ದರ್ಶನ್ ಕೆನ್ನೆ ಹಿಂಡಿ ಅಪ್ಪಿಕೊಂಡು ಮುತ್ತಿಟ್ಟ ರಿಯಲ್ ಸ್ಟಾರ್ ಉಪೇಂದ್ರ: ಮತ್ತೆ ಒಂದಾದ 'ಅನಾಥರು' ವಿಡಿಯೋ ವೈರಲ್
ಸ್ಯಾಂಡಲ್‌ವುಡ್‌ನಲ್ಲಿ ಹಲವು ನಟರು ಜೊತೆಯಲ್ಲಿ ಸಿನಿಮಾ ಮಾಡಿದ್ದಾರೆ. ಹಲವು ತಾರೆಯರು ಇದರಲ್ಲಿ ಸಕ್ಸಸ್ ಕಂಡಿದ್ದಾರೆ. ಇಂತಹದ್ದೇ ಒಂದು ಜೋಡಿ ನಟ ದರ್ಶನ್ ಮತ್ತು ಉಪೇಂದ್ರ ಅವರದ್ದು. ಇತ್ತೀಚೆಗೆ ಇಬ್ಬರು ನಟರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದೆ. ಇಬ್ಬರ ನಡುವಿನ ಬಾಂಧವ್ಯ ಎದ್ದು ಕಾಣುತ್ತಿದೆ.
ಹೌದು... ಕಾಟೇರ ಸಿನಿಮಾ ಸಕ್ಸಸ್ ಸಂಭ್ರಮದಲ್ಲಿರುವ ನಟ ದರ್ಶನ್ ಮತ್ತು ಮುಂದಿನ ಸಿನಿಮಾ ಬಿಡುಗಡೆ ಹುಮ್ಮಸ್ಸಿನಲ್ಲಿರುವ ಉಪೇಂದ್ರಾವರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಉಪೇಂದ್ರ, ದರ್ಶನ್ ಅವರನ್ನು ಬಿಗಿದು ಅಪ್ಪಿಕೊಂಡು, ಅವರ ಕೆನ್ನೆ ಹಿಂಡಿ ಮುತ್ತು ನೀಡಿದ್ದಾರೆ. ಇದು ಇಬ್ಬರು ಸ್ಟಾರ್‌ಗಳ ಫ್ಯಾನ್ಸ್‌ಗೆ ಖುಷಿ ನೀಡಿದೆ.

ದರ್ಶನ್ ಕೆನ್ನೆ ಹಿಂಡಿ, ಅಪ್ಪಿ ಮುತ್ತಿಟ್ಟ ಉಪ್ಪಿ!
ಈ 'ಅನಾಥರು' ಜೋಡಿಯ ಇಂತಹ ಚಂದದ ದೃಶ್ಯಕ್ಕೆ ಸಾಕ್ಷಿಯಾಗಿರುವುದು 'ಕಾಟೇರ' ಸಿನಿಮಾ ಸೆಲಬ್ರಿಟಿ ಶೋ. ಹೌದು...ಇತ್ತೀಚೆಗೆ 'ಕಾಟೇರ' ಚಿತ್ರತಂಡ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿದೆ. ಇದೇ ಕಾರಣಕ್ಕೆ ಸೆಲಬ್ರಿಟಿ ಶೋ ಆಯೋಜಿಸಿತ್ತು. ಸ್ಯಾಂಡಲ್‌ವುಡ್‌ನ ನಟ, ನಟಿಯರು, ತಂತ್ರಜ್ಞರು ಕಾಟೇರನ ದರ್ಶನ ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಕಾಟೇರ ನೋಡಿದ ನಟ ಉಪೇಂದ್ರ ಖುಷಿಯಲ್ಲಿ ದರ್ಶನ್ ಅವರನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ. ದೀರದಿಮದಲೇ ಅವರನ್ನು ನೋಡಿ ಬಳಿ ಬಂದ ಉಪೇಂದ್ರ ಮತ್ತು ದರ್ಶನ್ ಪರಸ್ಪರ ಅಪ್ಪಿಕೊಂಡಿದ್ದಾರೆ. ಜೊತೆಗೆ ದರ್ಶನ್ ಅವರ ಎರಡು ಕೆನ್ನೆ ಸವರಿ, ಕೆನ್ನೆ ಹಿಂಡಿ ಅವರಿಗೆ ಪ್ರೀತಿಯಿಂದ ಮುತ್ತು ಕೊಟ್ಟಿದ್ದಾರೆ ಉಪೇಂದ್ರ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ದರ್ಶನ್- ಉಪೇಂದ್ರ ವಿಡಿಯೋಗೆ ಫ್ಯಾನ್ಸ್ ಪ್ರತಿಕ್ರಿಯೆ
ನಟ ದರ್ಶನ್ - ಉಪೇಂದ್ರ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರ ಫ್ಯಾನ್ಸ್ ಕಾಮೆಂಟ್‌ಗಳ ಮೂಲಕ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಪೇಜ್ ' Uppi ಕೆನ್ನೆ ಹಿಂಡಿ ಅಪ್ಪಿಕೊಂಡು ಮುತ್ತಿಟ್ಟ ಆ ದೃಶ್ಯ ನೋಡಕ್ಕೆ ಎಷ್ಟ್ ಚಂದ ಗುರು" ಎಂದು ಹಾರ್ಟ್ ಎಮೋಜಿ ಮೂಲಕ ತಮ್ಮ ಪ್ರೀತಿ ತೋರಿಸಿದ್ದಾರೆ.

