ಸರ್ಕಾರದ 50-50 ನಿಯಮದ ವಿರುದ್ಧ ನಟ ವಿನೋದ್ ರಾಜ್ ಗರಂ!

ಸದ್ಯ ಕೊರೊನಾ ಪ್ರಕರಣಗಳು ಹೆಚ್ಚು- ಕಡಿಮೆ ಆಗುತ್ತಿವೆ. ಇದರಿಂಗಾಗಿ ಸರ್ಕಾರ ಒಂದಷ್ಟು ನಿಯಮಾವಳಿಗಳನ್ನು ಜಾರಿಯಲ್ಲಿ ಇಟ್ಟಿದೆ. ವೀಕೆಂಡ್ ಲಾಕ್‌ ಡೌನ್ ತೆಗೆದರೂ ಕೂಡ, ನೈಟ್ ಕರ್ಫ್ಯೂ ಮತ್ತು 50-50 ರೂಲ್ಸ್ ಕೂಡ ಜಾರಿಯಲ್ಲಿ ಇದೆ. ಇದರಿಂದ ಎಲ್ಲಾ ರಂಗದ ಹಾಗೆ ಸಿನಿಮಾರಂಗಕ್ಕೂ ತೊಂದರೆ ಉಂಟಾಗುತ್ತಿದೆ.

ಸರ್ಕಾರದ ಈ 50-50 ನಿಯಮಕ್ಕೆ ನಟ ವಿನೋದ್ ರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮಂದಿರದಲ್ಲಿ ಕೂತು ಪ್ರೇಕ್ಷಕರು ಮೊದಲಿನ ಹಾಗೆ ಈಗ ಸಿನಿಮಾ ನೋಡುವ ಹಾಗೆ ಇಲ್ಲ. ಚಿತ್ರಮಂದಿರಗಳಿಗೆ ಶೇ. 50 ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಲಾಗಿದೆ.

ಈ ನಿಯಮ ಸಿನಿಮಾಗಳ ಗಳಿಕೆ ಮೇಲೆ ಪರಿಣಾಮ ಬೀರುವ ಸತ್ಯವನ್ನು ತಳ್ಳಿ ಹಾಕುವ ಹಾಗಿಲ್ಲ. ಇದು ಸಿನಿಮಾ ನಿರ್ಮಾಪಕರಿಗೆ ಹೊರೆ ಆಗಲಿದೆ. ಹಾಗಾಗಿ ಈ ನಿಯಮವನ್ನು ಸಡಿಲಗೊಳಿಸುವಂತೆ ನಟ ವಿನೋದ್ ರಾಜ್ ಮಾತನಾಡಿದ್ದಾರೆ. ಇದರಿಂದ ನಿರ್ಮಾಪಕರಿಗೆ ಎಷ್ಟು ತೊಂದರೆ ಆಗಲಿದೆ ಎನ್ನುವುದನ್ನು ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ.

Actor Vinod Raj Oppose Karnataka Government 50-50 Rule
ವಿಡಿಯೋದಲ್ಲಿ ವಿನೋದ್‌ ರಾಜ್‌ ಅವರು ಹೇಳಿದ್ದು ಹೀಗೆ " ನಮಸ್ಕಾರ... ಚಿತ್ರಮಂದಿರಗಳಿಗೆ ಶೇ. 50 ರಷ್ಟು ಮಾತ್ರ ಅವಕಾಶ ನೀಡಿರುವ ಬಗ್ಗೆ ಕೇಳಿ ನನಗೆ ಶಾಕ್ ಆಯ್ತು. ಸಿನಿಮಾದವರಿಗೆ ಎಲ್ಲಾ ಸಮಯದಲ್ಲೂ ಅನ್ಯಾಯ ಆಗಿದೆ. ನಾವು ಭೂಮಿ ಮೇಲೆ ಬಂಡವಾಳ ಹಾಕುತ್ತಿಲ್ಲ. ಇದು ಕಲೆ ಮೇಲೆ ಹಾಕುವ ಬಂಡವಾಳ. ಅಡುಗೆ ಮಾಡಿ ಬಿಸಿಯಾಗಿ ತಿಂದರೆ ರುಚಿ. ಚಿತ್ರಗಳು ಹಾಗೆ. ಆದರೆ ಈಗ ಎಷ್ಟೋ ದೊಡ್ಡ, ದೊಡ್ಡ ಸಿನಿಮಾಗಳು ದೊಡ್ಡ ಬಂಡವಾಳ ಹಾಕಿವೆ. ಸಿನಿಮಾ ಮುಗಿದು 2,3 ವರ್ಷಗಳೇ ಆಗುತ್ತಿದೆ.

