»   » ಯಶ್ ಗೆ 'ಮಾಂಜಾ' ಕೊಡುತ್ತಾರಾ ತಿಲಕ್?

ಯಶ್ ಗೆ 'ಮಾಂಜಾ' ಕೊಡುತ್ತಾರಾ ತಿಲಕ್?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಲಕ್ಕಿ ಜೋಡಿಗಳಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಪ್ರಿನ್ಸಸ್ ರಾಧಿಕಾ ಪಂಡಿತ್ ಜೋಡಿಯಾಗಿ ಕಾಣಿಸಿಕೊಳ್ಳಲಿರುವ ನಿರ್ಮಾಪಕ ಕೆ.ಮಂಜು ನಿರ್ಮಾಣದ 'ಮಾಂಜ' (ಹೆಸರು ಇನ್ನೂ ಪಕ್ಕಾ ಆಗಿಲ್ಲ) ಸಿನಿಮಾ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇದೆ.

ಇನ್ನೇನು ಶುರುವಾಗಬೇಕಿದ್ದ ಸಿನಿಮಾ ಕಾರಣಾಂತರಗಳಿಂದ ವಿಳಂಬವಾಗುತ್ತಿದ್ದು, ಇದೀಗ ಮುಂದಿನ ತಿಂಗಳಿನಿಂದ ಸಿನಿಮಾವನ್ನು ಶುರು ಮಾಡಲು ನಿರ್ದೇಶಕ ಮಹೇಶ್ ರಾವ್ ಮತ್ತು ನಿರ್ಮಾಪಕ ಕೆ.ಮಂಜು ನಿರ್ಧರಿಸಿದ್ದಾರೆ.[ಯಶ್-ರಾಧಿಕಾ ಪಂಡಿತ್ ಚಿತ್ರದ ಟೈಟಲ್ ಮತ್ತೆ ಬದಲಾಯಿತೆ?]

Actor Tilak Shekar Bags Yash-Radhika's next

ಈ ಮೊದಲು ಈ ಚಿತ್ರಕ್ಕೆ ನಟ ಡೆಡ್ಲಿ ಆದಿತ್ಯ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೆಲವಾರು ಕಾರಣಗಳಿಂದ ಆದಿತ್ಯ ಚಿತ್ರತಂಡದಿಂದ ಹೊರ ಬಿದ್ದಿದ್ದರು. ಅವರ ಜಾಗಕ್ಕೆ ಯಾರೂ ಆಯ್ಕೆ ಆಗಿಲ್ಲವಾದ್ದರಿಂದ ಚಿತ್ರದ ಶೂಟಿಂಗ್ ವಿಳಂಬವಾಗುತ್ತಿದೆ.

ಇದೀಗ ಹೊಸದಾಗಿ ಬಂದಿರುವ ಸುದ್ದಿಯ ಪ್ರಕಾರ ಡೆಡ್ಲಿ ಆದಿತ್ಯ ಅವರ ಜಾಗದಲ್ಲಿ 'ಗಂಡ ಹೆಂಡತಿ' ಖ್ಯಾತಿಯ ನಟ ತಿಲಕ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾಗಿದೆ.[ಯಶ್ ಸಿನಿಮಾದಿಂದ 'ಡೆಡ್ಲಿ' ಆದಿತ್ಯ ಔಟ್ ಆಗಿದ್ದೇಕೆ?]

Actor Tilak Shekar Bags Yash-Radhika's next

ಈಗಾಗಲೇ ಚಿತ್ರತಂಡದವರು ನಟ ತಿಲಕ್ ಅವರನ್ನು ಸಂಪರ್ಕಿಸಿ ಮಾತನಾಡಿದ್ದು, ಇದಕ್ಕೆ ತಿಲಕ್ ಅವರೂ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.[ಯಶ್-ರಾಧಿಕಾ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

ಒಟ್ನಲ್ಲಿ ತಿಲಕ್ ಅವರೇ ಆದಿತ್ಯ ಅವರ ಪಾತ್ರವನ್ನು ಪೋಷಿಸೋದು ಪಕ್ಕಾ ಅನ್ನೋದಾದರೆ, ಸದ್ಯದಲ್ಲೇ ಯಶ್ ಮತ್ತು ರಾಧಿಕಾ ಜೋಡಿಯ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

English summary
Kannada Actor Tilak to play villain in Kannada Actor yash's Kannada Movie 'Maanja'. The movie is directed by Mahesh Rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada