೆ ಸಿನಿಮಾವನ್ನು ಮಾಡಲಾಗಿದೆ.

ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ (ಮಂಗಳವಾರ) ಹೈದರಾಬಾದ್ ನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸೂರ್ಯ ''ಯುವಕರು ರಾಜಕೀಯದ ಬಗ್ಗೆ ಜ್ಞಾನ ಹೊಂದಿರಬೇಕು. ರಾಜಕೀಯ ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿದುಕೊಂಡಿರಬೇಕು. ರಾಜಕೀಯ ಪಕ್ಷಗಳು ಏನು ಮಾಡಿವೆ ಎನ್ನುವುದಕ್ಕಿಂತ, ಸಮಾಜಕ್ಕೆ ನಾವೇನು ಮಾಡಿದ್ದೇವೆ ಎಂದು ಯೋಚನೆ ಮಾಡಬೇಕು'' ಎಂದರು.
ಈ ವೇಳೆ ರಾಜಕೀಯಕ್ಕೆ ಬರುತ್ತಿರುವ ಯುವಕರ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು ಆಂಧ್ರದ ಜಗನ್, ಬೆಂಗಳೂರಿನ ತೇಜಸ್ವಿ ಸೂರ್ಯ ಹೆಸರು ತಗೆದುಕೊಂಡರು. 28 ವರ್ಷಕ್ಕೆ ಎಮ್ ಪಿ ಯಾದ ತೇಜಸ್ವಿ ಸೂರ್ಯರನ್ನು ಹೊಗಳಿದರು.
ಸೂರ್ಯ ನಟನೆಯ 'NGK' ಸಿನಿಮಾ ಇದೇ ತಿಂಗಳ 31 ರಂದು ಬಿಡುಗಡೆಯಾಗಿದೆ.


Click it and Unblock the Notifications











