20 ವರ್ಷದ ಬಳಿಕ ರಿ-ರಿಲೀಸ್ ಆಗುತ್ತಿದೆ 'ಉಪೇಂದ್ರ' ಸಿನಿಮಾ
Recommended Video
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಸೂಪರ್ ಹಿಟ್ ಉಪೇಂದ್ರ ಸಿನಿಮಾ ಮತ್ತೆ ಚಿತ್ರಾಭಿಮಾನಿಗಳ ಮುಂದೆ ಬರ್ತಿದೆ. ರಿಯಲ್ ಸ್ಟಾರ್ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ ಸಿನಿಮಾಗಳಲ್ಲಿ ಇದು ಒಂದು. 1999ರಲ್ಲಿ ತೆರೆಗೆ ಬಂದ ಉಪೇಂದ್ರ ಸಿನಿಮಾವನ್ನು ಮತ್ತೆ ಮರು ಬಿಡುಗಡೆ ಮಾಡುವ ತಯಾರಿ ಮಾಡಿದೆ ಚಿತ್ರತಂಡ.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಜೊತೆಗೆ ನಾಯಕನಾಗಿಯು ಮಿಂಚಿರುವ ಸಿನಿಮಾ. ಚಿತ್ರದಲ್ಲಿ ಮೂವರು ನಾಯಕಿಯಾರು ಮಿಂಚಿದ್ದಾರೆ. ಪ್ರೇಮ, ದಾಮಿನಿ ಮತ್ತು ರವೀನಾ ಟಂಡನ್ ಈ ಮೂವರು ನಟಿಮಣಿರು ರಿಯಲ್ ಸ್ಟಾರ್ ಜೊತೆ ತೆರೆಹಂಚಿಕೊಂಡಿದ್ದರು.
ರಿಯಲ್ ಸ್ಟಾರ್ ನಿಭಾಯಿಸಿದ್ದ ನಾನು ಎನ್ನುವ ಪಾತ್ರ ಚಿತ್ರಾಭಿಮಾನಿಗಳನ್ನು ನಿದ್ದೆಗೆಡಿಸಿತ್ತು. ಗುರುಕಿರಣ್ ಸಂಗೀತ ಚಿತ್ರಕ್ಕೆ ಮತ್ತಷ್ಟು ಮೆರಗುನೀಡಿತ್ತು. ಉಪೇಂದ್ರ ಹಾಡುಗಳು ಇಂದಿಗೂ ಗಾನಪ್ರಿಯರ ಫೇವರಿಟ್. ಒಂದು ಕಾಲದಲ್ಲಿ ಧೂಳ್ ಎಬ್ಬಿಸಿದ್ದ ಉಪೇಂದ್ರ ಸಿನಿಮಾ ಈಗ ಮತ್ತೆ ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ.

ಚಿತ್ರವನ್ನು ಮರು ಬಿಡುಗಡೆ ಮಾಡಬೇಕೆಂದು ನಿರ್ಮಾಪಕಿ ಶಿಲ್ಪಾ ಶ್ರೀನಿವಾಸ್ ಪ್ಲಾನ್ ಮಾಡಿದ್ದಾರೆ. 20 ವರ್ಷಗಳ ಹಿಂದೆ ಮಲ್ಟಿಫ್ಲೆಕ್ಸ್ ಇರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮುರು ಬಿಡುಗಡೆಯಾದ ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಹಾಗಾಗಿ ಉಪೇಂದ್ರ ಸಿನಿಮಾವನ್ನು ಮತ್ತೆ ರಿಲೀಸ್ ಮಾಡಿದರೆ ಹೇಗೆ ಎನ್ನುವ ಆಲೋಚನೆಯಿಂದ ಸಿನಿಮಾ ರಿಲೀಸ್ ಮಾಡುತ್ತಿದ್ದಾರಂತೆ.
ಇನ್ನು ಉಪೇಂದ್ರ ಅವರ ಜೊತೆ ಮಾತುಕತೆ ನಡೆಸಿಲ್ಲವಂತೆ. ಉಪೇಂದ್ರ ಅವರ ಜೊತೆ ಮಾತನಾಡಿ ನಂತರ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿದ್ದಾರಂತೆ. ಆದ್ರೆ ಯಾವತ್ತು ಎನ್ನುವುದು ಇನ್ನು ಅಧಿಕೃತವಾಗಿಲ್ಲ. ವಿಶೇಷ ಅಂದ್ರೆ ಸಿನಿಮಾ ರಿಲೀಸ್ ಆದ ಸಮಯದಲ್ಲಿ ಉಪೇಂದ್ರ ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಆಗಿತ್ತು. ಆದ್ರೀಗ ಕನ್ನಡ ತೆಲುಗು ಜೊತೆಗೆ ತಮಿಳಿನಲ್ಲು ಡಬ್ ಮಾಡಿ ಮೂರು ಭಾಷೆಯಲ್ಲಿ ರಿಲೀಸ್ ಮಾಡುವ ಗುರಿ ಇಟ್ಟುಕೊಂಡಿದ್ದಾರೆ.


Click it and Unblock the Notifications











