For Quick Alerts
  ALLOW NOTIFICATIONS  
  For Daily Alerts

  ಯಶ್ ಹುಟ್ಟುಹಬ್ಬ: ಒಂದು ಹಿಟ್ ಆಯ್ತು, ಮತ್ತೊಂದು ಫ್ಲಾಪ್ ಆಯ್ತು

  |

  'ಕೆಜಿಎಫ್' ಕಿಂಗ್ ಯಶ್ ದೊಡ್ಡ ಮಟ್ಟದಲ್ಲಿ ಈ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.

  ಯಶ್ ಹುಟ್ಟುಹಬ್ಬ ಪ್ರಮುಖ ಹೈಲೈಟ್ ಕಟ್ ಔಟ್ ಹಾಗೂ ಕೇಕ್. 216 ಅಡಿಯ ಕಟ್ ಔಟ್ ಹಾಗೂ 5 ಸಾವಿರ ಕೆಜಿಯ ಕೇಕ್ ಮಾಡಬೇಕು ಎನ್ನುವುದು ಅಭಿಮಾನಿಗಳ ಗುರಿಯಾಗಿತ್ತು. ಅದಕ್ಕಾಗಿ ಅನೇಕ ದಿನಗಳಿಂದ ತಯಾರಿ ನಡೆದಿತ್ತು.

  ಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳುಒಂದು ವರ್ಷದ ರಾಕಿ ಭಾಯ್ ಜೀವನದಲ್ಲಿ ನಡೆದ 10 ಪ್ರಮುಖ ಘಟನೆಗಳು

  ಎಷ್ಟೋ ಜನರ ಶ್ರಮ ಕೇಕ್ ಹಾಗೂ ಕಟ್ ಔಟ್ ತಯಾರಿಕೆಯ ಮೇಲೆ ಇತ್ತು. ಆದರೆ, ಈ ಪೈಕಿ ಕೇಕ್ ಕಾರ್ಯಕ್ರಮ ಯಶಸ್ವಿಯಾದರೆ, ಕಟ್ ಔಟ್ ನಿರಾಸೆ ಮೂಡಿಸಿದೆ. ಯಶ್ ಹುಟ್ಟುಹಬ್ಬದಲ್ಲಿ ಇದೊಂದು ಘಟನೆ ಬೇಸರ ಮೂಡಿಸಿದೆ.

  ಕೆಲವೇ ನಿಮಿಷ ನಿಂತ ಕಟ್ ಔಟ್

  ಕೆಲವೇ ನಿಮಿಷ ನಿಂತ ಕಟ್ ಔಟ್

  ಯಶ್ ಕಟ್ ಔಟ್ 216 ಅಡಿ ಮಾಡುವ ತಯಾರಿ ನಡೆದಿತ್ತು. ಮುಕ್ಕಾಲು ಭಾಗ ಕಟ್ ಔಟ್ ನಿಲ್ಲಿಸಲಾಗಿತ್ತು. ಕಷ್ಟಪಟ್ಟು ಮುಖದ ಭಾಗ ಕೂಡ ಸೇರಿಸಿದರು. ಆದರೆ, ಅದು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಿಲ್ಲ. ಕಟ್ ಔಟ್ ಪೂರ್ಣವಾಗಿ ನಿಂತ ಕೆಲವೇ ಕ್ಷಣಗಳಲ್ಲಿ ಅವರ ಮೇಲಿನ ಭಾಗ ಕೆಳಗೆ ಬಿತ್ತು.

