For Quick Alerts
  ALLOW NOTIFICATIONS  
  For Daily Alerts

  'ಅಭಿಮಾನಿದೇವೋಭವ' ಎಂದ ಉಪೇಂದ್ರ ಅಭಿಮಾನಿಗಳ ಕ್ಷಮೆ ಕೇಳಿದ್ಯಾಕೆ?

  |

  ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷ ಉಪೇಂದ್ರ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಬಹಳ ಅದ್ಧೂರಿಯಾಗಿ ಹುಟ್ಟುಹಬ್ಬದ ಸಂಭ್ರಮಾಚರಣೆ ಮುಗಿದಿದೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಈ ಬಾರಿ ನೆಚ್ಚಿನ ನಟನಿಗೆ ಶುಭಾಶಯ ಕೋರಲು ಬಂದಿದ್ದರು. ನೇರವಾಗಿ ಬಂದು ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ಕೋರಿದ ಎಲ್ಲರಿಗೂ ಉಪ್ಪಿ ಧನ್ಯವಾದ ತಿಳಿಸಿದ್ದಾರೆ.

  ಅಭಿಮಾನಿಗಳು ನೆಚ್ಚಿನ ನಟನ ಕೈ ಕುಲುಕಿ ಹುಟ್ಟುಹಬ್ಬ ಶುಭಾಶಯ ಕೋರಿದ್ದು ಮಾತ್ರವಲ್ಲದೇ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಮಧ್ಯರಾತ್ರಿಯಿಂದಲೇ ಕತ್ರಿಗುಪ್ಪೆಯ ಉಪೇಂದ್ರ ನಿವಾಸದ ಬಳಿ ಅಭಿಮಾನಿ ಸಾಗರ ನೆರೆದಿತ್ತು. ರಾತ್ರಿ ಅಭಿಮಾನಿಗಳನ್ನು ಭೇಟಿ ಮಾಡಿದ ಉಪ್ಪಿ ಸಿಹಿ ಹಂಚಿದ್ದರು. ಸಿಹಿ ಸ್ವೀಕರಿಸಿದ ಅಭಿಮಾನಿಗಳು ಉಪ್ಪಿ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಆದರೆ ರಿಯಲ್ ಸ್ಟಾರ್ ಈಗ ಬೇಡ ಬೆಳಗ್ಗೆ ಸಿಗ್ತೀನಿ, ಫೋಟೊ ತೆಗೆಸಿಕೊಳ್ಳೋಣ ಎಂದು ಹೇಳಿ ಕಳುಹಿಸಿದ್ದರು.

  "ಅವತ್ತು ತಟ್ಟೆ ಹಿಡಿದ್ರೆ ಆತ ಊಟ ಹಾಕಲಿಲ್ಲ, ಆಮೇಲೇನಾಯ್ತು ಅಂದ್ರೆ".. : "ನನ್ನ ಅಲ್ಟಿಮೇಟ್ ಗುರಿ ಸಿನಿಮಾ ಅಲ್ಲ"!

  ಬೆಳಗ್ಗೆ 10ಗಂಟೆಯಿಂದಲೇ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಉಪ್ಪಿ ನಿವಾಸ ಬಳಿ ಜಮಾಯಿಸಿದ್ದರು. ಕೇಕ್ ಕತ್ತರಿಸಿ ಉಪೇಂದ್ರ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿದರು. ಸಾಕಷ್ಟು ಜನ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.

   ಅಭಿಮಾನಿಗಳ ಕ್ಷಮೆ ಕೇಳಿದ ಉಪೇಂದ್ರ

  ಅಭಿಮಾನಿಗಳ ಕ್ಷಮೆ ಕೇಳಿದ ಉಪೇಂದ್ರ

  ಬೆಳಗ್ಗೆಯಿಂದ ಸಂಜೆವರೆಗೂ ನೂರಾರು ಜನ ಫೋಟೊ ತೆಗೆಸಿಕೊಂಡಿದ್ದರು. ಆದರೂ ಕೆಲವರು ಫೋಟೊ ತೆಗೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಇದೀಗ ಉಪೇಂದ್ರ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದಾರೆ. ನಿವಾಸದ ಮುಂದೆ ನೆರೆದಿದ್ದ ಅಭಿಮಾನಿ ಸಾಗರದ ವಿಡಿಯೋ ಶೇರ್ ಮಾಡಿ "ನಿನ್ನೆ ಬೆಳಗಿನಿಂದ ಸಂಜೆ ಕತ್ತಲಾಗುವವರೆಗೂ ಎಲ್ಲ ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಂಡರೂ ಹಲವರ ಜೊತೆ ಫೊಟೋ ತೆಗೆಯಲು ಆಗಲಿಲ್ಲ. ಮತ್ತೆ ಎಂದಾದರೂ ತೆಗೆಸಿಕೊಳ್ಳೊಣ. ಕ್ಷಮೆ ಇರಲಿ" ಎಂದು ಬರೆದುಕೊಂಡಿದ್ದಾರೆ.

