For Quick Alerts
  ALLOW NOTIFICATIONS  
  For Daily Alerts

  'ರಾಜಕೀಯದಿಂದ ಹಣ ಕಿತ್ತಾಕಿ, ಎಲ್ಲವೂ ಉತ್ತಮವಾಗುತ್ತದೆ - ಉಪೇಂದ್ರ

  |

  'ರಾಜಕೀಯದಲ್ಲಿ ಬಿಸಿನೆಸ್ ಹೆಚ್ಚಾದ ಕಾರಣ ತೊಂದರೆಗಳು ಎದುರಾಗಿದೆ. ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಅಭಿವೃದ್ದಿ ಸಾಧ್ಯ' ಎಂದು ನಟ-ರಾಜಕಾರಣಿ ಉಪೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

  ಉಪೇಂದ್ರ ಅಭಿನಯದ 'ಲಗಾಮು' ಚಿತ್ರದ ಮೂಹೂರ್ತ ಬೆಂಗಳೂರಿನಲ್ಲಿ ನಡೆದಿದ್ದು, ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಉಪೇಂದ್ರ ಪ್ರಸ್ತುತ ಕೊರೊನಾ ವೈರಸ್ ಪರಿಸ್ಥಿತಿಗೆ ಏನು ಕಾರಣ ಹಿಂದೆ ತಿಳಿಸಿದರು.

  'ಟೀಕಿಸುವುದು, ದೂಷಿಸುವುದು ಬಿಡಿ, ಜನರು ಜವಾಬ್ದಾರಿಯಿಂದ ವರ್ತಿಸಿ''ಟೀಕಿಸುವುದು, ದೂಷಿಸುವುದು ಬಿಡಿ, ಜನರು ಜವಾಬ್ದಾರಿಯಿಂದ ವರ್ತಿಸಿ'

  'ಚುನಾವಣೆ ಬಂದಾಗ ತಪ್ಪು ಮಾಡಿಬಿಟ್ಟು ಆಮೇಲೆ ಹೋರಾಟ ಪ್ರತಿಭಟನೆ ಮಾಡ್ತೀವಿ. ಜನರು ವಿಚಾರವಂತರಾಗಬೇಕು. ಸೂಕ್ತ ಶಿಕ್ಷಣ ಮತ್ತು ಆರೋಗ್ಯ ಇದ್ದರೆ ಮಾತ್ರ ಅಭಿವೃದ್ದಿ ಸಾಧ್ಯ. ಆದರೆ ಪ್ರಸ್ತುತ ಎಲ್ಲದರಲ್ಲೂ ಬಿಸಿನೆಸ್ ಆಗಿದೆ. ಹಾಗಾಗಿ, ಇಂತಹ ಸ್ಥಿತಿ ಇದೆ. ರಾಜಕೀಯ ಎಂಬ ವ್ಯವಸ್ಥೆಯಿಂದ ಹಣ ಅನ್ನುವುದನ್ನು ಕಿತ್ತಾಕಬೇಕಿದೆ' ಎಂದು ಉಪ್ಪಿ ಹೇಳಿದ್ದಾರೆ.

  'ಜನರನ್ನು ಪಾಲನೆ ಮಾಡಿ ಅಂತ ಹೇಳುವವರು ಅವರು ಮಾರ್ಗದರ್ಶಕರಾಗಬೇಕು ಅಲ್ಲವೇ. ರಾಜಕೀಯ ಸಭೆ, ಸಮಾರಂಭದಲ್ಲಿ ಸಾವಿರಾರು ಜನ ಸರ್ತಾರೆ. ಈ ಕಡೆ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತಾರೆ. ಆಗಲೇ ಜನ ಗೊಂದಲಕ್ಕೆ ಒಳಗಾಗುವುದು. ಅಲ್ಲಿ ಕೊರೊನಾ ಬರಲ್ಲ, ಇಲ್ಲಿ ಬಂದು ಬಿಡುತ್ತಾ ಎಂಬ ಮನಸ್ಥಿತಿ ಬೆಳಸಿಕೊಳ್ಳುತ್ತಾರೆ. ಜನನಾಯಕರು ಸರಿ ಇದ್ದಿದ್ದರೆ ಎಲ್ಲವೂ ಸರಿಹೋಗ್ತಿತ್ತು'' ಎಂದು ರಾಜಕಾರಣಿಗಳ ನಡೆ ಖಂಡಿಸಿದ್ದಾರೆ ಉಪೇಂದ್ರ.

  'ಮೊದಲು ಮನಸ್ಸಿಗೆ ಕಾಯಿಲೆ ಬರುತ್ತೆ, ಆಮೇಲೆ ದೇಹಕ್ಕೆ ಬರುತ್ತೆ. ಹಾಗಾಗಿ, ಧೈರ್ಯವಾಗಿರಬೇಕು, ಧೈರ್ಯ ಕಳೆದುಕೊಳ್ಳಬಾರದು. ಧೈರ್ಯ ಇದೆ ಅಂತ ಸಾಮಾಜಿಕ ಜವಾಬ್ದಾರಿ ಮರೆಯಬೇಡಿ. ಅಗತ್ಯ ಮುನ್ನೆಚ್ಚರಿಕೆ ವಹಿಸಿ'' ಎಂದು ಮನವಿ ಮಾಡಿದ್ದಾರೆ.

  ಕೊರೊನಾದಿಂದ ಸಾಧುಕೋಕಿಲ ಅನುಭವಿಸಿದ ಕಷ್ಟ ಎಂಥದ್ದು? | Filmibeat Kannada

  'ಲಗಾಮು' ಸಿನಿಮಾ ಬಗ್ಗೆ ಹೇಳುವುದಾದರೆ ಕೆ ಮಾದೇಶ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು ಸೇರಿದಂತೆ ಹಲವರು ತಾರಬಳಗದಲ್ಲಿದ್ದಾರೆ. ಇದರ ಜೊತೆಗೆ 'ಕಬ್ಜ' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.

  English summary
  Actor Upendra Slams Politicians for Surge in Coronavirus Cases at Lagaam Movie Muhurta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X