ಮದ್ವೆ ವಿಚಾರ ಮುಚ್ಚಿಟ್ಟಿದ್ಯಾಕೆ? ದಿಢೀರ್ ಫೋಟೋ ಬಂದಿದ್ದೇಗೆ?: ಯಶ್ ಡೈಲಾಗ್ ಹೇಳಿ ವಿನೋದ್ ರಾಜ್ ಹೇಳಿದ್ದಿಷ್ಟು

ನಟ ವಿನೋದ್‌ ರಾಜ್ ಫ್ಯಾಮಿಲಿ ಫೋಟೊವೊಂದು ಭಾರೀ ಸದ್ದು ಮಾಡ್ತಿದೆ. ನಿರ್ದೇಶಕ ಪ್ರಕಾಶ್ ರಾಜ್ ಮೇಹು ಈ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ವಿನೋದ್ ರಾಜ್‌ ಅವರಿಗೆ ಮದ್ವೆ ಆಗಿ ಮಗ ಇದ್ದಾನೆ. ಅದಕ್ಕೆ ಈ ಫೋಟೊ, ಮಗನ ಮಾರ್ಕ್ಸ್ ಕಾರ್ಡ್‌ ಸಾಕ್ಷಿ ಎಂದಿದ್ದರು. ಈ ಫೋಟೊ ಬಗ್ಗೆ ವಿನೋದ್ ರಾಜ್ ಈಗ ಮಾತನಾಡಿದ್ದಾರೆ.

ಪ್ರಕಾಶ್ ರಾಜು ಮೇಹ ಅವರ ಪ್ರಶ್ನೆಗೆ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಉತ್ತರಿಸಿದ್ದಾರೆ. ಸಿನಿವುಡ್ ಯೂಟ್ಯೂಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿನೋದ್ ರಾಜ್‌ ತಾವು ಮದುವೆ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಸ್ವತಃ ಲೀಲಾವತಿ ನನ್ನ ಮಗನ ಮದುವೆಯನ್ನು ತಿರುಪತಿಯಲ್ಲಿ ಮಾಡಿದ್ದೆ. ಭಾರೀ ಆಡಂಬರದಿಂದ ಮಾಡಿರಲಿಲ್ಲ. ಅದಕ್ಕೆ ಎಲ್ಲೂ ಹೇಳೋಕೆ ಹೋಗಿರಲಿಲ್ಲ ಎಂದಿದ್ದರು. ಅವರ ಹೇಳಿಕೆ ಭಾರೀ ವೈರಲ್ ಆಗಿತ್ತು.

Actor Vinod Raj Finally Reacts on his secret marriage and Viral Family Photo

ಇಷ್ಟು ವರ್ಷಗಳ ನಂತರ ವಿನೋದ್ ರಾಜ್ ಫ್ಯಾಮಿಲಿ ಫೋಟೊ ಹೇಗೆ ಹೊರ ಬಂತು ಎನ್ನುವ ಅನುಮಾನ ಮೂಡುವುದು ಸಹಜ. ಈ ಪ್ರಶ್ನೆಗೆ ಅದೇ ಸಂದರ್ಶನದ ಮತ್ತೊಂದು ವಿಡಿಯೋ ತುಣುಕಿನಲ್ಲಿ ನಟ ವಿನೋದ್ ರಾಜ್ ಮಾತನಾಡಿದ್ದಾರೆ. ಜೊತೆಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನೋಡಿ ಸ್ವಾಮಿ ಅವ್ರು ಇರೋದು ಹಾಗೆ ಎನ್ನುತ್ತಿದ್ಧಾರೆ. ನಾನು ನಮ್ಮ ತಾಯಿ ಇರೋದು ಹೀಗೆ. ನಿಮ್ಮ ಪಂಚಾಯ್ತಿ ಮಾತುಗಳನ್ನು ದಯವಿಟ್ಟು ಅಳೆದು ಮಾತಾಡಿ. ನಮಗೆ ಕನ್ನಡದ ಮೇಲೆ ಅಭಿಮಾನ ಇದೆ. ಕನ್ನಡ ನಾಡು, ನುಡಿಗಾಗಿ ಹೋರಾಡಿದವರ ಮೇಲೆ ಅಭಿಮಾನ ಇದೆ"

