Just In
Don't Miss!
- Sports
ಐಎಸ್ಎಲ್: ಮುಂಬೈ ಸಿಟಿ vs ಚೆನ್ನೈಯಿನ್ ಹಣಾಹಣಿ, Live ಸ್ಕೋರ್
- News
ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿ ವಿವಾದ: ಬಹಿರಂಗ ಸವಾಲು ಹಾಕಿದ ದಿಂಗಾಲೇಶ್ವರ ಶ್ರೀ
- Automobiles
ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಹೀರೋ ಮೋಟೊಕಾರ್ಪ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಜಯನಗರ 4th ಬ್ಲಾಕ್' ವೆಂಕಿ ಅಜ್ಜ ನಿಧನ, ಧನಂಜಯ್ ಕಂಬನಿ
ನಿರ್ದೇಶಕ ಸತ್ಯ ಅವರ ಪ್ರೀತಿಯ ಅಜ್ಜ, ಗುರು ಸುಬ್ಬರಾವ್ ಅವರು ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ನಟ ಧನಂಜಯ್ ಸಹ ಕಂಬನಿ ಮಿಡಿದಿದ್ದಾರೆ.
ರಂಗಕರ್ಮಿಯೂ ಆಗಿದ್ದ ಸುಬ್ಬರಾವ್ ಅವರು ನಟ ಧನಂಜಯ್ ಜೊತೆಗೆ ಕಿರುಚಿತ್ರ 'ಜಯನಗರ 4th ಬ್ಲಾಕ್' ಕಿರು ಚಿತ್ರದಲ್ಲಿ ನಟಿಸಿದ್ದರು. ಕಿರುಚಿತ್ರದಲ್ಲಿ ವೆಂಕಿ ಎಂಬ ಪಾತ್ರದಲ್ಲಿ ನಟಿಸಿದ್ದರು ಸುಬ್ಬರಾವ್.
ಸುಬ್ಬರಾವ್ ಕುರಿತು ಭಾವುಕ ಪೋಸ್ಟ್ ಹಾಕಿರುವ ನಿರ್ದೇಶಕ ಸತ್ಯ, 'ನನ್ನ ಅಜ್ಜ, ನನ್ನ ಕ್ರಿಯಾಶೀಲತೆಯ ಗುರು, ಅನೇಕ ಪೌರಾಣಿಕ ಪಾತ್ರಗಳನ್ನು ನನಗೆ ಪರಿಚಯಿಸಿದ ಮೇಷ್ಟರು, ರಾಷ್ಟ್ರಪ್ರಶಸ್ತಿ ವಿಜೇತ ಸುಬ್ಬಾರಾವ್ 96 ವಸಂತಗಳ ತುಂಬು ಜೀವನ ಪೂರೈಸಿ ನಿರ್ಗಮಿಸಿದ್ದಾರೆ, ಅವರಿತ್ತ ಸ್ಪೂರ್ತಿಗೆ ಕೊನೆ ಎಂಬುದಿಲ್ಲ' ಎಂದಿದ್ದಾರೆ ಸತ್ಯ.
ನಟ ಧನಂಜಯ್ ಸಹ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದು, 'ಜಯನಗರ 4th ಬ್ಲಾಕ್ ನಲ್ಲಿ ಜೊತೆಯಾದ ಜೀವ, ಸ್ಫೂರ್ತಿಯಾದ ಜೀವ, ನನ್ನ ಪಾಲಿನ ವೆಂಕಿ, ಸುಬ್ಬರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ' ಎಂದಿದ್ದಾರೆ.
ಜಯನಗರ 4th ಬ್ಲಾಕ್ ಸಿನಿಮಾದಲ್ಲಿ ಧನಂಜಯ್ ಅವರ ಹಿರಿಯ ಸ್ನೇಹಿತನಾಗಿ ಅದ್ಭುತವಾಗಿ ನಟಿಸಿದ್ದರು ಸುಬ್ಬಾರಾವ್. ಅವರ ವೆಂಕಿ ಪಾತ್ರ ಬಹಳ ಚೆನ್ನಾಗಿತ್ತು.