For Quick Alerts
  ALLOW NOTIFICATIONS  
  For Daily Alerts

  ವಿನೋದ್ ರಾಜ್ ಬಳಿ 1 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳರು

  |
  ಛೇ..!ವಿನೋದ್ ಕಷ್ಟ ಪಟ್ಟು ದುಡಿದ ದುಡ್ಡು ಕಳ್ಳನ ಪಾಲಾಯ್ತು..! | Filmibeat Kannada

  ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಇಂಡಸ್ ಇಂಡ್ ಬ್ಯಾಂಕ್ ಎದುರುಗಡೆ ನಟ ವಿನೋದ್ ರಾಜ್ ಬಳಿ ಕಳ್ಳರ ಕೈಚಳಕ ತೋರಿಸಿದ್ದಾರೆ.

  ವಿನೋದ್ ರಾಜ್‌ ಅವರು ಶುಕ್ರವಾರ ತಮ್ಮ ತೋಟದ ಸಿಬ್ಬಂಧಿಗಳಿಗೆ ಸಂಬಳ ನೀಡಲು, ಬ್ಯಾಂಕ್‌ ನಿಂದ ಒಂದು ಲಕ್ಷ ಹಣ ಡ್ರಾ ಮಾಡಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಣ ಕದ್ದು ಪರಾರಿಯಾಗಿದ್ದಾರೆ.

  ಈ ಬಗ್ಗೆ ಮಾತನಾಡಿದ ವಿನೋದ್ ರಾಜ್ ''ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ಬಂದೆ. ರಸ್ತೆಯ ಮಧ್ಯೆದಲ್ಲಿ ಕಾರು ಪಂಚರ್ ಆಯ್ತು. ಆ ವೇಳೆ ಇಬ್ಬರು ಹುಡುಗರು ಬಂದರು. ಮೊದಲು 16 ವರ್ಷದ ಹುಡುಗ ಬಂದ. ನಾನು ನಿಮ್ಮ ಅಭಿಮಾನಿ ಅಂತ ಮಾತಾಡಿಕೊಂಡು ಇದ್ದ. ಕಾರಿನ ಟೈರ್ ಬದಲಾವಣೆ ಮಾಡುವ ಅಂತರದಲ್ಲಿ ಹಣ ತಗೊಂಡು ಹೋಗಿದ್ದಾನೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ನಟಿ -ನಿರ್ಮಾಪಕಿ ಅನಿತಾ ರಾಣಿ ಪರ್ಸ್ ಗೆ ಕನ್ನ ಹಾಕಿದ ಕಳ್ಳರು ನಟಿ -ನಿರ್ಮಾಪಕಿ ಅನಿತಾ ರಾಣಿ ಪರ್ಸ್ ಗೆ ಕನ್ನ ಹಾಕಿದ ಕಳ್ಳರು

  ಈ ಘಟನೆಯಿಂದ ಸಹಜವಾಗಿ ಆತಂಕಕ್ಕೆ ಒಳಗಾದ ನಟ ವಿನೋದ್ ರಾಜ್ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  ಈ ಘಟನೆ ನಡೆದಾಗ ವಿನೋದ್ ರಾಜ್ ಜೊತೆ ರಾಮಾನುಜ ಎಂಬುವರು ಇದ್ದರು. ಮತ್ತು ಕಾರು ಪಂಚರ್ ಆದಮೇಲೆ ಮತ್ತೊಬ್ಬರನ್ನ ಫೋನ್ ಮಾಡಿ ಕರೆಸಿಕೊಂಡಿದ್ದರು. ಈ ವೇಳೆ ಟೈರ್ ಬದಲಾಯಿಸಲು ಮೂವರು ವಾಹನದಿಂದ ಕೆಳಗೆ ಇಳಿದಾಗ, ಕಳ್ಳರು ಈ ಕೃತ್ಯವೆಸಗಿದ್ದಾರೆ.

  English summary
  Kannada actor vinod raj has lost 1 lakh amount at near nelamagala. he was registered complaint in nelamagala police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X