ಆ ಫೋಟೊ ಹೇಗೆ ಹೊರಬಂತು ಎನ್ನುವ ಪ್ರಶ್ನೆಗೆ "ನಮಗೆ ಗೊತ್ತೇಯಿಲ್ಲ. ಅದು ಹೇಗೆ ಬಂತು ಅಂತ. ಒಳಗಿಂದ ಒಳಗೆ. ನಮ್ಮ ಯಶ್‌ ಅವರ ಚಿತ್ರದ್ದು ಒಂದು ಡೈಲಾಗ್ ಇದೆ. ಅದು ನೆನಪಾಗ್ತಿದೆ. ದುಷ್ಮನ್ ಕಿದರ್ ಹೈ ಅಂದ್ರೆ ಊರ್ತುಂಬಾ ಹೈ. ಅವರು ಮಾತನಾಡಿದಾಗಲೂ ಹೀಗೆ ಹೇಳಿದ್ರು. ಯಾರು ಜೀವನ ಮಾಡಲೇಬಾರ್ದಾ? ಕೆಲವರು ಇರ್ತಾರೆ. ನಿಂದನೆ ಮಾಡ್ಬೇಕು ಅಂತ. ತೊಂದರೆ ಆಗಿದ್ದರೆ ಮಾತನಾಡಿ. ನೀವು ಏನು ಕಂಡು ಹಿಡಿತ್ತಿದ್ದೀರಾ?"

ಯಾಕೆ ಇಷ್ಟು ದಿನ ಮದುವೆ ವಿಚಾರ ಬಹಿರಂಗ ಪಡಿಸಲಿಲ್ಲ ಎನ್ನುವ ಪ್ರಶ್ನೆಗೆ "ಈ ವಿಚಾರ ರಿವೀಲ್ ಮಾಡೋಕೆ ನನ್ನ ತಾಯಿಯವರು, ಕಷ್ಟದಲ್ಲಿ ಇದನ್ನೆಲ್ಲಾ ಮಾಡಿಕೊಂಡಿದ್ದು. ವಿನೋದ್ ರಾಜ್‌ಗೆ ಕರೆದು ಕರೆದು ಸಿನಿಮಾ ಅವಕಾಶ ಕೊಟ್ಟವರು ಯಾರು? ಎಷ್ಟು ಸಿನಿಮಾ ಮಾಡಿದ್ಧಾನೆ? ವಿನೋದ್ ರಾಜ್? ಒಂದು 25 ಸಿನಿಮಾ ಮಾಡಿರಬಹುದು. ಅವಕಾಶ ಯಾಕೆ ಕೊಡಲಿಲ್ಲ ಎಂದು ಯಾರು ಕೇಳಲಿಲ್ಲ. ಅವರು ಕೊಡಲಿಲ್ಲ ಅಂತ ನನಗೆ ಬೇಸರ ಇಲ್ಲ"

Actor Vinod Raj Finally Reacts on his secret marriage and Viral Family Photo

"ಯಾವ ದುಡ್ಡು ಇಟ್ಟುಕೊಂಡು ತಾಯಿಯವರು ಜೀವನ ಮಾಡುತ್ತಾರೆ. ಮದುವೆ ಮಾಡಿಲ್ವಾ, ಮಾಡಿಲ್ವಾ ಅಂತ ಹೇಳ್ತಾರೆ. ಈಗಲಾದರೂ ಅರ್ಥ ಆಯ್ತಾ ನಮ್ಮ ತಾಯಿಯವರು ಏನು ಅನ್ನುವಂಥದ್ದು? ಅವ್ರು ಹೇಳಿದಂತೆ ನಾನು ನಡೆಯುತ್ತೇನೆ. ಅವ್ರು ಸುಮ್ಮನಿರಲು ಹೇಳಿದ್ದಾರೆ. ಇವತ್ತು ನಾನು ಮಾತನಾಡುತ್ತಿದ್ದೇನೆ. ನಮ್ಮಿಂದ ಯಾರಿಗಾದರೂ ನೋವಾಗಿದ್ಯಾ? ಹಾಗಾದರೆ ಅದಕ್ಕೆ ನಾವು ತಲೆ ಇಡಲ್ಲ."

"ನಾನು, ನಮ್ಮ ಅಮ್ಮ ತಪ್ಪಾದ ಉತ್ತರ ಎಂದೂ ಕೊಡಲ್ಲ. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನಿಮಗೆ ಹೇಳ್ತಿದ್ದೀನಿ, ನಿಮ್ಮ ಮನಸ್ಥಿತಿ ಸರಿ ಮಾಡಿಕೊಳ್ಳಿ. ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ" ಎಂದು ನಟ ವಿನೋದ್ ರಾಜ್ ಆರೋಪ ಮಾಡಿದವರಿಗೆ ಉತ್ತರಿಸಿದ್ದಾರೆ.

More from Filmibeat

English summary
Actor Vinod Raj Finally Reacts on his secret marriage and Viral Family Photo. He Says I don't know who leaked the family photo. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X