ಬೆಂಗಳೂರಿನ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್‌ನಲ್ಲಿ ಲೇಡಿ ಉಪೇಂದ್ರ ಹವಾ, ಹುಚ್ಚಾಪಟ್ಟೆ ಡ್ಯಾನ್ಸ್..!
ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮವಾದ ಕಂಟೆಂಟ್ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸುತ್ತಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎನ್ನುವುದನ್ನು ಹಲವಾರು ಸೋಶಿಯಲ್ ಮೀಡಿಯಾ ಇನ್ ಫ್ಯುಯೆನ್ಸರ್‌ಗಳು ಸಾಬೀತು ಮಾಡಿದ್ದಾರೆ. ಗಂಗಾ ರಂಗಾ ಕೂಡ ಇದೇ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ತಮ್ಮಲ್ಲಿನ ಕಲೆಯನ್ನು ಪ್ರದರ್ಶಿಸುವ ಮೂಲಕ ಅನೇಕರ ಗಮನವನ್ನು ಸೆಳೆಯುತ್ತಿದ್ದಾರೆ.
ಗಂಗಾ ರಂಗಾ ಇಲ್ಲಿಯವರೆಗೆ ಹತ್ತು ಹಲವು ವಿಡಿಯೋಗಳನ್ನು ಮಾಡಿದ್ದಾರೆ. ತಮ್ಮಲ್ಲಿನ ಅಭಿನಯ ಸಾಮರ್ಥ್ಯದ ಪ್ರದರ್ಶನವನ್ನು ಕೂಡ ಮಾಡಿದ್ದಾರೆ. ಇವರ ಈ ವಿಡಿಯೋಗಳನ್ನು ಜನ ಮೆಚ್ಚಿಕೊಳ್ತಿದ್ದಾರೆ ಕೂಡ. ಇದಕ್ಕೆ ಕೈಗನ್ನಡಿ ಎಂಬಂತೆ ಗಂಗಾ ರಂಗಾ ಅವರನ್ನು ಇನ್ಸ್ಟಾಗ್ರಾಮ್‌ನಲ್ಲಿ 1,73,014 ಜನ ಹಿಂಬಾಲಿಸುತ್ತಿದ್ದಾರೆ. ಕಾಮೆಂಟ್‌ಗಳನ್ನು ಮಾಡುವ ಮೂಲಕ ಇವರನ್ನು ಇನ್ನು ಹುರಿದುಂಬಿಸುತ್ತಿದ್ದಾರೆ.

ಇನ್ನು ಸಾಮಾನ್ಯವಾಗಿ ಜನಜಂಗುಳಿ ಇರುವ ಪ್ರದೇಶದಲ್ಲಿ ವಿಡಿಯೋಗಳನ್ನು ಮಾಡುವುದು, ರೀಲ್ಸ್‌ಗಳನ್ನು ಮಾಡುವುದು, ರಸ್ತೆಯಲ್ಲಿ ಎಲ್ಲ ಕುಣಿದಾಡುವುದು ಕಷ್ಟ. ಆದರೆ, ಯಾವುದನ್ನು ಲೆಕ್ಕಿಸದೇ, ನೋಡಿದವರು ಏನಂತಾರೆ ಎಂದು ಯೋಚನೆಯನ್ನು ಮಾಡದೇ ಗಂಗಾ ರಂಗಾ ರೋಡ್ ನಂದೇ ಯಾರಿಗೂ ಹೆದರಲ್ಲ ಎಂದು ಅನೇಕ ವಿಡಿಯೋಗಳನ್ನು ಮಾಡಿದ್ದಾರೆ. ಆ ಪೈಕಿ ಮಡೆನೂರು ಮನು ಅಭಿನಯದ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಹಾಡಿಗೆ ಗಂಗಾ ರಂಗಾ ಹೆಜ್ಜೆ ಹಾಕಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಹೌದು, ಬೆಂಗಳೂರಿನ ಜನನಿಬೀಡ ಪ್ರದೇಶವಾದ ಮೆಜೆಸ್ಟಿಕ್‌ನಲ್ಲಿ ಗಂಗಾ ಅವರು ಕುಲದಲ್ಲಿ ಕೀಳ್ಯಾವುದೋ ಚಿತ್ರದ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ವಿಶೇಷ ಅಂದರೆ ಉಪೇಂದ್ರ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಉಪೇಂದ್ರ ಹಾಕಿಕೊಂಡಿದ್ದ ಬಟ್ಟೆಯನ್ನೇ ಹೋಲುವ, ಉಪೇಂದ್ರ ಅವರ ಭಾವ ಚಿತ್ರ ಇರುವ ಬಟ್ಟೆಯನ್ನು ಗಂಗಾ ಹಾಕಿಕೊಂಡಿದ್ದಾರೆ. ಮೆಜೆಸ್ಟಿಕ್ ನಲ್ಲೆಡೆ ಕುಣಿದು ಕುಪ್ಪಳಿಸಿದ್ದಾರೆ.
ಸದ್ಯ ಗಂಗಾ ಹುಚ್ಚಾಪಟ್ಟೆ ಡ್ಯಾನ್ಸ್ ಮಾಡಿರುವ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ. ತರಹೇವಾರಿ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ಹಲವರು ಇವರ ಧೈರ್ಯವನ್ನು ಮೆಚ್ಚಿಕೊಂಡಿದ್ದು ಈ ರೀತಿ ಪಬ್ಲಿಕ್‌ನಲ್ಲಿ ಕಲೆ ಪ್ರದರ್ಶನ ಮಾಡೋಕು ಡಬಲ್ ಗುಂಡಿಗೆ ಬೇಕು ಎಂದಿದ್ಧಾರೆ. ಬಡವರ ಮಕ್ಕು ಬೆಳಿಬೇಕು ಎಂದಿದ್ದಾರೆ. ಅಕ್ಕ ನೀನು ಸೂಪರ್ ಎನ್ನುವ ಮೂಲಕ ಬೆನ್ನು ತಟ್ಟಿದ್ದಾರೆ. ನಮ್ಮ ಬೆಂಬಲ ಸದಾ ನಿಮ್ಮ ಜೊತೆ ಇದ್ದೇ ಇರುತ್ತೆ ನೀವು ಹೀಗೆ ವಿಡಿಯೋ ಮಾಡುವ ಮೂಲಕ ನಿಮ್ಮ ಕಲೆಯ ಪ್ರದರ್ಶನವನ್ನು ಮಾಡಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಅಂದ್ಹಾಗೇ ಗಂಗಾ ಇಷ್ಟೊಂದು ಬಿಂದಾಸ್ ಆಗಿ ರೀಲ್ಸ್‌ಗಳನ್ನು ಮಾಡಲು ಇವರ ಪತಿಯೇ ಕಾರಣ. ಸಂದರ್ಶನವೊಂದರಲ್ಲಿ ಖುದ್ದು ರಂಗಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ನು ಇವರಿಗೆ ಮಗು ಕೂಡ ಇದ್ದು ಮಗು ಮಲಗಿದ ಸಮಯದಲ್ಲಿ ರೀಲ್ಸ್ ಮಾಡುವ ಅಭ್ಯಾಸವನ್ನು ಮಾಡಿಕೊಂಡಿದ್ಧಾರೆ ಗಂಗಾ. ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಗಂಗಾ ಅವರಿಗೆ ಅವರ ಪತಿ ಪ್ರೋತ್ಸಾಹ ನೀಡಿದ್ದಕ್ಕೆ ಇವತ್ತು ಗಂಗಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಲು ಶುರುಮಾಡಿದ್ದಾರೆ. ಸ್ಟಾರ್ ಸುವರ್ಣದ ವೇದಿಕೆಯಲ್ಲಿ ಕೂಡ ಗಂಗಾ ಮಿಂಚಿದ್ದಾರೆ.


Click it and Unblock the Notifications











