ಸುದೀಪ್, ಯಶ್ ಹಾದಿಯಲ್ಲೇ ಹೆಜ್ಜೆ ಹಾಕಿದ ರಿಯಲ್ ಸ್ಟಾರ್ ಉಪೇಂದ್ರ
ಕೆಲ ವಾರಗಳ ಹಿಂದಿನಿಂದ ಇಡೀ ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋಗಳ ಧ್ಯೇಯ ಮತ್ತು ಉದ್ದೇಶ ಒಂದೇ ಆಗಿದೆ. ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ವರ್ಷ ಸಾಹಸಸಿಂಹನಾಗಿ ಮಿಂಚಿ ನಂತರ ಮರೆಯಾದ ಅಭಿನಯ ಭಾರ್ಗವ ನಟ ವಿಷ್ಣುವರ್ಧನ್ ಅವರಿಗೆ ಗೌರವ ಸಲ್ಲಬೇಕು ಅನ್ನೋದು.
ಹೇಗಾದರೂ ಮಾಡಿ ಸರ್ಕಾರದ ಕಣ್ಣು ತೆರೆಸಿ ಚಿತ್ರರಂಗದವರೆಲ್ಲವೂ ಸೇರಿ ಅದ್ಬುತ ಕಲಾವಿದನಿಗೆ ಗೌರವ ಸಲ್ಲಿಸಬೇಕು ಎಂದು ನಾಯಕರೆಲ್ಲರೂ ಪಣತೊಟ್ಟು ಒಂಬರ ನಂತರ ಒಬ್ಬರು ತಮಗಾಗುವ ರೀತಿಯಲ್ಲಿ ಪುಣ್ಯಭೂಮಿ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗಾಗಲೇ ವಿಷ್ಣು ಸ್ಮಾರಕ ವಿಚಾರವಾಗಿ ಮಾತನಾಡಿರುವ ಸ್ಟಾರ್ ನಟರ ಜೊತೆ ರಿಯಲ್ ಸ್ಟಾರ್ ಉಪ್ಪಿ ಕೈ ಜೋಡಿಸಿದ್ದಾರೆ.
ಹಾಗಾದರೆ ವಿಷ್ಣು ಪುಣ್ಯಭೂಮಿಗಾಗಿ ಉಪೇಂದ್ರ ಹಾಕಿರೋ ಪ್ಲಾನ್ ಏನು? ರಾಜಕೀಯವಾಗಿ ಪಕ್ಷದ ಮೂಲಕ ಉಪೇಂದ್ರ ಏನಾದ್ರು ಯೋಜನೆ ಹಾಕಿದ್ದಾರಾ? ವಿಷ್ಣು ವಿಚಾರವಾಗಿ ಉಪ್ಪಿ ತೆಗೆದುಕೊಂಡಿರೋ ನಿಲುವೇನು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ಸುದೀಪ್, ಯಶ್ ಜೊತೆ ಸೇರಿದ್ರು ಉಪೇಂದ್ರ
ವಿಷ್ಣು ಪುಣ್ಯಭೂಮಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲೇ ನಿರ್ಮಾಣವಾಗಲಿ ಅನ್ನೋ ಒಕ್ಕೊರಲಿನ ಮಾತಿಗೆ ಉಪೇಂದ್ರ ಕೂಡ ಧ್ವನಿ ಸೇರಿಸಿದ್ದಾರೆ. ವಿಷ್ಣುವಿಗೆ ಸಲ್ಲಬೇಕಾದ ಗೌರವ ಸಲ್ಲಲ್ಲೇ ಬೇಕು ಎಂದು ಉಪೇಂದ್ರ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ.

ಸರ್ಕಾರದ ಗಮನ ಸೆಳೆಯಲು ಅಭಿಮಾನದ ದೀವಿಗೆ
ಹಚ್ಚೋಣ ಅಭಿಮಾನದ ದೀವಿಗೆ, ಹರಿಯಲಿ ಸರ್ಕಾರದ ಗಮನ ವಿಷ್ಣು ಸ್ಮಾರಕದ ಕಡೆಗೆ ಅನ್ನೋ ಘೋಷವಾಕ್ಯದ ಮೂಲಕ ಉಪ್ಪಿ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಇಂದು ಸಂಜೆ (ಡಿ-17) ಅಭಿಮಾನ್ ಸ್ಟುಡಿಯೋದಲ್ಲಿ ನೂರಾರು ಅಭಿಮಾನಿಗಳ ಜೊತೆ ದೀಪ ಬೆಳಗಿಸಿ ತಮ್ಮದೇ ಸ್ಟೈಲ್ ನಲ್ಲಿ ಹೋರಾಟ ಮಾಡಲಿದ್ದಾರೆ ಉಪೇಂದ್ರ.

ಪುಣ್ಯಭೂಮಿ ಹೋರಾಟಕ್ಕೆ ಸಿಗುವುದೇ ಗೆಲುವು ?
ನಟ ಕಿಚ್ಚ ಸುದೀಪ್ 'ನಮಗೆ ಸ್ಮಾರಕ ಬೇಕಾಗಿಲ್ಲ, ಪುಣ್ಯಭೂಮಿ ಮಾಡಿಕೊಳ್ಳಲು ಸ್ವಲ್ಪ ಜಾಗ ನೀಡಿ' ಅನ್ನೋ ಮನವಿಯನ್ನ 'ಸಿ ಎಂ ಸಿದ್ದರಾಮಯ್ಯ' ಅವರಿಗೆ ಸಲ್ಲಿಸಿದ್ದರು. ಮುಖ್ಯಮಂತ್ರಿಗಳು ಕೂಡ ಆದಷ್ಟು ಬೇಗ ಈ ವಿವಾದವನ್ನ ಬಗೆ ಹರಿಸಿಕೊಡುವುದಾಗಿ ಭರವಸೆಯನ್ನೂ ನೀಡಿದ್ದಾರೆ.

ಅದೇ ಪ್ರಯತ್ನದಲ್ಲಿದ್ದಾರೆ ಯಶ್ ಮತ್ತು ಕೆ ಮಂಜು
ಸುದೀಪ್ ರಂತೆಯೇ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ಮಾಪಕ ಕೆ ಮಂಜು ಕೂಡ ಇದೇ ಪ್ರಯತ್ನದಲ್ಲಿದ್ದಾರೆ. ಪುಣ್ಯಭೂಮಿ ಮಾಡಿಕೊಳ್ಳಲು ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಮಾಡಿಕೊಂಡಿ ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ದಿವಂಗತ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ಮನವಿ ಮಾಡಿದ್ದಾರೆ. ಒಟ್ಟಾರೆ ಎಲ್ಲಾ ಕಲಾವಿದರು ವಿಷ್ಣುಪುಣ್ಯ ಭೂಮಿ ನಿರ್ಮಾಣಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ಇತ್ತ ಒಲವು ತೋರುತ್ತದೆ ಅನ್ನೋದನ್ನ ಕಾದು ನೋಡಬೇಕು.


Click it and Unblock the Notifications