ಮತ್ತೊಬ್ಬರು ಅನಾಥರು ಸಿನಿಮಾ ನೆನಪಿಸಿಕೊಂಡು, "ಎಷ್ಟೇ ಆದರೂ ಅನಾಥರು ಮೂವಿ ಜೋಡಿ ಅಲ್ವಾ...', "ನಿಮ್ ಬಾಂಡಿಗ್, ಪ್ರೀತಿ ನೋಡಿ ಖುಶಿ ಆಯ್ತು ಉಪ್ಪಿ ಸರ್, ದರ್ಶನ್ ಸರ್...', ಯಾಪ್ಪಾ ಈ ಥರ ಈ ಕಾಲದಲ್ಲಿ...ನಿಮ್ಮನ್ನು ನೋಡಿ ಕಲಿಯಬೇಕು ಸರ್...', 'ಅನಾಥರು ಫ್ರೆಂಡ್.. ಜೈ ಡಿ ಬಾಸ್..ಜೈ ಉಪ್ಪಿ ಸರ್...', 'ಈ ವರ್ಷ ನಾನು ಕಾಯ್ತಿರೋದೆ ನಿಮ್ಮ ಮೂವಿ UIಗೆ ಸರ್, ಏಕೆಂದರೆ ನಿಮ್ಮ ಡೈರೆಕ್ಷನ್ ಆದು. ನಮ್ಮ ಡಿ ಬಾಸ್‌ಗೆ ಒಂದು ಮೂವಿ ತೆಗಿರಿ ಸರ್ ನೀವು' ಎಂದು ಕಾಮೆಂಟ್ ಮಾಡಿದ್ದಾರೆ.
ದರ್ಶನ್- ಉಪೇಂದ್ರ
ನಟ ದರ್ಶನ್ ಮತ್ತು ಉಪೇಂದ್ರ ಈ ಹಿಂದೆ 'ಅನಾಥರು' ಎಂಬ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2007 ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾಕ್ಕೆ ಸಾಧು ಕೋಕಿಲಾ ನಿರ್ದೇಶನ ಮಾಡಿದ್ದರು. ಇದು 2003 ರ ತಮಿಳು ಚಲನಚಿತ್ರ ಪಿತಾಮಗನ್‌ನ ಕನ್ನಡ ರಿಮೇಕ್ ಆಗಿತ್ತು. ಚಿತ್ರದಲ್ಲಿ ದರ್ಶನ್ ಮತ್ತು ಉಪೇಂದ್ರ ಬಾಂಡಿಂಗ್ ತುಂಬಾ ಆಪ್ತವಾಗಿತ್ತು. ಇವರಿಗೆ ಸಾಥ್ ನೀಡಿದ್ದು, ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ನಟಿ ಸಂಘವಿ.


Click it and Unblock the Notifications











