ಕೂರ್ಗ್ ನಲ್ಲಿ ರಿಯಲ್ ಸ್ಟಾರ್ ಕುಟುಂಬದ ಮಸ್ತಿ: ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ಉಪೇಂದ್ರ
ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಇತ್ತೀಚಿಗೆ ಕೊಡಗು ಜಿಲ್ಲೆಯ ಪ್ರವಾಸಕ್ಕೆ ತೆರಳಿದ್ದಾರೆ. ಕುಟುಂಬದ ಜೊತೆ ತೆರಳಿರುವ ರಿಯಲ್ ಸ್ಟಾರ್ ಅಲ್ಲೇ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಉಪೇಂದ್ರ ಕುಟುಂಬದ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹುಟ್ಟುಹಬ್ಬ ದಿನ ಮನೆಯಲ್ಲಿ ಇರಲ್ಲ, ಯಾರು ಬರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದ ರಿಯಲ್ ಸ್ಟಾರ್ ಯಾವ ಕಡೆ ಪ್ರವಾಸಕ್ಕೆ ಹೋಗುತ್ತಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಿರಲಿಲ್ಲ. ಇದೀಗ ಉಪೇಂದ್ರ ಕೂರ್ಗ್ ನಲ್ಲಿ ಮಸ್ತಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಮುಂದೆ ಓದಿ...

ಕೂರ್ಗ್ ನಲ್ಲಿ ಉಪೇಂದ್ರ ಉಪೇಂದ್ರ
ಉಪ್ಪಿ ಜೊತೆ ಪತ್ನಿ ಪ್ರಿಯಾಂಕಾ ಮತ್ತು ಇಬ್ಬರು ಮಕ್ಕಳು ಸೇರಿದ್ದಂತೆ ಇಡೀ ಕುಟುಂಬ ಕೊಡಗಿನಲ್ಲಿ ಬೀಡು ಬಿಟ್ಟಿದೆ. ವಿಶೇಷ ಅಂದರೆ ಉಪ್ಪಿ ಕುಟುಂಬದ ಜೊತೆ ಸಂಗೀತ ನಿರ್ದೇಶಕ ಗುರುಕಿರಣ್ ಕುಟುಂಬ ಸಹ ಪ್ರವಾಸಕ್ಕೆ ತೆರಳಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಪುಷ್ಪಗಿರಿ ಸಮೀಪದ ಆಯಾತನ ರೆಸಾರ್ಟ್‌ನಲ್ಲಿ ಎಲ್ಲರೂ ತಂಗಿದ್ದಾರೆ.

ರೆಸಾರ್ಟ್ ನಲ್ಲಿ ಹುಟ್ಟುಹಬ್ಬ ಆಚರಣೆ
ರೆಸಾರ್ಟ್‌ನಲ್ಲೇ ಉಪ್ಪಿ ಕುಟುಂಬ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಹುಟ್ಟುಹಬ್ಬದ ಫೋಟೋಗಳು ಮತ್ತು ಪ್ರವಾಸದ ಸುಂದರ ಕ್ಷಣಗಳನ್ನು ಪ್ರಿಯಾಂಕಾ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನೆನಪಿಗಾಗಿ ಗಿಡಗಳನ್ನು ನೆಟ್ಟ ಉಪೇಂದ್ರ ದಂಪತಿ
ಜಲಪಾತದ ಬಳಿ ಇಡೀ ಕುಟುಂಬ ಮಸ್ತಿ ಮಾಡಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಇನ್ನೂ ಪ್ರವಾಸದ ನೆನಪಿಗೆ ಉಪೇಂದ್ರ ಕುಟುಂಬ ರೆಸಾರ್ಟ್ ಆವರಣದಲ್ಲಿ ಗಿಡಗಳನ್ನು ನೆಟ್ಟಿದ್ದಾರೆ.
Recommended Video

ಉಪೇಂದ್ರ ಸಿನಿಮಾಗಳು
ರಿಯಲ್ ಸ್ಟಾರ್ ಉಪೇಂದ್ರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಕಬ್ಜ' ಸಿನಿಮಾ ಜೊತೆಗೆ ಹುಟ್ಟುಹಬ್ಬದ ದಿನ ಎರಡು ಬಿಗ್ ಬಜೆಟ್ ಸಿನಿಮಾಗಳು ಅನೌನ್ಸ್ ಆಗಿವೆ. ನಿರ್ದೇಶಕ ಶಶಾಂಕ್ ಮತ್ತು ನಿರ್ದೇಶಕ ಮಂಜು ಮಾಂಡವ್ಯ ಜೊತೆ ಉಪೇಂದ್ರ ಸಿನಿಮಾ ಮಾಡುತ್ತಿದ್ದಾರೆ. ಇನ್ನು ವಿಶೇಷ ಅಂದರೆ ತೆಲುಗು ಸಿನಿಮಾದಲ್ಲಿಯೂ ಉಪ್ಪಿ ಬ್ಯುಸಿಯಾಗಿದ್ದಾರೆ.


Click it and Unblock the Notifications











