ದುಬಾರಿ ಕಾರು ಕೊಂಡ ವಿನೋದ್ ಪ್ರಭಾಕರ್
ನಟ ವಿನೋದ್ ಪ್ರಭಾಕರ್ ಈಗ ದುಬಾರಿ ಕಾರಿನ ಒಡೆಯನಾಗಿದ್ದಾರೆ. ಹೊಸ ಕಾರು ಖರೀದಿ ಮಾಡಿರುವ ಅವರು ಈ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.
ಕಡು ನೀಲಿ ಬಣ್ಣದ Audi Q7 ಕಾರನ್ನು ವಿನೋದ್ ಪ್ರಭಾಕರ್ ಕೊಂಡುಕೊಂಡಿದ್ದಾರೆ. ಹೊಸ ಕಾರಿನ ಜೊತೆಗೆ ವಿನೋದ್ ಪ್ರಭಾಕರ್ ಹಾಗೂ ಅವರ ಪತ್ನಿ ಫೋಟೋ ತೆಗೆದುಕೊಂಡಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕಾರಿನ ಫೋಟೋವನ್ನು ಹಾಕಿರುವ ಅವರು 'ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬಂದಿದ್ದೆ' ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿಗಷ್ಟೆ ಸಿಕ್ಸ್ ಪ್ಯಾಕ್ ಮಾಡಿ ಗಮನ ಸೆಳೆದಿದ್ದ ವಿನೋದ್ ಪ್ರಭಾಕರ್ ಸದ್ಯ 'ಶ್ಯಾಡೋ', 'ರಗಡ್' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಬಿಜಿ ಇದ್ದಾರೆ. ಜೊತೆಗೆ ಪುರಿ ಜಗನ್ನಾಥ್ ಶಿಷ್ಯ ರವಿ ಗೌಡ ಸಿನಿಮಾದಲ್ಲಿ ಕೂಡ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
English summary
Kannada actor Vinod Prabhakar has bought new Audi Q7 car.


Click it and Unblock the Notifications