ರಾಕಿಂಗ್ ಫ್ಯಾಮಿಲಿ: ಇಬ್ಬರು ಮುದ್ದು ಮಕ್ಕಳ ಜೊತೆ ಯಶ್-ರಾಧಿಕಾ ಫೋಟೋ ವೈರಲ್

ಸ್ಯಾಂಡಲ್ ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಮುದ್ದು ಮಗನ ಫೋಟೋವನ್ನು ಮೊದಲ ಬಾರಿಗೆ ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಯಶ್ ಮತ್ತು ರಾಧಿಕಾ ಮಗ ಹೇಗಿದ್ದಾನೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೀಗ ಮುದ್ದು ಮಗನ ಫೋಟೋ ಶೇರ್ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಸದಾ ಮಗಳ ಫೋಟೋ ಹಂಚಿಕೊಳ್ಳುತ್ತಿದ್ದ ರಾಕಿಂಗ್ ದಂಪತಿಗೆ ಮಗನ ಫೋಟೋ ಶೇರ್ ಮಾಡುವಂತೆ ಅಭಿಮಾನಿಗಳು ಕೇಳಿ ಕೊಳ್ಳುತ್ತಿದ್ದರು. ಇದೀಗ ಮಗನ ಫೋಟೋ ಜೊತೆಗೆ ಇಡೀ ಫ್ಯಾಮಿಲಿ ಫೋಟೋ ಸಹ ರಿವೀಲ್ ಆಗಿದೆ. ಯಶ್-ರಾಧಿಕಾ ಫ್ಯಾಮಿಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದೆ ಓದಿ..

ಮುದ್ದು ಮಕ್ಕಳ ಜೊತೆ ರಾಕಿಂಗ್ ದಂಪತಿ

ಮುದ್ದು ಮಕ್ಕಳ ಜೊತೆ ರಾಕಿಂಗ್ ದಂಪತಿ

ರಾಕಿಂಗ್ ಸ್ಟಾರ್ ಯಶ್ ದಂಪತಿ ಮಗನ ಫೋಟೋವನ್ನು ರಿವೀಲ್ ಮಾಡುವ ಜೊತೆಗೆ ಫ್ಯಾಮಿಲಿ ಫೋಟೋವನ್ನು ಶೇರ್ ಮಾಡಿದ್ದಾರೆ. ಇಬ್ಬರು ಮಕ್ಕಳನ್ನು ಕೈಯಲ್ಲಿ ಹಿಡಿದು ಯಶ್ ದಂಪತಿ ನಗೆ ಬೀರಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗನಿಗೆ 6 ತಿಂಗಳು ತುಂಬಿದ ಸಂಭ್ರಮ

ಮಗನಿಗೆ 6 ತಿಂಗಳು ತುಂಬಿದ ಸಂಭ್ರಮ

ಯಶ್ ಮತ್ತು ರಾಧಿಕಾ ಪುತ್ರನಿಗೆ 6 ತಿಂಗಳು ತುಂಬಿದೆ. 6 ತಿಂಗಳ ಸಂಭ್ರಮವನ್ನು ರಾಕಿಂಗ್ ದಂಪತಿ ಮನೆಯಲ್ಲಿಯೆ ಆಚರಿಸಿದ್ದಾರೆ. ಇದೇ ಖುಷಿಯಲ್ಲಿ ಮಗನನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಮುದ್ದು ಮಗನ ಫೋಟೋವನ್ನು ಛಾಯಾಗ್ರಾಹಕ ಅಮೃತ ಸಮಂತ್ ಸೆರೆಹಿಡಿದ್ದಾರೆ.

ಮಗನನ್ನು ಪರಿಚಯಿಸಿ ರಾಧಿಕ ಹೇಳಿದ್ದೇನು?

ಮಗನನ್ನು ಪರಿಚಯಿಸಿ ರಾಧಿಕ ಹೇಳಿದ್ದೇನು?

"ನನ್ನ ಕಣ್ಣಿನ ಸೇಬು, ನಮ್ಮ ಕುಟುಂಬದ ಮಳೆಬಿಲ್ಲು ನಮ್ಮ ಮುದ್ದಿನ ಜೂನಿಯರ್ ಗೆ ನಿಮ್ಮ ಎಲ್ಲರ ಪ್ರೀತಿ ನೀಡಿ" ಎಂದು ರಾಧಿಕಾ ಪಂಡಿತ್ ಕೇಳಿಕೊಂಡಿದ್ದಾರೆ.

ಮುದ್ದು ಮಗನ ಬಗ್ಗೆ ಯಶ್ ಮಾತು

ಮುದ್ದು ಮಗನ ಬಗ್ಗೆ ಯಶ್ ಮಾತು

"ನನ್ನ ಚಿಕ್ಕ ಸ್ನೇಹಿತನಿಗೆ ಹಲೋ ಹೇಳಿ. ನಿಮ್ಮ ಪ್ರೀತಿ, ಆಶೀರ್ವಾದ, ಹಾರೈಕೆ ಸದಾ ಈ ನನ್ನ ಪುಟ್ಟ ಕಂದನ ಮೇಲಿರಲಿ" ಎಂದು ನಟ ಯಶ್ ಮುದ್ದು ಮಗನ ಬಗ್ಗೆ ಬರೆದುಕೊಂಡಿದ್ದಾರೆ.

ಕುತೂಹಲ ಮೂಡಿಸಿದೆ ಮಗನ ಹೆಸರು

ಕುತೂಹಲ ಮೂಡಿಸಿದೆ ಮಗನ ಹೆಸರು

ಸದ್ಯ ಮಗನ ಫೋಟೋ ರಿವೀಲ್ ಆಗಿದೆ, ಇನ್ನೂ ಪುತ್ರನಿಗೆ ಏನು ಹೆಸರಿಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮಗಳಿಗೆ ಐರಾ ಎಂದು ನಾಮಕರಣ ಮಾಡಿರುವ ಯಶ್ ದಂಪತಿ, ಮಗನಿಗೆ ಏನು ಹೆಸರಿಡಲಿದ್ದಾರೆ ಎನ್ನುವುದು ಕಾದು ನೋಡಬೇಕು.

More from Filmibeat

English summary
Actor yash and Radhika Pandith's son photo revealed. Yash Family photo viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X