ಆರ್ ಚಂದ್ರು ಜೊತೆ ಉಪೇಂದ್ರ ಹ್ಯಾಟ್ರಿಕ್ ಸಿನಿಮಾ
ನಿರ್ದೇಶಕ ಆರ್ ಚಂದ್ರು 'ಬ್ರಹ್ಮ' ಸಿನಿಮಾವನ್ನು ಉಪೇಂದ್ರರಿಗೆ ಮಾಡಿದ್ದರು. ಆ ಬಳಿಕ 'ಐ ಲವ್ ಯೂ' ಸಿನಿಮಾದಲ್ಲಿ ಈ ಜೋಡಿ ಒಂದಾಗಿತ್ತು. ಈ ಚಿತ್ರದ ನಂತರ ಮತ್ತೆ ಹ್ಯಾಟ್ರಿಕ್ ಚಿತ್ರ ಮಾಡಲು ಪ್ಲಾನ್ ಮಾಡಿದ್ದಾರೆ.
ಸಿನಿಮಾದ 25ನೇ ದಿನದ ಸಂಭ್ರಮಾಚರಣೆಯಲ್ಲಿ ಉಪೇಂದ್ರ ಈ ಬಗ್ಗೆ ಮಾತನಾಡಿದ್ದಾರೆ. 'ಐ ಲವ್ ಯೂ' ಬಳಿಕ 'ಐ ಲವ್ ಯೂ ಟೂ' ಸಿನಿಮಾ ಮಾಡುತ್ತೀರಾ? ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.
''ಹಾಗೇನಿಲ್ಲ. ಈ ಯಶಸ್ಸನ್ನು ಎನ್ಕ್ಯಾಶ್ ಮಾಡಲಿಕ್ಕಾಗಿ ಮತ್ತೊಂದು ಭಾಗ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ. ಆದರೆ, ನಿರ್ದೇಶಕ ಚಂದ್ರು ಅವರು ನನ್ನ ಕಾಂಬಿನೇಶನ್ ನಲ್ಲಿ ಮತ್ತೊಂದು ಚಿತ್ರ ಪ್ಲಾನ್ ಮಾಡುತ್ತಿರುವುದೇನೋ ನಿಜ.'' ಎಂದು ಹೇಳಿದ್ದಾರೆ.

ಆದರೆ, ಆ ಸಿನಿಮಾ ''ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸರಿಯಾಗಿ ತೀರ್ಮಾನ ಮಾಡಿದ ಬಳಿಕವಷ್ಟೇ ಆ ಬಗ್ಗೆ ಮಾಹಿತಿ ನೀಡಬಹುದು.'' ಎಂದು ಉಪೇಂದ್ರ ಹೇಳಿದ್ದಾರೆ.
ಉಪೇಂದ್ರ ಹೇಳುವ ಪ್ರಕಾರ ಅವರು ಆರ್ ಚಂದ್ರು ಜೊತೆಗೆ ಮತ್ತೊಂದು ಸಿನಿಮಾ ಮಾಡುತ್ತಾರೆ. ಈ ಜೋಡಿಯ ಹ್ಯಾಟ್ರಿಕ್ ಸಿನಿಮಾ ಇದಾಗಲಿದೆ.


Click it and Unblock the Notifications











