ಕನಸಿನ 'ಪ್ರಜಾಕೀಯ'ವನ್ನೇ ಬಿಡಲು ಸಿದ್ಧವಾದ ಉಪೇಂದ್ರ.? ಕಾರಣ ಯಾರು.?

ಕಳೆದ ಎರಡ್ಮೂರು ದಿನಗಳಿಂದ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಉಪೇಂದ್ರ ಭಕ್ತರ ನಡುವೆ ಮುಸುಕಿನ ಜಗ್ಗಾಟ ನಡೆಯುತ್ತಿದೆ. ಉಪ್ಪಿ ವಿರುದ್ಧ ಕೆಲವು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಉಪೇಂದ್ರ ಅವರು ತಮ್ಮ ಅಭಿಮಾನಿಗಳು ನಿರೀಕ್ಷೆ, ಆಸೆಯನ್ನ ಧಿಕ್ಕರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಭಿಮಾನಿಗಳ ಆಸೆಗೆ ಬೆಲೆ ಕೊಡದ ಉಪೇಂದ್ರ ತಮ್ಮ ವೈಯಕ್ತಿಕ ಅನುಕೂಲಕ್ಕಾಗಿ ಜೀವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಕೆಲವು ಅಭಿಮಾನಿಗಳು ಪ್ರಜಾಕೀಯದ ಬಗ್ಗೆ ನಿರಾಸಕ್ತಿ ಕೂಡ ತೋರಿದ್ದಾರೆ. ಈ ಮಧ್ಯೆ ಅಭಿಮಾನಿಗಳನ್ನ ಸಮಾಧಾನಪಡಿಸಲು ಮುಂದಾದ ಉಪೇಂದ್ರ ತಮ್ಮ ಕನಸಿನ ಪ್ರಾಜಕೀಯವನ್ನೇ ತೊರೆಯಲು ಸಿದ್ಧ ಎಂದಿದ್ದಾರೆ.

'ಅಭಿಮಾನಿಗಳಿಂದಲೇ ನಾನು, ನೀವಿಲ್ಲದೇ ನಾನಿಲ್ಲ. ನಿಮಗಾಗಿ ನಾನು ಏನು ಮಾಡಲು ಸಿದ್ಧ. ಬೇಕಾದರೇ ಪ್ರಜಾಕೀಯವನ್ನೇ ಬಿಡಲು ಸಿದ್ಧ' ಎಂದು ಹೇಳುತ್ತಿದ್ದಾರೆ. ಇದನ್ನೆಲ್ಲಾ ನೋಡಿದ್ರೆ, ಅಭಿಮಾನಿಗಳಿಗಾಗಿ ತಮ್ಮ ಕನಸನ್ನೇ ಬಿಟ್ಟು ಬಿಡ್ತಾರಾ ಎಂಬ ಕುತೂಹಲ ಕಾಡುತ್ತಿದೆ. ಅಷ್ಟಕ್ಕೂ, ಉಪ್ಪಿ ಭಕ್ತರ ಬೇಡಿಕೆ ಏನು.? ಮುಂದೆ ಓದಿ....

ಇಲ್ಲಿಂದ ಶುರುವಾಯ್ತು....

ಇಲ್ಲಿಂದ ಶುರುವಾಯ್ತು....

ಕೆಜಿಎಫ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಇದನ್ನ ನೋಡಿದ ಅಭಿಮಾನಿಯೊಬ್ಬ 'ಸಿನಿಮಾ ಹೇಗೆ ಮಾಡಬೇಕು ಎಂದು ತೋರಿಸುವ ಮೂಲಕ ಇಡೀ ಭಾರತದ ಗಮನ ಸೆಳೆದಿರುವ ಪ್ರಶಾಂತ್ ನೀಲ್ ಮತ್ತು ತಂಡದಿಂದ ನೀವು ಏನಾದರು ಕಲಿತುಕೊಂಡ್ರಾ.? ನಿಮಗೆ ಇದೆಲ್ಲಾ ಬೇಡ ಬಿಡಿ. ಯಾಕಂದ್ರೆ, ನೀವು ಅಂದುಕೊಂಡಿದ್ದೀರಾ, ಇದೆಲ್ಲಾ ನಾನು ಆಗಲೇ ಮಾಡಿಬಿಟ್ಟಿದ್ದೀನಿ ಅಂತ. ಸತ್ಯ ಏನಪ್ಪಾ ಅಂದ್ರೆ, ಅಭಿಮಾನಿಗಳ ಬಗ್ಗೆ ಯೋಚನೆ ಮಾಡದೇ ನೀವು ಬರಿ ರೀಮೇಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀರಾ'' ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.

