ನಿರಂಜನ್ ಶೆಟ್ಟಿ ವಿರುದ್ಧ ಉಪೇಂದ್ರ ಕಾನೂನು ಕ್ರಮ

By Rajendra

'ಕಠಾರಿವೀರ ಸುರಸುಂದರಾಂಗಿ' ಚಿತ್ರದ ಕತೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದ ಯುವ ನಟ ಹಾಗೂ ಲೇಖಕ ನಿರಂಜನ್ ಶೆಟ್ಟಿ ವಿರುದ್ಧ ಕಾನೂನು ಕ್ರಮಕ್ಕೆ ಉಪೇಂದ್ರ ಮುಂದಾಗಿದ್ದಾರೆ. ಈ ಸಂಬಂಧ ಅವರು ನಿರಂಜನ್ ಶೆಟ್ಟಿ ವಿರುದ್ಧ ಚೆನ್ನಮ್ಮನಕೆರೆ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.

ನಿರಂಜನ್ ಶೆಟ್ಟಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲೂ ಉಪೇಂದ್ರ ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು. 2006ರಲ್ಲಿ ತಾವು ಬರೆದಿದ್ದ ' ಯಮೇಂದ್ರ Vs ಉಪೇಂದ್ರ' ಕತೆಯನ್ನು ಉಪೇಂದ್ರ ಅವರಿಗೆ ಹೇಳಿದ್ದೆ. ಈಗ ಅದೇ ಕತೆಯನ್ನು ಕದ್ದು ಚಿತ್ರ ಮಾಡಿದ್ದಾರೆ. ತಮ್ಮ ಕತೆಯನ್ನು 2006ರಲ್ಲಿ ಚೆನ್ನೈನಲ್ಲಿ ರಿಜಿಸ್ಟರ್ಡ್ ಮಾಡಿದ್ದೇನೆ ಎಂದು ನಿರಂಜನ್ ಶೆಟ್ಟಿ ಆರೋಪಿಸಿದ್ದರು.

ಈ ಗದ್ದಲದ ನಡುವೆಯೇ ತೆರೆಕಂಡಿರುವ 'ಕಠಾರಿವೀರ ಸುರಸುಂದರಾಂಗಿ' ಚಿತ್ರಕ್ಕೆ ಎಲ್ಲಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ರಾಜ್ಯದಾದ್ಯಂತ ಚಿತ್ರ 170 ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು, 50ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ತ್ರಿಡಿ ಆವೃತ್ತಿ ವೀಕ್ಷಿಸಬಹುದಾಗಿದೆ. ಕಠಾರಿವೀರ ಚಿತ್ರದ ವಿಮರ್ಶೆ ಓದಿ. (ಏಜೆನ್ಸೀಸ್)

More from Filmibeat

English summary
Kannada actor Upendra has finally decided to take legal action against Niranjan Shetty, who had claimed recently that the actor had used his story in Katari Veera Surasundarangi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X