»   » ಕನ್ನಡ ಸಿನಿಮಾ ನೋಡಿ ಹೊಟ್ಟೆ ಉರಿದುಕೊಂಡ ನಟ 'ವಿಜಯ್ ದೇವರಕೊಂಡ'

ಕನ್ನಡ ಸಿನಿಮಾ ನೋಡಿ ಹೊಟ್ಟೆ ಉರಿದುಕೊಂಡ ನಟ 'ವಿಜಯ್ ದೇವರಕೊಂಡ'

Posted By:
Subscribe to Filmibeat Kannada
ಕನ್ನಡ ಸಿನಿಮಾ ನೋಡಿ ಹೊಟ್ಟೆ ಉರಿದುಕೊಂಡ ನಟ 'ವಿಜಯ್ ದೇವರಕೊಂಡ' | Filmibeat Kannada

ಕನ್ನಡ ಸಿನಿಮಾರಂಗ ಬದಲಾಗಿದೆ. ದಿನ ಕಳೆದಂತೆ ಸಿನಿಮಾಗಳ ಕ್ವಾಲಿಟಿ ಜೊತೆಗೆ ಕಂಟೆಂಟ್ ಕೂಡ ಬದಲಾಗುತ್ತಿದೆ. ಹೊಸ ರೀತಿಯ ಸಿನಿಮಾಗಳು ಕನ್ನಡ ಪ್ರೇಕ್ಷಕರನ್ನ ಸೆಳೆಯುತ್ತಿವೆ. ನಮ್ಮ ರಾಜ್ಯಕ್ಕಷ್ಟೇ ಸೀಮಿತವಾಗಿದ್ದ ಕನ್ನಡ ಚಿತ್ರಗಳು ಸಾಗರದಾಚೆಗೂ ಪ್ರದರ್ಶನವಾಗಿ ಅಕ್ಕ-ಪಕ್ಕದ ಇಂಡಸ್ಟ್ರಿಯ ಕಲಾವಿರು ನಮ್ಮ ಸಿನಿಮಾಗಳಿಂದ ಸ್ಫೂರ್ತಿ ಪಡೆಯುವಂತಹ ಚಿತ್ರಗಳು ತೆರೆಗೆ ಬರ್ತಿದೆ.

ಟಾಲಿವುಡ್ ನಲ್ಲಿ ಅರ್ಜುನ್ ರೆಡ್ಡಿ ಅಂತಾನೇ ಫೇಮಸ್ ಆಗಿರೋ ನಟ ವಿಜಯ್ ದೇವರಕೊಂಡ ಅವರಿಗೆ ಕನ್ನಡ ಸಿನಿಮಾಗಳನ್ನ ನೋಡಿದ್ರೆ ಹೊಟ್ಟೆಕಿಚ್ಚಾಗುತ್ತಂತೆ. ಹಿಟ್ ಸಿನಿಮಾ ನೀಡಿದ್ರೂ ಕೂಡ ನಮ್ಮ ಇಂಡಸ್ಟ್ರಿಯಲ್ಲಿ ಬರೋ ಚಿತ್ರಗಳಲ್ಲಿ ಅಭಿನಯಿಸಬೇಕು ಅನ್ನೋ ಬಯಕೆ ಇದ್ಯಂತೆ. ಇತ್ತೀಚೆಗಷ್ಟೆ ರಿಲೀಸ್ ಆದ ಚಮಕ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ ವಿಜಯ್ ದೇವರಕೊಂಡ ಸ್ಯಾಂಡಲ್ ವುಡ್ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಏನ್ ಹೇಳಿದ್ರು ? ಮುಂದೆ ಓದಿ...

