ಸಿನಿಮಾರಂಗ ಪ್ರವೇಶದ ಬಗ್ಗೆ ಉಪೇಂದ್ರ ಮಗನ ಮಾತು
ಉಪೇಂದ್ರ-ಪ್ರಿಯಾಂಕಾ ದಂಪತಿಗೆ ಇಬ್ಬರು ಮಕ್ಕಳು. ದೊಡ್ಡ ಮಗ ಆಯುಷ್, ಮಗಳು ಐಶ್ವರ್ಯ. ಸ್ಟಾರ್ ಕಲಾವಿದರನ್ನು ಪೋಷಕರಾಗಿ ಪಡೆದಿರುವ ಮಕ್ಕಳಿಬ್ಬರಿಗೂ ಸಿನಿಮಾ ರಂಗದ ಕಡೆ ಆಸಕ್ತಿ ಇರುವುದು ಸಾಮಾನ್ಯ ಅಲ್ಲವೆ?
ಅಂತೆಯೇ ಉಪೇಂದ್ರ ಮಗ ಆಯುಷ್ ತಮ್ಮ ಸಿನಿಮಾ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಇನ್ನೂ 17 ವರ್ಷದ ಆಯುಷ್ ಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಬೇಕೆನ್ನುವ ಆಸಕ್ತಿ ಇದೆ ಎಂಬುದು ಸ್ಪಷ್ಟ.
ಉಪೇಂದ್ರ ಅಣ್ಣನ ಮಗನ ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಏರಿದ ಉಪೇಂದ್ರ ಮಗ ಆಯುಷ್, 'ನಾನು ಹೀರೋ ಆಗಿ ನಟಿಸಬೇಕೆಂದರೆ, ನಮ್ಮ ಅಪ್ಪನೇ ಆ ಸಿನಿಮಾ ನಿರ್ದೇಶಿಸಬೇಕು' ಎಂದಿದ್ದಾರೆ. ಆ ಮೂಲಕ ಅಪ್ಪನ ನಿರ್ದೇಶನದಲ್ಲಿಯೇ ಮೊದಲ ಸಿನಿಮಾ ಮಾಡುವ ಕನಸಿಟ್ಟುಕೊಂಡಿರುವುದಾಗಿ ಹೇಳಿದ್ದಾರೆ ಆಯುಷ್.

ಆಯುಷ್ ತಂಗಿ ಐಶ್ವರ್ಯಾ ಸಹ ಸಿನಿಮಾರಂಗದ ಕಡೆಗೆ ಆಸಕ್ತಿ ಉಳ್ಳವರೇ. ಸ್ವತಃ ಉಪೇಂದ್ರ ಹೇಳಿದ್ದಂತೆ, ಐಶ್ವರ್ಯಾ ಗೆ ಕತೆ, ಕವನ ಬರೆಯುವ ಆಸಕ್ತಿ ಹೆಚ್ಚಿದೆಯಂತೆ. ಬಹಳ ಚೆನ್ನಾಗಿ ಕತೆಗಳನ್ನು ಮಗಳು ಬರೆಯುತ್ತಾಳೆ ಎಂದು ಈ ಹಿಂದೆ ಹೇಳಿದ್ದರು ಉಪೇಂದ್ರ.
Recommended Video
ಆಯುಷ್ ಈಗಷ್ಟೆ ಕಾಲೇಜು ಮೆಟ್ಟಿಲು ಹತ್ತಿದ್ದಾರೆ, ಇನ್ನು ತಂಗಿ ಐಶ್ವರ್ಯ ಈ ವರ್ಷ ಎಸ್‌ಎಸ್‌ಎಲ್‌ಸಿ ಕಲಿಯುತ್ತಿದ್ದಾರೆ. ಇಬ್ಬರೂ ಸಿನಿಮಾ ರಂಗಕ್ಕೆ ಬರಲು ಇನ್ನೂ ಐದು ವರ್ಷವಂತೂ ಬೇಕೇ ಬೇಕು. ಸದ್ಯಕ್ಕೆ ಉಪೇಂದ್ರ ಅವರ ಅಣ್ಣನ ಮಗ 'ಸೂಪರ್ ಸ್ಟಾರ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.


Click it and Unblock the Notifications











