For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ನಾಟಕಗಳ ನಡುವೆ ಉಪೇಂದ್ರ ಮಾಡಿದರು ಮತ್ತೊಂದು ಟ್ವೀಟ್

  By Naveen
  |
  ಆಗ್ಲೇ ಶುರುವಾತು ಉಪೇಂದ್ರ ರಾಜಕೀಯ ಗಿಮಿಕ್ | Filmibeat Kannada

  ಕರ್ನಾಟಕ ಚುನಾವಣೆಯ ಪಲಿತಾಂಶ ಬಂದ ದಿನದಿಂದ ಇಲ್ಲಿಯವರೆಗೆ ದೊಡ್ಡ ದೊಡ್ಡ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದು ಕಡೆ ಎಲ್ಲರಿಗೂ ಯಾರು ಮುಖ್ಯಮಂತ್ರಿ ಪಟ್ಟದಲ್ಲಿ ಕೂರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಇದೀಗ ಬಿ.ಎಸ್.ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

  ಯಡಿಯೂರಪ್ಪ ಪ್ರಮಾಣ ವಚನ ಒಂದು ಕಡೆಯಾದರೆ, ಇನ್ನೊಂದು ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕೂಡ ಅಧಿಕಾರಕ್ಕೆ ಬರಲು ಸಾಹಸ ಮಾಡುತ್ತಿವೆ. ರಾಜ್ಯದಲ್ಲಿ ನಡೆಯುತ್ತಿರುವ ಈ ಘಟನೆಗಳ ಬಗ್ಗೆ ಈಗ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪೇಂದ್ರ ಮತ್ತೊಂದು ಟ್ವೀಟ್ ಮಾಡಿದ್ದಾರೆ.

  LIVE: ಹಸಿರು ಶಾಲು ಹೊದ್ದು ಮತ್ತೆ ಮುಖ್ಯಮಂತ್ರಿಯಾದ ಯಡಿಯೂರಪ್ಪ

  ''ರಾಜಕೀಯವನ್ನು ಬೈಯುತ್ತಾ ಕಾಲಹರಣ ಮಾಡುವುದರ ಬದಲು ನಾವೆಲ್ಲರೂ ಪ್ರಜಾಕೀಯದ ಬಗ್ಗೆ ಈಗಿಂದಲೇ ಎಲ್ಲರಿಗೂ ಅರಿವು ಮೂಡಿಸೋಣ. 'ಪ್ರತಿಕ್ರಿಯೆಗಿಂತ ಕ್ರಿಯೆ ಶ್ರೇಷ್ಠವಾದದ್ದು.'' ಎಂದು ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಹಾಗೂ ಬೆಂಬಲಿಗರಿಗೆ ಕರೆ ಕೊಟ್ಟಿದ್ದಾರೆ.

  ಇನ್ನು ಚುನಾವಣೆಯ ಪಲಿತಾಂಶ ಬಂದ ದಿನ ಕೂಡ ಉಪ್ಪಿ 'ಆದದ್ದೆಲ್ಲ ಒಳಿತೇ ಆಯಿತು' ಎಂದು ಟ್ವೀಟ್ ಮಾಡಿದ್ದರು. ಇದೀಗ ಈ ಟ್ವೀಟ್ ಹಿಂದಿನ ಅರ್ಥ ಏನು ಎಂಬ ಕೂತುಹಲ ಹೆಚ್ಚಾಗಿದೆ. ಒಂದು ಕಡೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಾಗದೆ ಇರುವುದನ್ನು ಕುರಿತು ಉಪೇಂದ್ರ 'ಆದದ್ದೆಲ್ಲ ಒಳಿತೇ ಆಯಿತು' ಎಂದು ಹೇಳಿದರಾ? ಅಥವಾ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮಿಶ್ರ ಸರ್ಕಾರ ಮಾಡುವುದಕ್ಕೆ 'ಆದದ್ದೆಲ್ಲ ಒಳಿತೇ ಆಯಿತು' ಎಂದು ಉಪ್ಪಿ ಹೇಳಿದರಾ ? ಎಂಬ ಗೊಂದಲ ಸೃಷ್ಟಿಯಾಗಿತ್ತು.

  English summary
  Karnataka Election Results 2018: Kannada actor and Uttama Prajakiya Party fonder Upendra's tweet about Karnataka Election Results 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X