  ಭಾರಿ ಗಾಳಿಗೆ ಮುರಿದು ಬಿದ್ದ ಕಟ್ ಔಟ್ ಭಾಗ

  ಭಾರಿ ಗಾಳಿಗೆ ಮುರಿದು ಬಿದ್ದ ಕಟ್ ಔಟ್ ಭಾಗ

  ನಿನ್ನೆ (ಜನವರಿ 7) ರಾತ್ರಿ 12 ಗಂಟೆ ಹೊತ್ತಿಗೆ ಕೆಳಗೆ ಬಿದ್ದ ಕಟ್ ಔಟ್ ಮುಖಭಾಗವನ್ನು ಹಾಕುವ ಕೆಲಸ ನಡೆಯುತ್ತಿತ್ತು. ಆ ವೇಳೆ ವಿಪರೀತ ಗಾಳಿ ಇತ್ತು. ಕ್ರೈನ್ ಸಹಾಯದಿಂದ ಮುಖಭಾಗವನ್ನು ಮೇಲೆ ಎತ್ತಿತ್ತಿದ್ದರು. ಆದರೆ, ಭಾರಿ ಗಾಳಿಗೆ ಕಟ್ ಔಟ್ ಭಾಗ ಮುರಿದು ಬಿತ್ತು. ಈ ಕ್ಷಣ ಎಲ್ಲರೂ ಮೌನವಾಗಿ ಬಿಟ್ಟರು.

  'ಮೈ ನೇಮ್ ಇಸ್ ಕಿರಾತಕ' ಚಿತ್ರ ಆಗುತ್ತಾ? ಅಥವಾ ನಿಂತು ಹೋಯ್ತಾ?'ಮೈ ನೇಮ್ ಇಸ್ ಕಿರಾತಕ' ಚಿತ್ರ ಆಗುತ್ತಾ? ಅಥವಾ ನಿಂತು ಹೋಯ್ತಾ?

  ಪೊಲೀಸರು ಅನುಮತಿ ನೀಡಲಿಲ್ಲ

  ಪೊಲೀಸರು ಅನುಮತಿ ನೀಡಲಿಲ್ಲ

  ರಾತ್ರಿ ವೇಳೆ ಗಾಳಿ ಇದ್ದ ಕಾರಣ ಕಟ್ ಔಟ್ ನಿಯಂತ್ರಣ ತಪ್ಪಿದೆ. ನಿಧಾನವಾಗಿ ಕಟ್ ಔಟ್ ವಾಲುತ್ತಿರುವುದು ಕಂಡು ಬಂದಿದೆ. ಹೀಗಾಗಿ ಇದನ್ನು ಅಲ್ಲಿಗೆ ಕೈ ಬಿಡಲು ಪೊಲೀಸರು ಸೂಚಿಸಿದ್ದಾರೆ. ಅಷ್ಟೊಂದು ಎತ್ತರದಲ್ಲಿ ಈ ಸಾಹಸ ಮಾಡುವುದು ಅಪಾಯ ಎಂದು ಪೊಲೀಸರು ಆಕ್ಷೇಪಿಸಿದ್ದಾರೆ. ಯಶ್ ಕೂಡ ಕಟ್ ಔಟ್ ಕೆಲಸ ನಿಲ್ಲಿಸಿ ಎಂದು ಹೇಳಿದರು.

  ಗಿನ್ನಿಸ್ ರೆಕಾರ್ಡ್ ಆದ ಕೇಕ್

  ಗಿನ್ನಿಸ್ ರೆಕಾರ್ಡ್ ಆದ ಕೇಕ್

  ಕಟ್ ಔಟ್ ಕಾರ್ಯ ಪೂರ್ಣ ಆಗದೆ ಇದ್ದರೂ, ಕೇಕ್ ದಾಖಲೆ ಮಾಡಿದೆ. 5 ಸಾವಿರ ಕೆಜಿಯ ಕೇಕ್ ತಯಾರಿ ಮಾಡಿಸುವ ಮೂಲಕ ರಾಕಿಂಗ್ ಅಭಿಮಾನಿಗಳು ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಜೊತೆಗೆ ಬಂದ ಯಶ್ ಮಧ್ಯರಾತ್ರಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

  ಅಪ್ಪ ಯಶ್ ಗೆ ಬರ್ತಡೇ ಸರ್ಪ್ರೈಸ್: ಅಮ್ಮನೊಂದಿಗೆ ಕೇಕ್ ತಯಾರಿಸಿದ ಪುಟಾಣಿ ಆಯ್ರಾಅಪ್ಪ ಯಶ್ ಗೆ ಬರ್ತಡೇ ಸರ್ಪ್ರೈಸ್: ಅಮ್ಮನೊಂದಿಗೆ ಕೇಕ್ ತಯಾರಿಸಿದ ಪುಟಾಣಿ ಆಯ್ರಾ

  English summary
  Kannada actor Yash cutout failed to create a record.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X