For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ ಯಶ್

  |
  ನಿನ್ನೆ ಬೆಳಿಗ್ಗೆ ಫ್ಯಾನ್ಸ್ ಜೊತೆ ಇದ್ದ ಯಶ್ ರಾತ್ರಿ ಎಲ್ಲಿದ್ರು ನೋಡಿ. | YASH | BIRTHDAY | FILMIBEATKANNADA

  ಮಂಗಳವಾರ ರಾತ್ರಿ ಹಾಗೂ ಬುಧವಾರ ಮಧ್ಯಾಹ್ನದವರೆಗೆ ಅಭಿಮಾನಿಗಳಿಗಾಗಿ ಯಶ್ ತಮ್ಮ ದಿನವನ್ನು ಮೀಸಲು ಇಟ್ಟಿದ್ದರು. ತಮ್ಮ ಹುಟ್ಟುಹಬ್ಬಕ್ಕಾಗಿ ದೂರದ ಊರಿನಿಂದ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ್ದರು.

  ನಿನ್ನೆ (ಬುಧವಾರ) ಚಿತ್ರರಂಗದ ಸ್ನೇಹಿತರ ಜೊತೆಗೆ ಯಶ್ ಕಾಲ ಕಳೆದರು. ಯಶ್ ಆಯೋಜನೆ ಮಾಡಿದ್ದ ವಿಶೇಷ ಪಾರ್ಟಿಯಲ್ಲಿ ಅನೇಕ ಸ್ಟಾರ್ ಗಳು ಭಾಗಿಯಾಗಿದ್ದರು. ಪ್ರತಿ ವರ್ಷವೂ ಹುಟ್ಟುಹಬ್ಬದ ಸಂಜೆ ಯಶ್ ತಮ್ಮ ಚಿತ್ರರಂಗದ ಸ್ನೇಹಿತರನ್ನು ಭೇಟಿ ಮಾಡುತ್ತಾರೆ.

  ಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳುಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳು

  ಯಶ್ ರಿಗೆ 'ಗೂಗ್ಲಿ'ಯಂತಹ ಹಿಟ್ ಸಿನಿಮಾ ನೀಡಿದ್ದ ಪವನ್ ಒಡೆಯರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪವನ್ ಒಡೆಯರ್ ಪತ್ನಿ ಅಪೇಕ್ಷ ಪುರೋಹಿತ್ ಕೂಡ ಹಾಜರಿದ್ದರು. ಯಶ್ ರೊಂದಿಗಿನ ಫೋಟೋವನ್ನು ಸೋ‍ಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪವನ್ ಶುಭಾಶಯ ತಿಳಿಸಿದ್ದಾರೆ.

  ಯಶ್ ಹುಟ್ಟುಹಬ್ಬ: ಒಂದು ಹಿಟ್ ಆಯ್ತು, ಮತ್ತೊಂದು ಫ್ಲಾಪ್ ಆಯ್ತು ಯಶ್ ಹುಟ್ಟುಹಬ್ಬ: ಒಂದು ಹಿಟ್ ಆಯ್ತು, ಮತ್ತೊಂದು ಫ್ಲಾಪ್ ಆಯ್ತು

  ಇದರೊಂದಿಗೆ ಆರ್ ಜೆ ಪ್ರದೀಪ್, ನಟಿ ಶ್ರುತಿ ಪುತ್ರಿ ಗೌರಿ ಕೂಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರ್ತ್ ಡೇ ಪಾರ್ಟಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಿಗಂತ್, ಧನಂಜಯ್, ಅರುಣ್ ಸಾಗರ್, ಕಾರ್ತಿಕ್ ಗೌಡ ಹಾಗೂ ಯಶ್ ಜೊತೆಗೆ ಕೆಲಸ ಮಾಡಿದ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

  ಯಶ್ ಹುಟ್ಟುಹಬ್ಬ ಈ ವರ್ಷ ದಾಖಲೆಗೆ ಕಾರಣವಾಗಿದೆ. 5 ಸಾವಿರ ಕೆಜಿಯ ಕೇಕ್ ಹಾಗೂ 216 ಅಡಿಯ ಕಟ್ ಔಟ್ ವಿಶ್ವ ದಾಖಲೆ ನಿರ್ಮಿಸಿದೆ.

  English summary
  Kannada actor Yash celebrated his birthday with industry friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X