ಸುಮಲತಾಗೆ ನಟ ಉಪೇಂದ್ರ ಸಾಥ್ ನೀಡ್ತಾರಾ?

ಮಂಡ್ಯ ಕ್ಷೇತ್ರದಲ್ಲಿ ನಟಿ ಸುಮಲತಾ ಅಂಬರೀಶ್ ಹಾಗೂ ನಟ, ಮುಖ್ಯಮಂತ್ರಿಗಳ ಪುತ್ರ ನಿಖಿಲ್ ಕುಮಾರ್ ಸ್ವರ್ಧೆ ಮಾಡುತ್ತಿದ್ದಾರೆ. ಹೀಗಿರುವಾಗ, ಕನ್ನಡದ ನಟರು ಯಾರು ಯಾರ ಪರ ನಿಲ್ಲುತ್ತಾರೆ ಎನ್ನುವ ಕುತೂಹಲ ಜಾಸ್ತಿಯಾಗಿದೆ.

ಈಗಾಗಲೇ ನಟ ದರ್ಶನ್, ಸುಮಲತಾ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ. ನಟ ಸುದೀಪ್ ಸಹ ಈ ಬಗ್ಗೆ ಹೇಳಿಕೆ ನೀಡಿದ್ದರು. ಇದರ ನಂತರ ನಟ ಹಾಗೂ ಯುಪಿಪಿ ಪಕ್ಷದ ಅಧ್ಯಕ್ಷ ಉಪೇಂದ್ರ ಕೂಡ ಸುಮಲತಾ ಅವರಿಗೆ ಸಾಥ್ ನೀಡುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ನಿಮ್ಮ ಬೆಂಬಲ ಇರುತ್ತದೆಯೇ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಉಪೇಂದ್ರ ''ನಾನು ಒಂದು ಪಕ್ಷದ ಅಧ್ಯಕ್ಷನಾಗಿ ಈ ಮಾತನ್ನು ಹೇಳುತ್ತಿದ್ದೇನೆ. ನಮ್ಮ ಪಕ್ಷದಲ್ಲಿ ಒಂದು ಸಿದ್ಧಾಂತ ಇದೆ. ಇಲ್ಲಿ ಯಾರೂ ಇದ್ದಕ್ಕಿದ್ದ ಹಾಗೆ ಬಂದು ಸೇರಿಕೊಳ್ಳುವ ಹಾಗೆ ಇಲ್ಲ. ಇದಕ್ಕೆ ಒಂದು ಪ್ರೊಸೆಸ್ ಇದೆ. ಎಲ್ಲರಿಗೂ ಅದೇ ರೀತಿಯ ಹಂತಗಳು ಇರುತ್ತದೆ. ಮತ ಜಾಸ್ತಿ ಬರುತ್ತದೆ, ಫೇಮಸ್ ಇದ್ದರೆ ಏನ್ನುವ ಕಾರಣಕ್ಕೆ ಡೈರೆಕ್ಟ್ ಎಂಟ್ರಿ ನೀಡುತ್ತಿಲ್ಲ.'' ಎಂದಿದ್ದಾರೆ.

actor upendra reaction about sumalathas lok sabha election participation

ಉಪೇಂದ್ರ ಮಾತಿನ ಪ್ರಕಾರ ಉಪೇಂದ್ರ ಪಕ್ಷ ಯಾವುದೇ ಸ್ಪರ್ಧಿ ಅಥವಾ ಪಕ್ಷಕ್ಕೆ ಬೆಂಬಲವನ್ನು ನೀಡುವುದಿಲ್ಲ. ಯಾರಿಗಾದರು ತಮ್ಮ ಪಕ್ಷದ ವ್ಯವಸ್ಠೆ ಆದರೆ, ಅವರೇ ಬಂದು ಕೆಲಸ ಮಾಡಬಹುದು.

ಅಂದಹಾಗೆ, ಚುನಾವಣೆಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಎಲ್ಲ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ತಾವು ಯಾವುದೇ ಕ್ಷೇತ್ರದಿಂದ ಸ್ಪರ್ಧಿ ಮಾಡುತ್ತಿಲ್ಲ ಎಂದಿದ್ದಾರೆ.

More from Filmibeat

English summary
Lok Sabha Election 2019: Kannada actor and UPP party precedent Upendra election reaction about Sumalatha's lok sabha election participation. Actress Sumalatha and actor Nikhil kumar likely to participate in Mandya constituency.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X