For Quick Alerts
  ALLOW NOTIFICATIONS  
  For Daily Alerts

  'ಜಯನಗರ 4th ಬ್ಲಾಕ್‌' ವೆಂಕಿ ಅಜ್ಜ ನಿಧನ, ಧನಂಜಯ್ ಕಂಬನಿ

  |

  ನಿರ್ದೇಶಕ ಸತ್ಯ ಅವರ ಪ್ರೀತಿಯ ಅಜ್ಜ, ಗುರು ಸುಬ್ಬರಾವ್ ಅವರು ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ನಟ ಧನಂಜಯ್ ಸಹ ಕಂಬನಿ ಮಿಡಿದಿದ್ದಾರೆ.

  ರಂಗಕರ್ಮಿಯೂ ಆಗಿದ್ದ ಸುಬ್ಬರಾವ್ ಅವರು ನಟ ಧನಂಜಯ್ ಜೊತೆಗೆ ಕಿರುಚಿತ್ರ 'ಜಯನಗರ 4th ಬ್ಲಾಕ್' ಕಿರು ಚಿತ್ರದಲ್ಲಿ ನಟಿಸಿದ್ದರು. ಕಿರುಚಿತ್ರದಲ್ಲಿ ವೆಂಕಿ ಎಂಬ ಪಾತ್ರದಲ್ಲಿ ನಟಿಸಿದ್ದರು ಸುಬ್ಬರಾವ್.

  ಸುಬ್ಬರಾವ್ ಕುರಿತು ಭಾವುಕ ಪೋಸ್ಟ್ ಹಾಕಿರುವ ನಿರ್ದೇಶಕ ಸತ್ಯ, 'ನನ್ನ ಅಜ್ಜ, ನನ್ನ ಕ್ರಿಯಾಶೀಲತೆಯ ಗುರು, ಅನೇಕ ಪೌರಾಣಿಕ ಪಾತ್ರಗಳನ್ನು ನನಗೆ ಪರಿಚಯಿಸಿದ ಮೇಷ್ಟರು, ರಾಷ್ಟ್ರಪ್ರಶಸ್ತಿ ವಿಜೇತ ಸುಬ್ಬಾರಾವ್ 96 ವಸಂತಗಳ ತುಂಬು ಜೀವನ ಪೂರೈಸಿ ನಿರ್ಗಮಿಸಿದ್ದಾರೆ, ಅವರಿತ್ತ ಸ್ಪೂರ್ತಿಗೆ ಕೊನೆ ಎಂಬುದಿಲ್ಲ' ಎಂದಿದ್ದಾರೆ ಸತ್ಯ.

  ನಟ ಧನಂಜಯ್ ಸಹ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದು, 'ಜಯನಗರ 4th ಬ್ಲಾಕ್ ನಲ್ಲಿ ಜೊತೆಯಾದ ಜೀವ, ಸ್ಫೂರ್ತಿಯಾದ ಜೀವ, ನನ್ನ ಪಾಲಿನ ವೆಂಕಿ, ಸುಬ್ಬರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ' ಎಂದಿದ್ದಾರೆ.

  ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada

  ಜಯನಗರ 4th ಬ್ಲಾಕ್ ಸಿನಿಮಾದಲ್ಲಿ ಧನಂಜಯ್ ಅವರ ಹಿರಿಯ ಸ್ನೇಹಿತನಾಗಿ ಅದ್ಭುತವಾಗಿ ನಟಿಸಿದ್ದರು ಸುಬ್ಬಾರಾವ್. ಅವರ ವೆಂಕಿ ಪಾತ್ರ ಬಹಳ ಚೆನ್ನಾಗಿತ್ತು.

  English summary
  Actor, theater artist Subbarao died on Monday. Director Sathya post emotional post, Dhananjay wished rest in peace.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X