ಅಮೇರಿಕಾದಲ್ಲಿ ಸೂಪರ್ ರಂಗ ಎಂದು ಕುಣಿದಾಡಿದ ಉಪ್ಪಿ
ನಟ ಉಪೇಂದ್ರ ವೇದಿಕೆ ಮೇಲೆ ಬಂದರೆ ಅಭಿಮಾನಿಗಳಿಗೆ ಸಖತ್ ಮಜಾ ಕೊಡುತ್ತಾರೆ. ಸಿನಿಮಾದ ರೀತಿ ವೇದಿಕೆ ಮೇಲೆ ಸಹ ಡೈಲಾಗ್ ಹೇಳಿ ಉಪ್ಪಿ ತಮ್ಮ ಫ್ಯಾನ್ಸ್ ಗಳನ್ನು ರಂಜಿಸುತ್ತಾರೆ. ಅದೇ ರೀತಿ ಇದೀಗ ಉಪೇಂದ್ರ ಅಮೇರಿಕಾದಲ್ಲಿ ಕುಣಿದಿದ್ದಾರೆ.
ಉಪೇಂದ್ರ ಡ್ಯಾನ್ಸ್ ಮಾಡುವುದು ತೀರಾ ಕಡಿಮೆ. ಇದೀಗ ತಾವೇ ಹಾಡು ಹೇಳುತ್ತ ವೇದಿಕೆ ಮೇಲೆ ಉಪ್ಪಿ ಹೆಜ್ಜೆ ಹಾಕಿದ್ದಾರೆ. ಅಮೇರಿಕಾದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೆಳನಗಳಲ್ಲಿ ಉಪೇಂದ್ರ ಅಭಿಮಾನಿಗಳನ್ನು ರಂಜಿಸಿದ್ದಾರೆ. ಜೊತೆಗೆ ಹಾಡಿನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ನಿರ್ದೇಶನದ ಹಾಗೂ ನಟನೆಯ 'ಸೂಪರ್' ಸಿನಿಮಾದ 'ನಾನು ಸೂಪರ್ ರಂಗ..' ಹಾಡನ್ನು ಉಪ್ಪಿ ಹಾಡಿದರು. ಅವರಿಗೆ ಗಾಯಕಿ ಶಾಮಿತಾ ಮಲ್ನಾಡ್ ಸಾಥ್ ನೀಡಿದ್ದರು. ಕಾರ್ಯಕ್ರಮದ ಬಳಿಕ ಉಪೇಂದ್ರ ಜೊತೆಗೆ ಅವರ ಅಭಿಮಾನಿಗಳು ಫೋಟೋ ತೆಗೆದುಕೊಂಡು ಸಂಭ್ರಮಿಸಿದರು.

ಉಪೇಂದ್ರ ಜೊತೆಗೆ ಅವರ ಪತ್ನಿ ಪ್ರಿಯಾಂಕ ಉಪೇಂದ್ರ, ನಟ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ ಪ್ರಕಾಶ್ ಸೇರಿದಂತೆ ಅನೇಕರು ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ.


Click it and Unblock the Notifications











