For Quick Alerts
  ALLOW NOTIFICATIONS  
  For Daily Alerts

  ಇಟಲಿ, ಬಾಂಗ್ಲಾ ಫ್ಯಾನ್ಸ್ ಕಂಡು ಖುಷಿಯಲ್ಲಿ ತೇಲಾಡಿದ ರಾಕಿಂಗ್ ಸ್ಟಾರ್ ಯಶ್!

  |

  ನಟ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ನಟ ಯಶ್‌ಗೆ ಇಂಡಿಯಾದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಸಿನಿ ಪರದೆಯ ಮೇಲೆ ಯಶ್ ನೋಡಿ ಮೆಚ್ಚಿಕೊಂಡ ಅಭಿಮಾನಿಗಳು ಒಮ್ಮೆಯಾದರೂ ಭೇಟಿ ಆಗ್ಬೇಕು ಅಂತ ಹಾತೊರೆಯುತ್ತಾರೆ.

  ಹೀಗೆ ತಮ್ಮ ನೆಚ್ಚಿನ ಸ್ಟಾರ್ ನಟ ಅಚಾನಕ್ಕಾಗಿ ಸಿಕ್ಕರೆ ಅಭಿಮಾನಿಗಳಿಗೆ ಅದು ದೊಡ್ಡ ಹಬ್ಬವೇ ಸರಿ. ಇದು ಅಭಿಮಾನಿಗಳಿಗೆ ಮಾತ್ರವಲ್ಲ, ಅಪರೂಪದ ಅಭಿಮಾನಿಗಳನ್ನು ಭೇಟಿ ಮಾಡಿದ ಸಂಭ್ರಮ ರಾಕಿಂಗ್ ಸ್ಟಾರ್‌ ಯಶ್‌ಗೂ ಇದೆ. ಅಭಿಮಾನಿಗಳ ಬಗ್ಗೆ ಯಶ್ ಖುಷಿ ಹಂಚಿಕೊಂಡಿದ್ದಾರೆ.

  'ಕೆಜಿಎಫ್ 2' ಚಿತ್ರದಲ್ಲಿ ನಟಿಸಬೇಕಿತ್ತು ಈ ಬ್ಯುಟಿಫುಲ್ ಬೆಡಗಿ!'ಕೆಜಿಎಫ್ 2' ಚಿತ್ರದಲ್ಲಿ ನಟಿಸಬೇಕಿತ್ತು ಈ ಬ್ಯುಟಿಫುಲ್ ಬೆಡಗಿ!

  ಹೌದು, ಇದೀಗ ಯಶ್ ಮತ್ತು ಅವರ ಅಭಿಮಾನಿಗಳ ಬಗ್ಗೆ ಮಾತನಾಡೋಕೆ ಕಾರಣ ಯಶ್ ಹೊರದೇಶದಲ್ಲಿ ತಮ್ಮ ಅಪರೂಪದ ಅಭಿಮಾನಿಗಳನ್ನು ಭೇಟಿಯಾಗಿರುವುದು. ಈ ಕುರಿತು ವಿಶೇಷವಾದ ಫೋಟೋವನ್ನು ಹಂಚಿಕೊಂಡಿರುವ ಯಶ್ ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ ಅದು ಏನು ಎನ್ನುವುದನ್ನು ಮುಂದೆ ಓದಿ...

  ವಿಶ್ವ ಸುತ್ತುತ್ತಿರುವ ಯಶ್-ರಾಧಿಕಾ!

  ವಿಶ್ವ ಸುತ್ತುತ್ತಿರುವ ಯಶ್-ರಾಧಿಕಾ!

  ಸದ್ಯಕ್ಕೆ ನಟ ಯಶ್ ಮತ್ತು ರಾಧಿಕಾ ಪಂಡಿತ್ ಪ್ರವಾಸವನ್ನು ಕೈಗೊಂಡಿದ್ದಾರೆ. ವರ್ಡ್ಲ್ ಟೂರ್ ಹೋಗಿರುವ ಈ ಜೋಡಿ ಹಲವು ದೇಶಗಳನ್ನು ಸುತ್ತುತ್ತಾ ಎಂಜಾಯ್ ಮಾಡ್ತಿದೆ. ಈಗಾಗಲೇ ತಮ್ಮ ಪ್ರವಾಸದ ಒಂದಷ್ಟು ವಿಶೇಷ ಕ್ಷಣಗಳನ್ನು ಎಲ್ಲರೊಂದಿಗೂ ಕೂಡ ಫೋಟೋಗಳ ಮೂಲಕ ಹಂಚಿಕೊಂಡಿದೆ ಈ ಜೋಡಿ. ಯಶ್ ಮತ್ತು ರಾಧಿಕಾ ತಮ್ಮ ಸಿಂಪಲ್ ಸ್ಟೈಲಿಶ್ ಲುಕ್‌ನಲ್ಲಿ ದೇಶ ದೇಶಗಳನ್ನು ಸುತ್ತುತ್ತಾ ಮಜಾ ಮಾಡುತ್ತಿದ್ದಾರೆ. ಈ ನಡುವೆ ಸಮಯ ಮಾಡಿಕೊಂಡು ತಮ್ಮ ಅಭಿಮಾನಿಗಳ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

  ಯೂರೋಪಿನಲ್ಲಿ ರಾಕಿಂಗ್ ಜೋಡಿ; ಅಭಿಮಾನಿಗಳಿಗೆ ಅದೊಂದೇ ಚಿಂತೆ!ಯೂರೋಪಿನಲ್ಲಿ ರಾಕಿಂಗ್ ಜೋಡಿ; ಅಭಿಮಾನಿಗಳಿಗೆ ಅದೊಂದೇ ಚಿಂತೆ!

