ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ ಉಪೇಂದ್ರ 5 ಲಕ್ಷ ನೆರವು

ಧಾರಾಕಾರ ಮಳೆಯಿಂದ ನಲುಗಿರುವ ಉತ್ತರ ಕರ್ನಾಟಕದ ಜನರ ಸಹಾಯಕ್ಕೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಮುಂದೆ ಬಂದಿದ್ದಾರೆ. ಇದೀಗ ನಟ ಉಪೇಂದ್ರ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಉತ್ತರ ಕರ್ನಾಟಕದ ನೆರೆ ಸಂತ್ರಸ್ಥರಿಗೆ 5 ಲಕ್ಷ ಹಣ ನೀಡಲು ಉಪೇಂದ್ರ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು 5 ಲಕ್ಷ ಹಣವನ್ನು ದೇಣಿಗೆಯಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ ''ತಾವುಗಳೂ ಪ್ರವಾಹಕ್ಕೆ ಸಿಲುಕಿರುವ ನಮ್ಮವರಿಗೆ ನಿಮ್ಮ ಇಚ್ಛಾನುಸಾರ ನೆರವಾಗಿ'' ಎಂದು ಕೇಳಿಕೊಂಡಿದ್ದಾರೆ.

ಪ್ರಜಾಕೀಯ ಪಕ್ಷದ ಮೂಲಕ ಬದಲಾವಣೆ ತರಬೇಕು ಎಂದು ಪ್ರಯತ್ನ ಪಡುತ್ತಿರುವ ಉಪೇಂದ್ರರಿಗೆ ಇನ್ನು ದೊಡ್ಡ ಮಟ್ಟದ ಜನರು ಬೆಂಬಲ ಸಿಕ್ಕಿಲ್ಲ. ಆದರೆ, ಅವರ ಈ ಕೆಲಸಕ್ಕೆ ಅಭಿಮಾನಿಗಳ ಮೆಚ್ಚಿಗೆ ಸಿಕ್ಕಿದೆ. ಬರೀ ಟ್ವೀಟ್ ಮಾಡದೆ, ಹಣದ ನೆರವನ್ನು ನೀಡಿ ಉಪೇಂದ್ರ ಮಾದರಿ ಆಗಿದ್ದಾರೆ.

Actor Upendra Came To Help Rain Havoc In Karnataka

ಕನ್ನಡ ಚಿತ್ರರಂಗದ ಇತರ ಸ್ಟಾರ್ ಗಳು ಕೂಡ ಉತ್ತರ ಕರ್ನಾಟಕದ ಬಗ್ಗೆ ಟ್ವೀಟ್ ಮಾಡಿದ್ದಾರೆ. ನಟ ದರ್ಶನ್, ಸುದೀಪ್, ಶರಣ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಹೀಗೆ ಅನೇಕರು ಸಹಾಯಕ್ಕೆ ಮುಂದಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರವಾಹದ ಸ್ಥಿತಿಯಲ್ಲಿ ಇವೆ. ಮಳೆ ನೀರಿನಿಂದಾಗಿ ಅಲ್ಲಿನ ಜನರ ಜೀವನ ಅಸ್ತವ್ಯಸ್ತವಾಗಿದೆ.

More from Filmibeat

English summary
uttar karnataka flood : Kannada actor Upendra came to help Uttara Karnataka people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X