'ನಮ್ಮ ಮನೆಯ ದೊಡ್ಡ ಮಗು' ಎಂದು ಪತ್ನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಯಶ್
ಸ್ಯಾಂಡಲ್ ವುಡ್ ನ ಸಿಂಡ್ರೇಲ್ಲಾ ರಾಧಿಕಾ ಪಂಡಿತ್ ಇತ್ತೀಚಿಗೆ ಹುಟ್ಟುಹಬ್ಬವನ್ನು ಕುಟುಂಬದವರ ಜೊತೆ ಸರಳವಾರಿ ಆಚರಿಸಿಕೊಂಡಿದ್ದಾರೆ. ಈ ಬಾರಿ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ರಾಧಿಕಾ ಅಭಿಮಾನಿಗಳಲ್ಲಿ ಹೇಳಿ ಕ್ಷೇಮ ಕೇಳಿದ್ದರು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಅಭಿಮಾನಿಗಳ ಪ್ರೀತಿಯ ವಿಶ್ ಜೊತೆಗೆ ಪತಿ ಯಶ್ ಕೂಡ ಕ್ಯೂಟ್ ವಿಶ್ ಮಾಡಿದ್ದಾರೆ. ಪತಿ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಫೋಟೋ ಶೇರ್ ಮಾಡಿರುವ ಯಶ್, ಶುಭಾಶಯ ತಿಳಿಸಿದ್ದಾರೆ.
'ನಮ್ಮ ಮನೆಯ ದೊಡ್ಡ ಮಗುಗೆ ಹುಟ್ಟುಹಬ್ಬದ ಶುಭಾಶಯ' ಎಂದು ಪ್ರೀತಿಯಿಂದ ವಿಶ್ ತಿಳಿಸಿದ್ದಾರೆ. ರಾಧಿಕಾ ಎರಡು ವರ್ಷಗಳಿಂದ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಮುಂದಿನ ವರ್ಷ ಖಂಡಿತವಾಗಿ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಪ್ರೋಮಿಸ್ ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿರುವ ರಾಧಿಕಾ "ನಿಮಗೆಲ್ಲರಿಗೂ ಗೊತ್ತು, ನನಗೆ ಎರಡು ಪುಟಾಣಿ ಮಕ್ಕಳಿದ್ದಾರೆ. ಹೀಗಾಗಿ ಈ ವರ್ಷ ಸೆಲೆಬ್ರೇಟ್ ಮಾಡುವುದು ಸ್ವಲ್ಪ ಕಷ್ಟ ಆಗಬಹುದು. ಅದಕ್ಕಾಗಿ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ, ಬೈಕೋಬೇಡಿ. ನಿಮ್ಮೆಲ್ಲ ಸಂದೇಶಗಳು, ನೀವು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಶುಭಹಾರೈಕೆಗಳೆಲ್ಲ ನನ್ನ ಗಮನಕ್ಕೆ ಬರುತ್ತಿವೆ. ಪ್ರತಿ ಮೆಸೇಜ್‌ಗೂ ರಿಪ್ಲೈ ಮಾಡ್ತೀನಿ" ಎಂದು ಅಭಿಮಾನಿಗಳನ್ನು ಸಂತೈಸಿದ್ದಾರೆ.
ಇನ್ನು ಯಶ್ ಕೂಡ ಹುಟ್ಟಹಬ್ಬ ಆಚರಿಸುವುದಿಲ್ಲ ಎಂದು ಹೇಳಿದ್ದರು."ಪಂಡಿತ್ ಹುಟ್ಟುಹಬ್ಬ ಆಚರಣೆ ಮಾಡುವುದಿಲ್ಲ. ಇಬ್ಬರು ಮಕ್ಕಳಿದ್ದಾರೆ. ಕೊರೊನಾ ವೈರಸ್ ಇರುವುದರಿಂದ ತುಂಬ ಜನ ಸೇರಬಾರದು. ಗುಂಪಾಗಿ ಜನ ಸೇರಲಿಕ್ಕೆ ಆಗಲ್ಲ. ಹಾಗಾಗಿ ಸೆಲೆಬ್ರೇಟ್ ಮಾಡುವುದಿಲ್ಲ. ಸಂಜೆ ನಾವೆ ಒಟ್ಟಿಗೆ ಸೇರುತ್ತೆವೆ. ಒಟ್ಟಿಗೆ ಸಮಯ ಕಳೆಯುತ್ತೇವೆ" ಎಂದು ಯಶ್ ಹೇಳಿದ್ದರು.


Click it and Unblock the Notifications











