KGF 2: ದೆಹಲಿಯಲ್ಲಿ 'ಯಶ್' ಮುತ್ತಿಕೊಂಡ ಅಭಿಮಾನಿಗಳು!
ಕನ್ನಡದ ನಟ ಯಶ್ ರಾಕಿ ಭಾಯ್ ಅಂತಲೇ ಪರಿಚಯ. ಅಷ್ಟರ ಮಟ್ಟಿಗೆ 'ಕೆಜಿಎಫ್ 2' ಚಿತ್ರದ ಹವಾ ಸೃಷ್ಟಿಯಾಗಿದೆ. ಆ ಕ್ರೇಜ್ 'ಕೆಜಿಎಫ್ 2' ಚಿತ್ರಕ್ಕೂ ಮುಂದುವರೆದಿದೆ. ಚಿತ್ರದ ಬಗ್ಗೆ ದೇಶಾದ್ಯಂತ ನಿರೀಕ್ಷೆ ಇರುವ ಕಾರಣಕ್ಕೆ ಚಿತ್ರತಂಡ ಅಬ್ಬರದ ಪ್ರಚಾರ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಸದ್ಯ ದೆಹಲಿಗೆ ಚಿತ್ರತಂಡ ಹಾರಿದೆ. ದೆಹಲಿಯಲ್ಲಿ ಚಿತ್ರತಂಡ ಸುದ್ದಿಗೋಷ್ಟಿ ಮಾಡುವ ಮೂಲಕ ಅಲ್ಲಿಯೂ ಚಿತ್ರದ ಬಗ್ಗೆ ಒಂದಷ್ಟು ವರ್ಚಸ್ಸು ಹೆಚ್ಚಿಸಲಿದೆ.
'ಕೆಜಿಎಫ್ 2' ಚಿತ್ರದ ನಂತರ ಯಶ್‌ಗೆ ಫ್ಯಾನ್ ಬೇಸ್ ಹೆಚ್ಚಾಗಿದೆ. ಎಲ್ಲೇ ಹೋದರು ಒಂದಷ್ಟು ಜನ ಯಶ್ ಸುತ್ತಲೂ ಸುತ್ತಿಕೊಳ್ಳುತ್ತಾರೆ. ಸದ್ಯ ಯಶ್ ದೆಹಲಿಯಲ್ಲಿ 'ಕೆಜಿಎಫ್ 2' ಚಿತ್ರಕ್ಕಾಗಿ ದೆಹಲಿಗೆ ಭೇಟಿ ನೀಡಿದ್ದಾರೆ. ಅಲ್ಲಿಯೂ ಯಶ್‌ಗೆ ಅಭಿಮಾನಿಗಳು ಮುತ್ತಿಕೊಂಡಿದ್ದಾರೆ.
ಸಾಲು, ಸಾಲು ಪ್ರೆಸ್‌ಮೀಟ್‌ಗಳಲ್ಲಿ ಯಶ್ ಮತ್ತು 'ಕೆಜಿಎಫ್ 2' ಚಿತ್ರತಂಡ ಭಾಗಿ ಆಗಬೇಕಿತ್ತು. ಈ ವೇಳೆ ಹೋಟೆಲ್ ಮುಂದೆ ನೂರಾರು ಯಶ್ ಅಭಿಮಾನಿಗಳು ಕಾಯುತ್ತಾ ಇದ್ದರು. ಹಾಗಾಗಿ ಯಶ್ ಬಿಡುವು ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಗಳ ಜೊತೆಗೆ ಫೋಟೊ ತೆಗೆಸಿಕೊಂಡು, ಆಟೋಗ್ರಾಫ್ ಕೂಡ ಕೊಟ್ಟಿದ್ದಾರೆ. ಯಶ್‌ಗಾಗಿ ಕಾಯುತ್ತಾ ಇದ್ದ ಅಭಿಮಾನಿಗಳು ಫುಲ್ ದಿಲ್ ಖುಷ್ ಆಗಿದ್ದಾರೆ.
Recommended Video


ಮುಂಬೈನಲ್ಲೂ ಯಶ್‌ಗೆ ಅಭಿಮಾನಿ ಬಳಗ ಇದೆ. ಯಶ್ ಯಾವಾಗ ಮುಂಬೈಗೆ ಹೋದರು ಕೂಡ ಅಲ್ಲಿ ಅವರನ್ನು ನೋಡಲು, ಫೋಟೊ ತೆಗೆಸಿಕೊಳ್ಳಲು, ಸಾಕಷ್ಟು ಅಭಿಮಾನಿಗಳು ಕಾಯುತ್ತಾರೆ. ಯಶ್ ಸಿಕ್ಕರೆ ಸಾಕು ಅವರ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಬಿಡುತ್ತಾರೆ. ಯಶ್ ಮುಂಬೈ ವಿಡಿಯೋಗಳು ಕೂಡ ಈ ಹಿಂದೆ ಹಲವು ಬಾರಿ ವೈರಲ್ ಆಗಿದ್ದವು. ಈಗ ದೆಹಲಿಯಲ್ಲಿ ಯಶ್ ಹವಾ ಮುಂದುವರೆದಿದೆ.

ಮತ್ತೊಂದು ಕಡೆ 'ಕೆಜಿಎಫ್ 2' ಚಿತ್ರದ ಮೇಲೆ ಬಾಲಿವುಡ್‌ನಲ್ಲಿ, ದಕ್ಷಿಣ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಚಿತ್ರದ ಟ್ರೈಲರ್ ಹೆಚ್ಚಿನ ವೀಕ್ಷಣೆ ಪಡೆದು ದಾಖಲೆ ಮಾಡಿದೆ. ಕನ್ನಡದಲ್ಲಿ ಟ್ರೈಲರ್ ಪಡೆದುಕೊಂಡಿದ್ದಕ್ಕಿಂತಲೂ, ಹಿಂದಿಯಲ್ಲಿ ದುಪ್ಪಟ್ಟು ವೀವ್ಸ್ ಪಡೆದುಕೊಂಡಿದೆ. ಹಾಗಾಗಿ 'ಕೆಜಿಎಫ್ 2' ಹಿಂದಿ ಕಲೆಕ್ಷನ್ ಬಾಕ್ಸಾಫೀಸ್ ಶೇಕ್ ಮಾಡಲಿದ್ದು, ಹೊಸ ದಾಖಲೆ ಬರೆಯಲಿದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.


Click it and Unblock the Notifications