  ಯಶ್ ವಿದೇಶಿ ಫ್ಯಾನ್ಸ್!

  ಯಶ್ ವಿದೇಶಿ ಫ್ಯಾನ್ಸ್!

  ನಟ ಯಶ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಬಹಳ ವಿಶೇಷವಾಗಿದೆ. ಯಶ್ ಮತ್ತು ರಾಧಿಕಾ ಪಂಡಿತ್ ಜೊತೆಗೆ ಒಂದಷ್ಟು ಜನರ ಗುಂಪು ಈ ಫೋಟೋದಲ್ಲಿ ಕಾಣಿಸಿಕೊಂಡಿದೆ. ಈ ಗುಂಪಿನಲ್ಲಿ ಇರುವವರು ಮತ್ತ್ಯಾರು ಅಲ್ಲ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು. ಇವರೆಲ್ಲಾ ಹೊರದೇಶಗಳಲ್ಲಿ ಇರುವ ಯಶ್ ಅವರ ಅಭಿಮಾನಿಗಳು. ಅಲ್ಲಿ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿರುವ ಖುಷಿಯನ್ನು ನಟ ಯಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಇಟಲಿ ಬಾಂಗ್ಲಾದೇಶದ ಅಭಿಮಾನಿಗಳು!

  ಅಭಿಮಾನಿಗಳ ಜೊತೆಗಿನ ಫೋಟೋ ಯಶ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಇರುವವರು ಇಟಲಿ ಮತ್ತು ಬಾಂಗ್ಲಾದೇಶದ ಅಭಿಮಾನಿಗಳು. ಅಭಿಮಾನಿಗಳ ಜೊತೆಗೆ ತೆಗೆದ ಫೋಟೋ ಹಂಚಿಕೊಂಡಿರುವ ಯಶ್, ವಿಶೇಷವಾದ ಸಂದೇಶವನ್ನು ಬರೆದುಕೊಂಡಿದ್ದಾರೆ. "ಗಡಿಯ ಆಚೆಗೂ ನನ್ನ ಮೇಲಿನ ನಿಮ್ಮ ಪ್ರೀತಿ ಪಸರಿಸಿದೆ. ತೆರೆದ ತೋಳುಗಳಿಂದ ನಾನು ಇದನ್ನು ಬಾಚಿಕೊಳ್ಳುತ್ತೇನೆ. ಇಟಲಿ ಮತ್ತು ಬಾಂಗ್ಲಾದೇಶದ ಈ ಅಭಿಮಾನಿಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ಈ ಪೋಸ್ಟನ್ನು ಹಂಚಿಕೊಳ್ಳಲು ಕಾರಣ ಇದು ಎಂದೆಂದಿಗೂ ವಿಶೇಷವಾಗಿ ಉಳಿಯಲಿ ಎನ್ನುವುದು" ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ ನಟ ಯಶ್.

  'Y19' ಬಗ್ಗೆ ಸುದ್ದಿ ಇಲ್ಲ!

  'Y19' ಬಗ್ಗೆ ಸುದ್ದಿ ಇಲ್ಲ!

  ಸದ್ಯಕ್ಕೆ ರಾಕಿಂಗ್ ಸ್ಟಾರ್ ಯಶ್ ಹೆಸರು ಹೇಳುತ್ತಲೇ ಅವರ ಮುಂದಿನ ಚಿತ್ರದ ಬಗ್ಗೆ ಚರ್ಚೆ ಶುರುವಾಗಿ ಬಿಡುತ್ತದೆ. ಅಷ್ಟರ ಮಟ್ಟಿಗೆ ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ದಟ್ಟವಾಗಿ ಹಬ್ಬಿ ಬಿಟ್ಟಿದೆ. Y19 ಸಿನಿಮಾದ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ ಈ ಬಗ್ಗೆ ಸದ್ಯಕ್ಕೆ ಯಶ್ ಯಾವ ಸುಳಿವು ಕೊಟ್ಟಿಲ್ಲ. ಎಲ್ಲವೂ ಅಂತಿಮವಾದ ಬಳಿಕ ಯಶ್ ಮುಂದಿನ ಸಿನಿಮಾ ಅಧಿಕೃತವಾಗಿ ಪ್ರಕಟವಾಗಲಿದೆ. ಸದ್ಯಕ್ಕಂತೂ ರಾಕಿಂಗ್ ಸ್ಟಾರ್ ಯಶ್, ಹಾಲಿಡೇ ಮೂಡ್‌ನಲ್ಲಿ ಇದ್ದಾರೆ. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಟೂರ್ ಎಂಜಾಯ್ ಮಾಡುತ್ತಿದ್ದಾರೆ.

  Recommended Video

  Vikrant Rona Day 2 Collection | 2ನೇ ದಿನದ ಗಳಿಕೆ ಹೇಗಿದೆ . | Kiccha Sudeep Filmibeat Kannada
  English summary
  Actor Yash Met His Italy And Bangladesh Fans In His World Tour With Wife Radhika Pandit, Know More,
  Friday, July 29, 2022, 20:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X