ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ 'ತೂಗುದೀಪ ಶ್ರೀನಿವಾಸ್'

By Pavithra

ನಟ ತೂಗುದೀಪ ಶ್ರೀನಿವಾಸ್, ಅಭಿಮಾನಿಗಳನ್ನ ಅಗಲಿ ಸಾಕಷ್ಟು ವರ್ಷಗಳೇ ಕಳೆದರೂ ಕೂಡ ಇಂದಿಗೂ ಅದೆಷ್ಟೋ ಜನರ ಮನಸ್ಸಿನಲ್ಲಿ ಹಚ್ಚೆಯಾಗಿ ಅಚ್ಚಳಿಯದೇ ಉಳಿದು ಬಿಟ್ಟಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಸ್ಥಾನದಲ್ಲಿ ಅಭಿಮಾನಿಗಳು ಅವರ ಮಗನಾದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ರನ್ನ ನೋಡುತ್ತಿದ್ದಾರೆ. ನಮ್ಮಿಂದ ಮರೆಯಾಗಿರುವ ನಟನ ಚಿತ್ತಾರವನ್ನ ಮೈಮೇಲೆ ಹಚ್ಚೆ ಹಾಕಿಸಿಕೊಳ್ಳೊ ಮೂಲಕ ಇಂದಿಗೂ ತೂಗುದೀಪ ಶ್ರೀನಿವಾಸರನ್ನ ನೆನಪಿನಲ್ಲಿರಿಸಿದ್ದಾರೆ.

actor thoogudeepa Srinivas The tattoo photo is viral

ಇತ್ತೀಚಿಗಷ್ಟೆ ಅಭಿಮಾನಿಯೊಬ್ಬರು ನಟ ದಿವಂಗತ ತೂಗುದೀಪ ಶ್ರೀನಿವಾಸ್ ರ ಟ್ಯಾಟೂ ವನ್ನ ಹಾಕಿಸಿಕೊಂಡಿದ್ದಾರೆ. ಆ ಪೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಷ್ಟೇ ಅಲ್ಲದೇ ಟ್ಯಾಟೂ ಮತ್ತು ಹಾಕಿಸಿಕೊಂಡಿರೋ ಅಭಿಮಾನಿಯ ಭಾವಚಿತ್ರ ವಾಟ್ಸ್ ಆಪ್ ಗಳ ಪ್ರೊಫೈಲ್ ಪೋಟೋಗಳಾಗಿ ಬದಲಾಗಿದೆ.

actor thoogudeepa Srinivas The tattoo photo is viral

ಸಾಮಾನ್ಯವಾಗಿ ಈಗ ಬಂದಿರೋ ಹಾಗೂ ಸ್ಯಾಂಡಲ್ ವುಡ್ ನಲ್ಲಿ ನಂಬರ್ ಒನ್ ಪಟ್ಟದಲ್ಲಿರೋ ಸ್ಟಾರ್ ಗಳ ಫೋಟೋ ಗಳನ್ನ ಟ್ಯಾಟೂ ಹಾಕಿಸಿಕೊಳ್ಳೊದು ಕಾಮನ್ ವಿಚಾರ, ಆದರೆ ಈ ಅಭಿಮಾನಿ ತೂಗುದೀಪ ಶ್ರೀನಿವಾಸರ ಅಪ್ಪಟ ಅಭಿಮಾನಿ, ಆದ್ದರಿಂದ ಓಲ್ಡ್ ಇಸ್ ಗೋಲ್ಡ್ ಅನ್ನೋ ರೀತಿಯಲ್ಲಿ ತೂಗುದೀಪ ಅವರ ಮುಖವನ್ನ ತಮ್ಮ ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

actor thoogudeepa Srinivas The tattoo photo is viral

ಚಾಲೆಂಜಿಂಗ್ ಸ್ಟಾರ್ ಅಭಿಮಾನಿ ಆಗಿರೋ ಈ ವ್ಯಕ್ತಿ ಎಲ್ಲರಿಗಿಂದಲೂ ವಿಭಿನ್ನವಾಗಿ ಯೋಚನೆ ಮಾಡಬೇಕು ಅನ್ನೂ ಉದ್ದೇಶದಿಂದ ಈ ರೀತಿ ಮಾಡಿದ್ದಾರಂತೆ. ದರ್ಶನ್ ಫೋಟೋ ಹಾಕಿಸಿಕೊಳ್ಳೊದು ಮಾಮೂಲಿ ಆದರೆ ಮಗನಿಗೆ ಮತ್ತು ತಂದೆಗೆ ಇಬ್ಬರಿಗೂ ಅಭಿಮಾನಿ ಆಗೋದೇ ಸ್ಪೆಷಲ್ ಅನ್ನೋ ರೀತಿ ಬಿಂಬಿತವಾಗ್ತಿದೆ ಈ ಟ್ಯಾಟೂ ಫೋಟೋ.

More from Filmibeat

English summary
Shyam Gaja Thogudeepa ardent fan of Late actor,kannada villain Thoogudeepa Srinivas,inked a tattoo of the actor.Thoogudeepa Srinivas tattoo photo goes viral in social media .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X