ಉಪ್ಪಿ ಉತ್ತರ ಬೇರೇಯೇ ಇತ್ತು

ಉಪ್ಪಿ ಉತ್ತರ ಬೇರೇಯೇ ಇತ್ತು

ಈ ಟ್ವೀಟ್ ನೋಡಿದ ಉಪೇಂದ್ರ ''ನಾನು ನನಗೋಸ್ಕರ ಮಾಡಿದ್ರೆ ನಾನೊಬ್ಬ ಅತ್ಯುತ್ತಮ ನಟ, ನಿರ್ದೇಶಕ ಮತ್ತು ಸೂಪರ್ ಸ್ಟಾರ್ ಹಾಗೂ ಎಲ್ಲರಿಗಿಂತ ಉತ್ತಮ. ಆದ್ರೆ, ಆಕಸ್ಮಾತ್ ಆಗಿ ನಾನು ಬೇರೆಯವರಿಗಾಗಿ (ನಿಮಗಾಗಿ) ಬದುಕ್ತಿದ್ದೀನಿ. (ಸದಾ ನಾನು ಯಾವಾಗಲೂ ಬೇರೆಯವರ ಸಾಧನೆ ಮತ್ತು ಖುಷಿಯನ್ನ ಎದುರು ನೋಡುತ್ತೇನೆ) ಅದಕ್ಕಾಗಿಯೇ ಪ್ರಜಾಕೀಯ'' ಎಂದು ಟಾಂಗ್ ಕೊಟ್ಟರು.

ಉಪ್ಪಿ ವಿರುದ್ಧ ಇನ್ನೊಂದು ಹಂತದ ಅಟ್ಯಾಕ್

ಉಪ್ಪಿ ವಿರುದ್ಧ ಇನ್ನೊಂದು ಹಂತದ ಅಟ್ಯಾಕ್

ಉಪ್ಪಿಯ ಈ ಉತ್ತರ ನೋಡಿದ ಮತ್ತೊಬ್ಬ ಅಭಿಮಾನಿ ''ಉಪೇಂದ್ರ ಅವರು ರೀಮೇಕ್ ಮಾಡೋದು ಬಿಡಲ್ಲ, ಡೈರೆಕ್ಷನ್ ಮಾಡಲ್ಲ, ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಲ್ಲ. ಯಾಕಂದ್ರೆ, ಅವರು ನಮ್ಮ ಬಗ್ಗೆ ಯೋಚನೆ ಮಾಡಲ್ಲ. ಥ್ಯಾಂಕ್ ಯೂ ಬಾಸ್'' ಎಂದು ಪರೋಕ್ಷವಾಗಿ ಉಪ್ಪಿಗೆ ಧಿಕ್ಕಾರ ಹಾಕಿದರು.

ಉಪೇಂದ್ರ ಸಿರೀಯಸ್ ಆಗಿ ತಗೊಂಡ್ರು.!

ಉಪೇಂದ್ರ ಸಿರೀಯಸ್ ಆಗಿ ತಗೊಂಡ್ರು.!

ಉಪೇಂದ್ರ ಭಕ್ತರ ಈ ಮಾತುಗಳನ್ನ ಕೇಳಿದ ರಿಯಲ್ ಸ್ಟಾರ್ ''ದಯವಿಟ್ಟು ಈ ರೀತಿ ಯೋಚನೆ ಮಾಡಬೇಡಿ. ನೀವಿಲ್ಲದೇ ನಾನು ಏನೂ ಇಲ್ಲ. ನಿಮಗೆ ಏನು ಇಷ್ಟವಾಗತ್ತೋ ಅದನ್ನೇ ನಾನು ಮಾಡ್ತೀನಿ. ನಿಮಗೆ ನಾನು ಪ್ರಜಾಕೀಯ ಮಾಡೋದು ಬೇಡ, ಡೈರೆಕ್ಷನ್ ಮಾಡಿ ಅಂದ್ರೆ ಅದೇ ಮಾಡ್ತೀನಿ'' ಎಂದು ಮನವೊಲಿಸಲು ಮುಂದಾದರು.

ಅಭಿಮಾನಕ್ಕಾಗಿ ಕನಸು ಕೈಬಿಡ್ತಾರಾ.?

ಅಭಿಮಾನಕ್ಕಾಗಿ ಕನಸು ಕೈಬಿಡ್ತಾರಾ.?

ಉಪ್ಪಿ ಹೇಳಿದ ಮಾತಿನಲ್ಲಿ ಒಂದು ಅಂಶವನ್ನ ಮುಖ್ಯವಾಗಿ ಪರಿಗಣಿಸಬೇಕಿದೆ. ಅಭಿಮಾನಿಗಳು ಪ್ರಜಾಕೀಯ ಮಾಡೋದು ಬೇಡ, ಡೈರೆಕ್ಷನ್ ಮಾಡಿ' ಅಂದ್ರೆ ನಾನು ಅದನ್ನೇ ಮಾಡ್ತೀನಿ ಎಂದಿರುವುದನ್ನ ನೋಡಿದ್ರೆ, ಅಭಿಮಾನಿಗಳಿಗೆ ತಮ್ಮ ಕನಸನ್ನ ಕೈಬಿಡ್ತಾರಾ ಎಂಬ ಕುತೂಹಲ ಈಗ ಕಾಡ್ತಿದೆ. ಆದ್ರೆ, ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಉಪ್ಪಿ ಫ್ಯಾನ್ಸ್ ಯಾವುದೇ ಕಾರಣಕ್ಕೂ ಪ್ರಜಾಕೀಯ ನಿಲ್ಲಿಸಬೇಡಿ, ನಿರ್ದೇಶನವನ್ನ ಕೂಡ ಮಾಡಿ'' ಎಂದು ಮನವಿ ಮಾಡಿದ್ದಾರೆ.

More from Filmibeat

English summary
' I will do what you like. If you think that I should not do prajaakeeya and do direction i will'' says actor upendra to his fans
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X