ಆದರೆ ಸಿನಿಮಾ ರಿಲೀಸ್ ಮಾಡಲು ಸಾಧ್ಯ ಆಗುತ್ತಿಲ್ಲ. ಈಗ ರಿಲೀಸ್ ಆದರೂ ಕೂಡ 50% ಜನ ಮಾತ್ರ ನೋಡ್ತಾರೆ. ಆಮೇಲೆ ಯಾವುದೋ ಪ್ಲ್ಯಾಟ್ ಫಾರ್ಮ್‌ನಲ್ಲಿ ಸಿನಿಮಾ ಬರುತ್ತೆ ಅಂತಾರೆ. ಆದರೆ ಬಾಕ್ಸಾಫೀಸ್ ಅಂತ ನಾವು ಯಾಕೆ ಹೇಳ್ತಿವಿ ಅಂದರೆ, ಮೊದಲ ಹತ್ತು ದಿನಗಳ ಕಲೆಕ್ಷನ್‌ನಲ್ಲಿ ನಿರ್ಮಾಪಕನ ಖರ್ಚು ಒಂದು ಹಂತಕ್ಕೆ ಸರಿದೂಗುತ್ತೆ ಅಂತ. ಆದರೆ ಈ 50 ಭಾಗ ಜನ ಮಾತ್ರ ಸಿನಿಮಾ ನೋಡಿದರೆ ಅದು ಸಾಧ್ಯ ಆಗಲ್ಲ. ಎಲ್ಲಿ ಹೋದ್ರು ನಿರ್ದೇಶಕ, ನಿರ್ಮಾಪಕ, ಕಲಾವಿದರಿಗೆ ಕಷ್ಟ. ತುಂಬಾನೇ ಲಾಸ್ ಆಗ್ತಿದೆ.

ರೈತರಿಗೆ ವಿಮೆ ಇದೆ, ಫ್ಯಾಕ್ಟರಿ ಸುಟ್ಟರೆ ಇನ್ಸುರೆನ್ಸ್ ಇದೆ. ಆದರೆ ಸಿನಿಮಾ ಸುಟ್ಟರೂ ಏನಿಲ್ಲ, ನಿರ್ಮಾಪಕ ಬೀದಿಗೆ ಬಂದರು ಇಲ್ಲ, ಕಲಾವಿದ ಹಾಳಾದರು ಏನೂ ಇಲ್ಲ. ಇವತ್ತು ಎಲ್ಲರೂ ನೋಡಿ ನಗುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಯಿಂದ ಮನಸ್ಸಿಗೆ ನೋವಾಗುತ್ತದೆ." ಎಂದು ವಿನೋದ್ ರಾಜ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಈ ಮೂಲಕ ಸರ್ಕಾರ ಚಿತ್ರಮಂದಿರಗಳಿಗೆ ವಿಧಿಸಿರುವ ಶೇ.50 ಆಕ್ಯೂಪೆನ್ಸಿ ನಿಯಮವನ್ನು ತೆರವು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಹಾಗೆ ಇದರಿಂದ ಸಿನಿಮಾದವರಿಗೆ ಹೇಗೆ ಕಷ್ಟ, ನಷ್ಟ ಆಗಲಿದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.

More from Filmibeat

English summary
Actor Vinod Raj Oppose Karnataka Government 50-50 Rule: Share His Views In A Video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X