  'KGF' ತರ ಇದೆ ಎಂದು ಮತ್ತೆ ಮತ್ತೆ ಹುಡುಕಿದ ಜನ: 25 ಗಂಟೆಗಳಲ್ಲಿ 'ಕಬ್ಜ' ಟೀಸರ್ ಹೊಸ ದಾಖಲೆ!'KGF' ತರ ಇದೆ ಎಂದು ಮತ್ತೆ ಮತ್ತೆ ಹುಡುಕಿದ ಜನ: 25 ಗಂಟೆಗಳಲ್ಲಿ 'ಕಬ್ಜ' ಟೀಸರ್ ಹೊಸ ದಾಖಲೆ!

   'ಅಭಿಮಾನಿದೇವೋಭವ' ಎಂದ ರಿಯಲ್ ಸ್ಟಾರ್

  'ಅಭಿಮಾನಿದೇವೋಭವ' ಎಂದ ರಿಯಲ್ ಸ್ಟಾರ್

  ಮತ್ತೊಂದು ಟ್ವೀಟ್‌ನಲ್ಲಿ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸಿರುವ ಉಪೇಂದ್ರ, ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. "ಅಭಿಮಾನಿದೇವೋಭವ" ಎಂದಿದ್ದಾರೆ. ಇನ್ನು ರಿಯಲ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಬ್ಜ' ಸಿನಿಮಾ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ 12.5 ಮಿಲಿಯನ್ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ. ಆರ್‌. ಚಂದ್ರು ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ಶ್ರಿಯಾ ಶರಣ್ ನಾಯಕಿಯಾಗಿ ನಟಿಸಿದ್ದಾರೆ. ಕಿಚ್ಚ ಸುದೀಪ್ ಕೂಡ ಕೀ ರೋಲ್‌ ಒಂದನ್ನು ಪ್ಲೇ ಮಾಡಿದ್ದಾರೆ.

   ಕುತೂಹಲ ಕೆರಳಿಸಿದೆ 'ಯುಐ' ಸಿನಿಮಾ

  ಕುತೂಹಲ ಕೆರಳಿಸಿದೆ 'ಯುಐ' ಸಿನಿಮಾ

  ಉಪೇಂದ್ರ 7 ವರ್ಷಗಳ ನಂತರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ಯುಐ' ಅನ್ನುವ ಚಿತ್ರವನ್ನು ನಿರ್ದೇಶಿಸಿ ನಟಿಸ್ತಿದ್ದಾರೆ. ಟೈಟಲ್‌ನಿಂದಲೇ ಗಮನ ಸೆಳೆದಿರುವ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಜಿ. ಮನೋಹರನ್ ಹಾಗೂ ಕೆ. ಪಿ ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ 'ಕಬ್ಜ' ಸಿನಿಮಾ ರಿಲೀಸ್ ಆಗಲಿದ್ದು, ನಂತರ ತೆರೆಮೇಲೆ 'ಯುಐ' ಸೀಕ್ರೆಟ್ ರಿವೀಲ್ ಆಗಲಿದೆ.

   2 ಸಿನಿಮಾಗಳು ರಿಲೀಸ್‌ಗೆ ಸಿದ್ಧ

  2 ಸಿನಿಮಾಗಳು ರಿಲೀಸ್‌ಗೆ ಸಿದ್ಧ

  ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ತ್ರಿಶೂಲಂ' ಹಾಗೂ 'ಬುದ್ಧಿವಂತ-2' ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿದೆ. ತೆಲುಗಿನ 'ಬಲುಪು' ಸಿನಿಮಾ ರೀಮೆಕ್ ಆಗಿರುವ 'ತ್ರಿಶೂಲಂ' ಚಿತ್ರದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಕೂಡ ಬಣ್ಣ ಹಚ್ಚಿದ್ದಾರೆ. ಓಂ ಪ್ರಕಾಶ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲಿಗೆ ಚಿತ್ರಕ್ಕೆ 'ರವಿಚಂದ್ರ' ಅನ್ನುವ ಟೈಟಲ್ ಇಡಲಾಗಿತ್ತು. ನಂತರ 'ವೇದವ್ಯಾಸ' ಎನ್ನಲಾಯ್ತು. ಕೊನೆಗೆ 'ತ್ರಿಶೂಲಂ' ಟೈಟಲ್ ಫೈನಲ್ ಮಾಡಲಾಗಿದೆ. ಆದರೆ ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎನ್ನುವುದು ಗೊತ್ತಿಲ್ಲ. 'ಬುದ್ಧಿವಂತ- 2' ಚಿತ್ರಕ್ಕೆ ಜಯರಾಂ ಸಾರಥ್ಯವಿದೆ.

  English summary
  Actor Upendra apologizes to fans on social media, know what is the matter. Know More.
  Monday, September 19, 2022, 13:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X