»   » 'ರಾಜಕುಮಾರ'ನ ಅರಮನೆಗೆ ಆಗಮಿಸಿದ್ದ ತಮಿಳು ನಟ ವಿಶಾಲ್

'ರಾಜಕುಮಾರ'ನ ಅರಮನೆಗೆ ಆಗಮಿಸಿದ್ದ ತಮಿಳು ನಟ ವಿಶಾಲ್

Posted By:
Subscribe to Filmibeat Kannada

ಕನ್ನಡದ ರಾಜರತ್ನ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ಕಾಲಿವುಡ್ ನಟ ವಿಶಾಲ್ ಭೇಟಿ ಕೊಟ್ಟಿದ್ದಾರೆ. ನಿನ್ನೆ ರಾತ್ರಿ ವಿಶಾಲ್ ಸದಾಶಿವನಗರದ ಪುನೀತ್ ಮನೆಗೆ ಆಗಮಿಸಿದ್ದರು.

ಪುನೀತ್ 'ಅಂಜನೀಪುತ್ರ' ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡ ನಟ ಬಾಲಕೃಷ್ಣ

ಬೆಂಗಳೂರಿನಲ್ಲಿ ಒಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ವಿಶಾಲ್ ಕಾರ್ಯಕ್ರಮದ ಬಳಿಕ ಪುನೀತ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯಾದ ವೇಳೆ ಪಾರ್ವತಮ್ಮ ಅವರ ನಿಧನಕ್ಕೆ ವಿಶಾಲ್ ಸಂತಾಪ ಸೂಚಿಸಿದ್ದಾರೆ. ಜೊತೆಗೆ 'ರಾಜಕುಮಾರ' ಸಿನಿಮಾದ 100ನೇ ದಿನಕ್ಕೆ ಪುನೀತ್ ಅವರಿಗೆ ಶುಭಕೋರಿದ್ದಾರೆ. ಅಂದಹಾಗೆ, ಇದೇ ವೇಳೆ ಪುನೀತ್ ರಾಜ್ ಕುಮಾರ್, ವಿಶಾಲ್ ಮತ್ತು ರಾಜ್ ಕುಟುಂಬದ ಆಪ್ತರಾದ ಪ್ರೇಮ್ ಒಂದು ಫೋಟೋ ತೆಗೆದುಕೊಂಡಿದ್ದಾರೆ.

Actor 'Vishal' visits Puneth Rajkumar's House

ಇತ್ತೀಚಿಗಷ್ಟೆ ಟಾಲಿವುಡ್ ನಟ ಬಾಲಕೃಷ್ಣ ಪುನೀತ್ ಅವರ 'ಅಂಜನೀಪುತ್ರ' ಶೂಟಿಂಗ್ ಸೆಟ್ ಗೆ ಆಗಮಿಸಿದ್ದರು. ಈಗ ಕಾಲಿವುಡ್ ನಟ ಕೂಡ ಪುನೀತ್ ಅವರನ್ನು ಭೇಟಿ ಆಗಿದ್ದಾರೆ.

English summary
Kollywood Actor 'Vishal' visits Kannada Actor Puneth Rajkumar's House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada