For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಮನೆಗೆ ಬಂತು ಹೊಸ ಕಾರು: ವಿಶೇಷತೆಗಳೇನು?

  |

  ಸ್ಯಾಂಡಲ್‌ವುಡ್‌ನ ಹಲವು ನಟರು ಕಾರು-ಬೈಕ್‌ಗಳ ಬಗ್ಗೆ ಪ್ರೀತಿ ಹೊಂದಿದ್ದಾರೆ. ಈ ಸಾಲಿನಲ್ಲಿ ಮೊದಲಿನಲ್ಲಿ ನಿಲ್ಲುವುದು ಸುದೀಪ್ ಮತ್ತು ದರ್ಶನ್. ಇಬ್ಬರ ಬಳಿಯು ಅತ್ಯುತ್ತಮವಾದ ಕಾರುಗಳಿವೆ.

  ಸ್ಯಾಂಡಲ್‌ವುಡ್‌ನ ಹಲವು ನಟರು ಒಳ್ಳೆಯ ಕಾರುಗಳನ್ನು ಹೊಂದಿದ್ದಾರೆ. ಸ್ಯಾಂಡಲ್‌ವುಡ್‌ನ ಬಹುತೇಕ ಸ್ಟಾರ್ ನಟರುಗಳ ಬಳಿ ಕನಿಷ್ಟ ಎರಡು ಬಹುಐಶಾರಾಮಿ ಕಾರುಗಳಿವೆ. ಇದರ ಹೊರತಾಗಿ ತಮ್ಮ ಆಸಕ್ತಿ, ಅಗತ್ಯಕ್ಕೆ ತಕ್ಕಂತೆ ಕಾರುಗಳ ಸಂಗ್ರಹವನ್ನೂ ಹೊಂದಿದ್ದಾರೆ.

  ಕಬ್ಜ ಚಿತ್ರಕ್ಕೆ ಸಾಥ್ ನೀಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

  ನಟ ಉಪೇಂದ್ರ ಸಹ ಕಾರುಗಳ ಬಗ್ಗೆ ಆಸಕ್ತಿಯುಳ್ಳವರಾಗಿದ್ದಾರೆ. ಹಾಗೂ ತಮ್ಮ ಸಂಗ್ರಹದಲ್ಲಿ ಒಳ್ಳೆಯ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಇದೀಗ ಅವರು ಹೊಸದೊಂದು ಲಘು ಐಶಾರಾಮಿ ಕಾರೊಂದನ್ನು ತಮ್ಮ ಸಂಗ್ರಹಕ್ಕೆ ಸೇರಿಸಿಕೊಂಡಿದ್ದಾರೆ.

  ಕಿಯಾ ಬ್ರ್ಯಾಂಡ್‌ನ ಕಾರು ಖರೀದಿಸಿದ್ದಾರೆ

  ಕಿಯಾ ಬ್ರ್ಯಾಂಡ್‌ನ ಕಾರು ಖರೀದಿಸಿದ್ದಾರೆ

  ನಟ ಉಪೇಂದ್ರ ಅವರು ಕಿಯಾ ಬ್ರಾಂಡ್‌ನ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಕಿಯಾ ಬ್ರ್ಯಾಂಡ್‌ನ ಟಾಪ್‌ ಮಾಡೆಲ್ ಕಾರಾಗಿರುವ ಕಾರ್ನಿವಲ್ ಕಾರನ್ನು ಉಪೇಂದ್ರ ಖರೀದಿಸಿದ್ದಾರೆ. ಹೊಸ ಕಾರನ್ನು ಮನೆಗೆ ಸ್ವಾಗತಿಸುವ ಕಾರ್ಯವನ್ನು ಉಪೇಂದ್ರ ಅವರು ತಾಯಿಯ ಕೈಯಿಂದ ಮಾಡಿಸಿದ್ದಾರೆ.

  ಹೊಸ ಕಾರಿನ ಬೆಲೆ ಎಷ್ಟು?

  ಹೊಸ ಕಾರಿನ ಬೆಲೆ ಎಷ್ಟು?

  ಕಪ್ಪು ಬಣ್ಣದ ಕಿಯಾ ಕಾರ್ನಿವಾಲ್ ಕಾರಿನ ಪಕ್ಕ ಉಪೇಂದ್ರ ನಿಂತಿರುವ ಚಿತ್ರ ಸಖತ್ ವೈರಲ್ ಆಗಿದೆ. ಉಪೇಂದ್ರ ಅವರ ಹೊಸ ಕಾರು 35-40 ಲಕ್ಷ ಮೌಲ್ಯದ್ದು ಎನ್ನಲಾಗುತ್ತಿದೆ. ಉಪ್ಪಿ ಬಳಿ ಈಗಾಗಲೇ ಇರುವ ಹಲವು ಕಾರುಗಳೊಂದಿಗೆ ಇದು ಸೇರಲಿದೆ.

  ನಿರ್ದೇಶನಕ್ಕೆ ಮರಳಿದ ರಿಯಲ್ ಸ್ಟಾರ್ ಉಪೇಂದ್ರ

  ಹಲವು ಕಾರುಗಳ ಸಂಗ್ರಹ ಉಪೇಂದ್ರ ಬಳಿ ಇದೆ

  ಹಲವು ಕಾರುಗಳ ಸಂಗ್ರಹ ಉಪೇಂದ್ರ ಬಳಿ ಇದೆ

  ಉಪೇಂದ್ರ ಅವರ ಬಳಿ 3.75 ಕೋಟಿ ಬೆಲೆಯ ಲ್ಯಾಂಬರ್ಗಿನಿ ಉರುಸ್ ಕಾರು ಇದೆ. ಇದರ ಜೊತೆಗೆ 80 ಲಕ್ಷ ಮೌಲ್ಯದ ಜಾಗ್ವಾರ್ ಎಕ್ಸ್‌ ಎಫ್ ಕಾರಿದೆ. 1.5 ಕೋಟಿ ಮೌಲ್ಯದ ರೇಂಜ್ ರೋವರ್, ಆಡಿ ಎ4, ಟೊಯೋಟಾ ಇನ್ನೋವಾ ಕ್ರಿಸ್ಟಾ, ಪಜೇರೋ ಸ್ಪೋರ್ಟ್ಸ್ ಇನ್ನೂ ಕೆಲವು ಕಾರುಗಳಿವೆ.

  ಗೊತ್ತಾಗಿರೋದು ಎರಡೇ ಹೆಸ್ರು ...ತುಂಬಾ ಹೆಸ್ರು ಹೊರಬರಬೇಕಿದೆ | Shruti Krishna | Filmibeat Kannada
  ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

  ಹುಟ್ಟುಹಬ್ಬಕ್ಕೆ ಪೋಸ್ಟರ್ ಬಿಡುಗಡೆ

  ಇನ್ನುಳಿದಂತೆ ಉಪೇಂದ್ರ ಅವರ ಹುಟ್ಟುಹಬ್ಬ ಸೆಪ್ಟೆಂಬರ್ 18 ರಂದಿದ್ದು, ಅದೇ ದಿನ ಕಬ್ಜ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಡುಗಡೆ ಮಾಡಲಿದ್ದಾರೆ. ಕೊರೊನಾ ಕಾರಣದಿಂದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ ಉಪೇಂದ್ರ.

  English summary
  Actor Upendra purchased Kia carnival new car. He already owns several luxury cars.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X