For Quick Alerts
  ALLOW NOTIFICATIONS  
  For Daily Alerts

  ಬಿಸಿಲನ್ನು ಹೇಗೆ ನೋಡಬೇಕೆಂದು ಯಶ್ ಮಗಳು ತೋರಿಸುತ್ತಾಳೆ ನೋಡಿ

  |
  Yash's daughter Ayra is already an expression queen | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಮಗಳು ಐರಾ ಬಿಸಿಲನ್ನು ನೋಡುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಐರಾ ಕ್ಯೂಟ್ ಎಕ್ಸ್ ಪ್ರೆಶನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚಿಗೆ ರಾಧಿಕಾ ಪಂಡಿತ್ ಮಗಳ ಮುದ್ದಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಈ ವಿಡಿಯೋದಲ್ಲಿ ಮುದ್ದಾದ ಐರಾಗೆ ಬಿಸಿಲನ್ನು ಹೇಗೆ ನೋಡುವುದು ಎಂದು ಕೇಳುತ್ತಾರೆ. ಐರಾ ಮುದ್ದು ಮುಖದಲ್ಲಿ ಎಕ್ಸ್ ಪ್ರೆಶನ್ ಕೂಡುತ್ತಾ ಬಿಸಿಲು ನೋಡುವುದನ್ನು ತೋರಿಸುತ್ತಾಳೆ. ಈ ವಿಡಿಯೋವನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಅಜೇಯ್ ರಾವ್ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿ ಭಾಯ್ಅಜೇಯ್ ರಾವ್ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿ ಭಾಯ್

  ಐರಾ ಎಕ್ಸ್ ಪ್ರೆಶನ್ ವಿಡಿಯೋಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ. ರಾಧಿಕಾ ಪಂಡಿತ್ ಆಗಾಗ ಮಗಳ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಪ್ರತಿ ಫೋಟೋ ಮತ್ತು ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ.

  ರಾಧಿಕಾ ಎರಡನೆ ಮಗುವಿಗೆ ಜನ್ಮ ನೀಡಿದ ಸಮಯದಲ್ಲಿ ಐರಾ ಮಾಧ್ಯಮದ ಮುಂದೆ ಕೈ ಬೀಸುತ್ತ ಹಾಯ್ ಹೇಳಿದ ವಿಡಿಯೋ ಕೂಡ ವೈರಲ್ ಆಗಿದೆ. ಸಖತ್ ಕ್ಯೂಟ್ ಆಗಿರುವ ಐರಾ ಎಕ್ಸ್ ಪ್ರೆಶನ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ಈ ವಿಡಿಯೋ ಕೆಳಗೆ ರಾಧಿಕಾ "ಬಿಸಿಲು ಹೇಗೆ ನೋಡೋದು ಎಂದು ಐರಾ ತೋರಿಸುತ್ತಾಳೆ" ಎಂದು ಬರೆದುಕೊಂಡಿದ್ದಾರೆ.

  ಐರಾ ಮುದ್ದಾದ ವಿಡಿಯೋಗೆ ಅಭಿಮಾನಿಗಳ ಜೊತೆಗೆ ನಟಿಮಣಿಯರು ಹಾರ್ಟ್ ಇಮೋಜಿ ಕಳುಹಿಸುತ್ತಿದ್ದಾರೆ. ರಾಧಿಕಾ ಪಂಡಿತ್ ಸದ್ಯ ಎರಡನೆ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಎರಡನೆ ಮಗುವಿಗೆ ಏನು ಹೆಸರಿಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  Read more about: yash ಯಶ್
  English summary
  Kannada actor Yash daughter Ira shows with cute expression how to see Bisilu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X