ಶಿವಣ್ಣನ ಸಿನಿಮಾ ಮೆಚ್ಚಿದ ನಟ

ನಟ ವಿಜಯ್ ದೇವರಕೊಂಡ ಮಫ್ತಿ ಸಿನಿಮಾದ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. "ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಅಭಿನಯಿಸಿದ್ರು ಮಫ್ತಿ ಚಿತ್ರದ ಟೀಸರ್ ನೋಡಿ ಹೊಟ್ಟೆಕಿಚ್ಚು ಆಗುತ್ತಿದೆ. ಮಫ್ತಿ ಅಂತಹ ಸಿನಿಮಾದಲ್ಲಿ ನಾನು ಅಭಿನಯಿಸಬೇಕು ಅನ್ನೋ ಆಸೆ ಇದೆ" ಎಂದಿದ್ದಾರೆ.

ಕನ್ನಡ ಸಿನಿಮಾಗಳಿಗೆ ಮೆಚ್ಚುಗೆ

ಚಮಕ್ ಸಿನಿಮಾದ ಆಡಿಯೋ ರಿಲೀಸ್ ಮಾಡಿದ ವಿಜಯ್ ದೇವರಕೊಂಡ ಮಫ್ತಿ ಜೊತೆಯಲ್ಲಿ ಚಮಕ್ ಸಿನಿಮಾದ ಟೀಸರ್ ಕೂಡ ಇಷ್ಟ ಆಯ್ತು ಎಂದಿದ್ದಾರೆ. "ಸಿಂಪಲ್ ಸುನಿ ಬಗ್ಗೆ ಈ ಹಿಂದೆಯೇ ತಿಳಿದುಕೊಂಡಿದ್ದೆ. ಚಮಕ್ ಸಿನಿಮಾದ ಟೀಸರ್ ನಲ್ಲಿರೋ ಕಂಟೆಂಟ್ ತುಂಬಾ ಚೆನ್ನಾಗಿದೆ" ಎಂದಿದ್ದಾರೆ.

ಕರ್ನಾಟಕ ಇಲ್ಲ ಅಂದ್ರೆ ಕ್ರಿಕೆಟ್ ಟೀಂ ಇಲ್ಲ

ವೇದಿಕೆಯ ಮೇಲೆ ಕರ್ನಾಟಕದ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, ''ಚಿಕ್ಕಂದಿನಿಂದಲೂ ಕರ್ನಾಟಕ ಅಂದ್ರೆ ಕ್ರಿಕೆಟ್, ವೆಂಕಟೇಶ್ ಪ್ರಸಾದ್, ಜಾವಗಲ್ ಶ್ರೀನಾಥ್, ರಾಹುಲ್ ದ್ರಾವಿಡ್ ಇವರುಗಳನ್ನ ನೋಡಿದಾಗೆಲ್ಲಾ ಕರ್ನಾಟಕ ನೆನಪಾಗುತ್ತಿತ್ತು. ಆನಂತರ ರಜನಿಕಾಂತ್, ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ ಇವರೆಲ್ಲರೂ ಕರ್ನಾಟಕದವರು ಅಂತ ಗೊತ್ತಾಗಿ ಇನ್ನು ಖುಷಿ ಆಗಿತ್ತು'' ಎಂದು ಹಳೆ ನೆನಪುಗಳನ್ನ ಹಂಚಿಕೊಂಡಿದ್ದಾರೆ.

ಟಾಲಿವುಡ್ ನಲ್ಲಿ ರಶ್ಮಿಕಾ ಚಮಕ್

ಟಾಲಿವುಡ್ ನಲ್ಲಿ ವಿಜಯ್ ದೇವರಕೊಂಡ ಅಭಿನಯದ ಚಿತ್ರದಲ್ಲಿ ರಷ್ಮಿಕಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಿಲ್ಲ. ಚಿತ್ರೀಕರಣದ ಕೊನೆಯ ಹಂತ ತಲುಪಿರೋ ರಶ್ಮಿಕಾ-ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ಮುಂದಿನವರ್ಷದಲ್ಲಿ ತೆರೆಗೆ ಬರಲಿದೆ.

English summary
Tollywood Actor Vijay Devarakonda of 'Arjun Reddy' fame praises Kannada Movie Mafthi teaser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada